ದೇಹದಲ್ಲಿ ಕಾಣಿಸಿಕೊಳ್ಳುವಂತಹ ಮಂಡಿನೋವಿಗೆ ಹಲವಾರು ರೀತಿಯಾದಂತಹ ಪರಿಹಾರಗಳನ್ನು ನಾವು ಕಂಡುಕೊಳ್ಳುತ್ತೇವೆ. ಸಾಮಾನ್ಯವಾಗಿ ನೋವು ಬಂದರೆ ಅದಕ್ಕೆ ಮೂಲಮು ಹಚ್ಚುವುದು, ವೈದ್ಯರ ಬಳಿ ತೆರಳಿ ಮಾತ್ರೆ, ಇಂಜೆಕ್ಷನ್ ಅಥವಾ ಇನ್ನಿತರ ಕ್ರೀಮ್ ಗಳನ್ನು ಹಚ್ಚುವುದು ಹೀಗೆ ನಾನಾ ರೀತಿಯ ವಿಧಾನಗಳನ್ನು ಅನುಸರಿಸುತ್ತೇವೆ ಇವುಗಳಿಂದ ನಮಗೆ ತಾತ್ಕಾಲಿಕವಾದ ಪರಿಹಾರ ದೊರೆಯುತ್ತದೆ. ಆದರೆ ಮಂಡಿ ನೋವಿಗೆ ಶಾಶ್ವತವಾಗಿ ಪರಿಹಾರ ಬೇಕು ಅಂದರೆ ಮೇಲಿನ ಯಾವ ವಿಧಾನವನ್ನು ಕೂಡ ಅನುಸರಣೆ ಮಾಡಿದೆ ಕೇವಲ ಮನೆಯಲ್ಲಿ ಸಿಗುವಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೊಂಡು ಕೆಲವೊಂದಷ್ಟು ಮನೆ ಮದ್ದಿನ ವಿಧಾನಗಳಿಂದ ಮಂಡಿನೋವಿಗೆ ಉಪಶಮನವನ್ನು ಪಡೆದುಕೊಳ್ಳಬಹುದು. ಮಂಡಿ ನೋವಿನ ಪರಿಹಾರಕ್ಕೆ ಮೊದಲನೇ ಸರಳ ವಿಧಾನ ಮಂಜು ಗಡ್ಡೆಯನ್ನು ಮಂಡಿನೋವು ಇರುವ ಜಾಗಕ್ಕೆ ಇಟ್ಟು ಐದರಿಂದ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು ದಿನಕ್ಕೆ ಎರಡು ಬಾರಿ ಹೀಗೆ ಮಾಡಬೇಕು ಹೀಗೆ ಮಾಡುವುದರಿಂದ ಮಂಡಿನೋವಿನ ತೊಂದರೆಯೂ ಕಡಿಮೆಯಾಗುತ್ತದೆ.
ಎರಡನೇ ವಿಧಾನ ಕೊಬ್ಬರಿ ಎಣ್ಣೆಯನ್ನು ಕುದಿಸಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಕರ್ಪೂರದ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಆನಂತರ ಅದನ್ನು ಮಸಾಜ್ ಮಾಡಬೇಕು. ಮೂರನೇ ವಿಧಾನ ಅಜ್ವಾನವನ್ನು ನುಣ್ಣಗೆ ಪೇಸ್ಟ್ ಮಾಡಿ ಅದರ ಲೇಪನವನ್ನು ಹಚ್ಚಬೇಕು. ನಾಲ್ಕನೇ ವಿಧಾನ ಸ್ವಲ್ಪ ಹರಳೆಣ್ಣೆ ತೆಗೆದುಕೊಂಡು ಅದನ್ನು ಕಾಲಿಗೆ ಹಚ್ಚಿ ಬಿಸಿ ನೀರಿಗೆ ಒಂದು ಬಟ್ಟೆಯನ್ನು ಅದ್ದಿ ಅದರ ಶಾಖವನ್ನು ನೀಡಬೇಕು. ಐದನೇ ವಿಧಾನ ಅರಶಿಣದ ಪುಡಿಯನ್ನು ನೀರಿನಲ್ಲಿ ಕಲಸಿ ಈ ಒಂದು ಮಿಶ್ರಣವನ್ನು ನೋವು ಇರುವ ಜಾಗಕ್ಕೆ ಪ್ರತಿನಿತ್ಯ ಎರಡು ಬಾರಿ ಹಾಕಬೇಕು ಹೀಗೆ ಮಾಡಿದರೆ ನಿಮಗೆ ಮಂಡಿ ನೋವು ಕಡಿಮೆಯಾಗುತ್ತದೆ. ಇದರ ಜೊತೆಗೆ ನಿಯಮಿತವಾದ ವ್ಯಾಯಾಮ ಮಾಡಬೇಕು. ಅಷ್ಟೇ ಅಲ್ಲದೆ ದೇಹದ ತೂಕ ಹೆಚ್ಚಾಗಿದ್ದರೂ ಮಂಡಿ ನೋವು ಕಂಡುಬರುತ್ತದೆ ಹಾಗಾಗಿ ನೀವು ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
ಸ್ವಲ್ಪ ಅರಿಶಿನದ ಜೊತೆಗೆ ಕೊಬ್ಬರಿ ಎಣ್ಣೆ ಸೇರಿಸಿ ಹೀಗೆ ಹಚ್ಚಿ ಸಾಕು ಮಂಡಿ ,ಕೀಲು ಕಾಲು ನೋವು ಬರೋದಿಲ್ಲ..!
People needs
[irp]