ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ ಅಥವಾ ತಿಂದಂತಹ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗದಿದ್ದರೆ ಅಥವಾ ನಾವು ಸೇವಿಸಿದ ಆಹಾರದಲ್ಲಿ ನಾರಿನ ಅಂಶ ಹೆಚ್ಚಾಗಿ ಇಲ್ಲದಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆಯು ಉಂಟಾಗುತ್ತದೆ. ದೇಹದಲ್ಲಿ ಎಲ್ಲಾ ಅಂಗಗಳು ನಮಗೆ ಮುಖ್ಯವಾಗಿರುತ್ತದೆ ಅದರಲ್ಲಿಯೂ ಕೂಡ ಹೊಟ್ಟೆಯ ಅಂಗವು ಆರೋಗ್ಯವಾಗಿ ಇದ್ದರೆ ನಾವು ಆರೋಗ್ಯವಾಗಿ ಇರುತ್ತೆವೆ ಅದು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ ನಾವು ಹಲವಾರು ರೀತಿಯ ರೋಗಗಳಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ನಮ್ಮ ಹೊಟ್ಟೆಯಲ್ಲಿ ತೊಂದರೆ ಉಂಟಾದರೆ ರೋಗಗಳ ಸರಮಾಲೆಗೆ ನಾವು ತುತ್ತಾಗಬೇಕಾಗುತ್ತದೆ. ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಾವು ಕಡೆಗಣಿಸಬಾರದು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ ಅಂತಹ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆ ಮಾಡುವ ಅದ್ಭುತವಾದ ಮನೆಮದ್ದನ್ನು ಇಂದು ನಿಮಗೆ ತಿಳಿಸುತ್ತೇವೆ.
ಈ ಒಂದು ಮನೆಮದ್ದಿಗೆ ಬೇಕಾಗುವ ಪದಾರ್ಥಗಳು ಸೋಂಪು, ಜೀರಿಗೆ, ಪುದೀನ ಹಾಗೂ ಜೇನುತುಪ್ಪ. ಮೊದಲಿಗೆ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ. ಈ ನೀರು ಕುದಿ ಬಂದ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಸೊಂಪು ಹಾಕಿ ಎರಡು ನಿಮಿಷ ಕುದಿಸಿ. ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಧನಿಯಾ ಹಾಗೂ ಒಂದು ಟೇಬಲ್ ಸ್ಪೂನ್ ಜೀರಿಗೆ ಮತ್ತು ಒಂದು ಹಿಡಿ ಪುದೀನ ಎಲೆಗಳನ್ನು ಹಾಕಿ ಐದು ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ನಂತರ ಈ ಒಂದು ಮಿಶ್ರಣವನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಉಗುರು ಬೆಚ್ಚಗೆ ಆದಮೇಲೆ ಇದಕ್ಕೆ ಒಂದು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆ ತೀರಾ ಹೆಚ್ಚಾಗಿದ್ದರೆ ಎದೆ ಉರಿ ಉಳಿ ತೇಗು ಬರುತ್ತಿದ್ದರ ಇದನ್ನು ಕುಡಿದು ನೋಡಿ.
People needs
[irp]