ಕಾಮಾಕ್ಷಿ ದೀಪವನ್ನು ಖರೀದಿ ಮಾಡಬೇಕಾದರೆ ಮೊದಲು ನೀವು ನೋಡಬೇಕಾಗಿರುವ ಅಂಶವೇನೆಂದರೆ ಈ ಒಂದು ವಿಗ್ರಹದಲ್ಲಿ ಎಲ್ಲೂ ಕೂಡ ಮುಕ್ಕು ಇರಬಾರದು ಅಂತಹ ಕಾಮಾಕ್ಷಿ ದೀಪವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ನಂತರ ಈ ದೀಪದಲ್ಲಿ ಮುಖದ ಲಕ್ಷಣ ತುಂಬಾ ಮುಖ್ಯ ಲಕ್ಷ್ಮಿಯ ಕಳೆ ಎದ್ದು ಕಾಣಬೇಕು ಪ್ರತಿಯೊಂದರಲ್ಲೂ ಕೂಡ ಈ ರೀತಿ ಕಳೆ ಇರಬೇಕು. ಅಂತಹದನ್ನು ಪರಿಶೀಲನೆ ಮಾಡಿದ ನಂತರ ನೀವು ದೀಪವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಶುಭ ಲಾಭದ ಎಣಿಕೆ ಮಾಡಬೇಕು ಯಾರೂ ಕೂಡ ದೀಪ ತಯಾರು ಮಾಡಬೇಕಾದರೆ ಯಾರಿಗಾದರೂ ಕೆಟ್ಟದ್ದು ಆಗಲಿ ಎಂಬ ಮನೋಭಾವನೆಯಿಂದ ಈ ಕಾಮಾಕ್ಷಿ ದೀಪವನ್ನು ತಯಾರಿಸುವುದಿಲ್ಲ. ಅವರ ಬಳಿ ಇರುವಂತಹ ಅಚ್ಚಿನಿಂದ ಸಾವಿರಾರು ದೀಪಗಳನ್ನು ತಯಾರಿಸುತ್ತಾರೆ.

ಕೆಲವೊಮ್ಮೆ ಹಚ್ಚಿನಿಂದ ಆಗುವ ಅಡಚಣೆಯಿಂದ ಒಂದೆರಡು ಕಡೆ ದೀಪದಲ್ಲಿ ಈ ರೀತಿಯ ತಪ್ಪುಗಳು ಕಂಡು ಬರಬಹುದು ಹಾಗಾಗಿ ಈ ಶುಭ ಲಾಭ ಎಣಿಕೆ ಮಾಡಿ ತೆಗೆದುಕೊಂಡು ಬರುವುದು ಉತ್ತಮ. ಈ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಒಳ್ಳೆಯದು ಆಗುತ್ತದೆ, ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ, ಮನೆಯಲ್ಲಿ ಕಿರಿಕಿರಿ ಕಲಹಗಳು ಕಡಿಮೆಯಾಗುತ್ತದೆ. ಕಾಮಾಕ್ಷಿ ದೀಪದ ಮೇಲೆ ಕಳಸಗಳು ಇರುತ್ತದೆ ಆ ಗೆರೆಗಳು ಸಮನಾಗಿ ಇದೆಯಾ ಅಥವಾ ಇಲ್ಲವಾ ಅಂತ ಎಣಿಕೆ ಮಾಡಿ ನೋಡಬೇಕು ಎರಡು ಕಡೆ ಕೂಡ ಅದು ಸಮನಾಗಿ ಇರಬೇಕು. ಕೆಲವರು ಸರಿ ಮತ್ತು ಬೆಸ ಸಂಖ್ಯೆ ಅಂತ ಲೆಕ್ಕ ಆಕುತ್ತಾರೆ ಇದರಿಂದಲೂ ಕೂಡ ನೀವು ಕಾಮಾಕ್ಷಿ ದೀಪದ ಶುಭ ಲಾಭವನ್ನು ತಿಳಿಯಬಹುದು. ನಂತರ ಈ ದೀಪ ಮುಕ್ಕು ಆಗಿರಬಾರದು ಹಾಗೂ ಯಾವುದೇ ರೀತಿಯಾದಂತಹ ಭಿನ್ನ ಆಗಿರಬಾರದು ಭಿನ್ನ ಇರುವಂತಹ ದೀಪವನ್ನು ಮನೆಯಲ್ಲಿ ಬೆಳಗಬಾರದು.

By admin

Leave a Reply

Your email address will not be published. Required fields are marked *