ಮೇಘನಾ ರಾಜ್ ಮಗನ ಹೆಸರು ಫಿಕ್ಸ್ ಆಗಿದೆ.. ಏನದು ರಹಸ್ಯಕಾರಿ ಹೆಸರು ಗೊತ್ತಾ...? - Karnataka's Best News Portal

ಚಿರಂಜೀವಿ ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬದಲ್ಲಿ ಹಲವು ದಿನದ ಬಳಿಕ ಸಂತೋಷ ಸಂಭ್ರಮ ಮನೆ ಮಾಡಿದೆ ಅದಕ್ಕೆ ಕಾರಣವೂ ಕೂಡ ಇದೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮುದ್ದಾದ ಕಂದಮ್ಮನಿಗೆ ಹೊಸ ವರ್ಷದಲ್ಲಿ ನಾಮಕರಣ ಮಾಡಲು ಕಾಲ ಕೂಡಿ ಬಂದಿದೆ. ಜೂನಿಯರ್ ಚಿರಂಜೀವಿ ಸರ್ಜಾಗೆ ನಾಮಕರಣ ಯಾವಾಗ ಮಗುವಿನ ಹೆಸರೇನು ಮುಂತಾದ ವಿಚಾರಗಳನ್ನು ಇಂದು ನಿಮಗೆ ತಿಳಿಸುತ್ತೇವೆ. ಒಂದು ತಿಂಗಳ ಹಿಂದಷ್ಟೇ ಮಗುವಿನ ತೊಟ್ಟಿಲು ಕಾರ್ಯಕ್ರಮ ಮಾಡಿದರು ಈಗ ಇದೇ ಹೊಸ ವರ್ಷದಲ್ಲಿ ಮಗುವಿನ ನಾಮಕರಣ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಗುವಿಗೆ ಮುದ್ದಾದ ಹೆಸರನ್ನು ಕೂಡ ಫಿಕ್ಸ್ ಮಾಡಿದರೆ ಮಗುವಿನ ಹೆಸರು ತುಂಬಾನೇ ವಿಶೇಷವಾಗಿ ಇಡಲು ಯೋಚಿಸಿದ್ದಾರೆ ಹಾಗೆಯೇ ಹೆಸರನ್ನು ಕೂಡ ಫಿಕ್ಸ್ ಮಾಡಿದ್ದಾರೆ.

ಈ ಹಿಂದೆ ಮಗು ಹುಟ್ಟಿದ ದಿನವೇ ಮಾತನಾಡಿದ ಸುಂದರ್ ರಾಜ್ ಅವರು ಮಗುವಿನ ನಾಮಕರಣ ಮೂರು ತಿಂಗಳ ನಂತರ ಮಾಡುತ್ತೇವೆ ಎಂದಿದ್ದರು. ಧ್ರುವ ಸರ್ಜಾ ಅವರು ಕೂಡ ಅಣ್ಣನ ಮಗುವಿಗೆ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಕೂಡ ಖರೀದಿ ಮಾಡಿದ್ದರು ಈಗ ಅದೇ ತೊಟ್ಟಿಲಿನಲ್ಲಿ ನಾಮಕರಣ ಮಾಡಲು ಚಿರಂಜೀವಿ ಸರ್ಜಾ ಕುಟುಂಬ ನಿರ್ಧರಿಸಿದ್ದಾರೆ. ಮಗುವಿಗೆ ಈಗಾಗಲೇ ಹೆಸರು ಫಿಕ್ಸ್ ಮಾಡಿದ್ದು ಚಿರಂಜೀವಿ ಸರ್ಜನ್ ಹೆಸರಿನಿಂದ ಮೊದಲ ಅಕ್ಷರ ಮತ್ತು ಮೇಘನಾ ರಾಜ್ ಅವರ ಹೆಸರಿನಿಂದ ಕೊನೆಯ ಅಕ್ಷರದಿಂದ ತೆಗೆದುಕೊಂಡು ಚಿಂತನ್ ಅಥವಾ ಚಿರಂತನ್ ಎಂಬ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಫೆಬ್ರವರಿಯಲ್ಲಿ ನಾಮಕರಣ ಮಾಡುವುದು ನಿಶ್ಚಯವಾಗಿದೆ.

By admin

Leave a Reply

Your email address will not be published. Required fields are marked *