ಸದಾ ಕಾಲ ಏನಾದರೂ ಒಂದು ಮನರಂಜನೆಯ ಕೆಲಸ ಕಾರ್ಯಗಳಲ್ಲಿ ಬಿಜಿಯಾಗಿದ್ದ ಕಿಚ್ಚ ಸುದೀಪ್ ಕಳೆದ ವರ್ಷ ಲಾಕ್ ಡೌನ್ ಓಪನ್ ಆದ ತಕ್ಷಣ ಶೂಟಿಂಗ್ ಗೆ ಇಳಿದ ಮೊದಲ ಸ್ಟಾರ್ ನಟ ಕಿಚ್ಚ ಸುದೀಪ್. ಸಮಯ ಪಾಲನೆಯಲ್ಲಿ ಕಿಚ್ಚ ಸುದೀಪ್ ಯಾವತ್ತು ಇದ್ದರು ಒಂದು ಹೆಜ್ಜೆ ಮುಂದೆ ಇರುತ್ತಾರೆ ಆದರೆ ಇಂತಹ ಶಿಸ್ತಿನ ವ್ಯಕ್ತಿ ಈಗ ತಣ್ಣಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ತಿಂಗಳ 15ನೇ ತಾರೀಕು ಕಿಚ್ಚ ಸುದೀಪ್ ಕಡೆಯಿಂದ ಒಂದು ಒಳ್ಳೆಯ ಹೊರ ಬರುತ್ತದೆ ವಿಕ್ರತ್ ರೋಣ ಸಿನಿಮಾ ಭಾಷೆಗಳಲ್ಲಿ ಆಗಸ್ಟ್ 19 ರಂದು ಪ್ರೇಕ್ಷಕರ ಮುಂದೆ ಬರುತ್ತದೆ ಎಂದು ಸಿಹಿ ಸುದ್ದಿಯನ್ನು ನೀಡಿದ್ದರು. ಈ ಸಂಭ್ರಮವನ್ನು ಆಚರಿಸುವ ಮೊದಲು ಮತ್ತೊಮ್ಮೆ ಕಿಚ್ಚನ ಕಡೆಯಿಂದ ಸ್ವಲ್ಪ ಕಹಿ ಸುದ್ದಿಯೂ ಕೂಡ ಬಂದಿದೆ ಹೌದು ಅದೇನೆಂದರೆ ಕಿಚ್ಚ ಸುದೀಪ್ ಅವರು ಇನ್ನೂ ಒಂದು ವಾರಗಳ ಕಾಲ ಯಾರಿಗೂ ಕೂಡ ಸಿಗುವುದಿಲ್ಲ ಅಂತ ಏಕೆಂದರೆ ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಬೆಳ್ಳಿತೆರೆಯಲ್ಲಿ ತಪ್ಪಿದ್ದರೆ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ಮನರಂಜಿಸುವಂತಹ ಕನ್ನಡದ ಏಕೈಕ ನಟ ಅಂದರೇ ಅದು ಕಿಚ್ಚ ಸುದೀಪ್. ಅವರು ಈ ವಾರ ಬಿಗ್ ಬಾಸ್ ಮನೆಯಲ್ಲಿ ಕಾಣಿಸುವುದಿಲ್ಲ ಕಾರಣ ಅವರಿಗೆ ಆರೋಗ್ಯ ಸಮಸ್ಯೆ. ಸದ್ಯಕ್ಕೆ ನಾಡಿನಲ್ಲಿ, ದೇಶದಲ್ಲಿ, ವಿಶ್ವದಲ್ಲಿ ಕೋರೋನಾ ಆರ್ಭಟ ಈ ಕಾರಣಕ್ಕೆ ಹಲವಾರು ಬಳಲುತ್ತಿರುವುದು ಸರ್ವೇ ಸಾಮಾನ್ಯ. ಆದರೆ ಕಿಚ್ಚ ಸುದೀಪ್ ಅವರಿಗೆ ಕಾಡುತ್ತಿರುವ ಸಮಸ್ಯೆ ಕೋರೋನಾ ಅಲ್ಲ ಬದಲಿಗೆ ಕಾಲುನೋವು. ಅವರ ಸಿನಿಮಾ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಆಚರಣೆ ಮಾಡಿದ ನಂತರ ಅವರು ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಒಂದು ಕಾರಣದಿಂದಾಗಿ ಅವರಿಗೆ ಅತಿಯಾಗಿ ಕಾಲು ನೋವು ಕಾಣಿಸಿಕೊಂಡಿದೆ. ಅದಕ್ಕಾಗಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.

By admin

Leave a Reply

Your email address will not be published. Required fields are marked *