ನಮ್ಮ ದೇಶದಲ್ಲಿ ಅತಿ ಹೆಚ್ಚು ಜನ ಉಪಯೋಗ ಮಾಡುತ್ತಿರುವಂತಹ ಅಪ್ಲಿಕೇಶನ್ ಯಾವುದು ಅಂದರೆ ಅದು ವಾಟ್ಸಪ್. ಆದರೆ ಈ ವಾಟ್ಸಪ್ ನಲ್ಲಿ ಎಷ್ಟೋ ವೈರಸ್ ಗಳು ಮತ್ತು ಎಷ್ಟೋ ಸ್ಲ್ಯಾಮ್ ಗಳು ಆಗುತ್ತದೆ. ಎಷ್ಟೋ ವೈರಸ್ ಗಳು ಮತ್ತು ಸ್ಕ್ಯಾಮ್ ಗಳು ಈ ಒಂದು ವಾಟ್ಸಾಪ್ ನಿಂದ ಬರುತ್ತದೆ. ರೀಸೆಂಟ್ ಆಗಿ ಒಂದು ಡೇಂಜರಸ್ ಮಾಲ್ವೇರ್ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಹರಿದಾಡುತ್ತಿದೆ ಇದು ಯಾವ ರೀತಿ ತೊಂದರೆ ಕೊಡುತ್ತದೆ ಅದರಿಂದ ನಾವು ಯಾವ ರೀತಿ ಸುರಕ್ಷಿತವಾಗಿ ಇರಬೇಕು ಅದನ್ನು ಯಾವ ರೀತಿ ನಮ್ಮ ಮೊಬೈಲ್ ಗಳನ್ನು ಸುರಕ್ಷಿತ ಮಾಡಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ನಿಮಗೆ ಗೊತ್ತಿಲ್ಲದೆ ನಿಮ್ಮ ನಂಬರ್ ನಿಂದ ಮೆಸೇಜ್ ಮಾಡಬಹುದು ಅಥವಾ ನಿಮ್ಮ ಡಾಟವನ್ನು ಕೂಡ ಕದಿಯಬಹುದು.

ಹಾಗಾಗಿ ಇದರ ಬಗ್ಗೆ ನೀವು ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಈ ಮಾಲ್ವೇರ್ ಹೇಗೆ ಕೆಲಸ ಮಾಡುತ್ತದೆ ಅಂದರೆ ನಿಮ್ಮ ಸ್ನೇಹಿತರೊಬ್ಬರ ಮೊಬೈಲ್ ಗೆ ಈಗಾಗಲೇ ಈ ವೈರಸ್ ಬಂದಿರುತ್ತದೆ ಅಂದುಕೊಳ್ಳಿ. ಆಗ ನೀವು ಯಾವಾಗಲಾದರೂ ನಿಮ್ಮ ಸ್ನೇಹಿತರಿಗೆ ಮೆಸೇಜ್ ಕಳಿಸಿದರು ಆ ಮೆಸೇಜ್ ಅವರಿಗೆ ಹೋದ ತಕ್ಷಣ ಅವರ ಫೋನ್ ನಿಂದ ನಿಮಗೆ ಆಟೋಮೆಟಿಕ್ ಆಗಿ ನಿಮ್ಮ ಫ್ರೆಂಡಿಗೆ ಗೊತ್ತಿಲ್ಲದೇನೆ ನಿಮಗೆ ಮೆಸೇಜ್ ಬರುತ್ತದೆ. ಅದೇನೆಂದರೆ ಉದಾಹರಣೆಗೆ ನಿಮಗೆ ಉಚಿತ ಲ್ಯಾಪ್ಟಾಪ್ ಸಿಗುತ್ತದೆ, ಅಥವಾ ಐಫೋನ್ ಸಿಗುತ್ತದೆ, ಈ ರೀತಿ ಆಮಿಷಗಳು ಇರುವಂತಹ ಮೆಸೇಜ್ ಗಳು ಬರುತ್ತದೆ. ಅದರ ಕೆಳಗೆ ಒಂದು ಒಂದು ಲಿಂಕ್ ಕೂಡ ಇರುತ್ತದೆ ನೀವು ಈ ಒಂದು ಲಿಂಕ್ ನೀವು ಓಪನ್ ಮಾಡಿದರೆ ನಿಮ್ಮ ಮೊಬೈಲ್ ಗೆ ಕೂಡಲೇ ವೈರಸ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

By admin

Leave a Reply

Your email address will not be published. Required fields are marked *