ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಅನ್ನುವ ಹಾಗೆ ದೊಡ್ಡ ಮನೆಯ ಆರಾಧ್ಯ ದೇವರಿಗೆ ಮಾತ್ರ ಗೊತ್ತು ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಹೃದಯ ಶ್ರೀಮಂತಿಕೆ ಎಂತಹದ್ದು ಅಂತ. ಡಾಕ್ಟರ್ ರಾಜಕುಮಾರ್ ಹಾಗೂ ರಾಜಕುಮಾರ್ ಕುಟುಂಬದ ಕಲಾವಿದರಿಗೂ ಮತ್ತು ಅಭಿಮಾನಿಗಳಿಗೂ ಹಿಂದಿನಿಂದಲೂ ಅಭಿಮಾನದ ಸಂಸ್ಕೃತಿ ಸಂಪ್ರದಾಯ ನಡೆದುಕೊಂಡು ಬಂದಿದೆ. ಇವತ್ತು ಚಿತ್ರ ಪ್ರೇಮಿಗಳಿಗಾಗಿ ನಾವು ತಿಳಿಸುವ ಸ್ಟೋರಿ ಕೂಡ ಅಂತಹದ್ದೆ ಕಥೆ ಯುವರತ್ನ ಸಿನಿಮಾದಲ್ಲಿ ಅನೇಕ ಪಾತ್ರಗಳನ್ನು ನೋಡಿ ಬಂದವರ ಎದೆಯಲ್ಲಿ ಸ್ಥಾನ ಸ್ಥಾನ ಪಡೆದುಕೊಂಡಿದೆ. ಆದರೆ ಯುವರತ್ನ ಚಿತ್ರದ ಎಲ್ಲಾ ಪಾತ್ರಗಳಿಗಿಂತ ಒಂದು ತೂಕ ಜಾಸ್ತಿ ಬೆಲ್ ಮಾಸ್ಟರ್ ಪಾತ್ರ. ಯುವರತ್ನ ಎಂದೆನಿಸಿಕೊಳ್ಳುವ ಯುವರಾಜ್ ಪಾತ್ರ ಬೆಲ್ ಮಾಸ್ಟರ್ ಅನ್ನು ತಬ್ಬಿಕೊಂಡ ದೃಶ್ಯ ನೋಡುಗರ ಎದೆಯಲ್ಲಿ ನಲಿದಾಡುವಂತೆ ಮಾಡುತ್ತದೆ.

ಈ ಪಾತ್ರಧಾರಿಯ ಕಥೆಯನ್ನು ಇಂದು ಹೇಳುತ್ತಿದ್ದೇವೆ ಯುವರತ್ನ ಸಿನಿಮಾದಲ್ಲಿ ಯುವರಾಜ ಬೆಲ್ ಮಾಸ್ಟರ್ ಅನ್ನು ಕಾಪಾಡಿದಂತೆ ನಿಜ ಜೀವನದಲ್ಲಿಯೂ ಕೂಡ ಯುವರಾಜ ಪುನೀತ್ ರಾಜಕುಮಾರ್ ಪೋಷಕ ನಟರಾದ ಎಂ.ಕೆ ಮಠ ಅವರ ಬಾಳಿಗೆ ದಾರಿ ದೀಪವಾಗಿದ್ದಾರೆ. ಎಂ.ಕೆ ಮಠ ಅವರು ರಂಗಭೂಮಿ ಮತ್ತು ಸಿನಿಮಾ ಕಲಾವಿದರು ಇವರು ಹಲವಾರು ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರನ್ನು ಆರಾಧ್ಯ ದೈವವಾಗಿ ನೋಡಿದ್ದಾರೆ. ಈಗ ಇವರ ಸಂಕಷ್ಟವನ್ನು ಪುನೀತ್ ರಾಜಕುಮಾರ್ ಅವರು ಬಗೆಹರಿಸಿದ್ದಾರೆ ಹೌದು ಎಂಕೆ ಮಠವರ ತಮ್ಮ ಸ್ವಂತ ಊರು ಆದಂತಹ ಉಪ್ಪಿನಂಗಡಿಯಲ್ಲಿ ಒಂದು ಮನೆಯನ್ನು ಕಟ್ಟುವ ಸುಂದರ ಕನಸನ್ನು ಹೊಂದಿದ್ದರು. ಅದಕ್ಕಾಗಿ ಮನೆಯನ್ನು ಕೂಡ ಕಟ್ಟಿದ್ದಾರೆ ಆದರೆ ಅವರು ನಟಿಸಿರುವಂತಹ ಸಿನಿಮಾಗಳಲ್ಲಿ ಸರಿಯಾದ ರೀತಿಯಲ್ಲಿ ಪೇಮೆಂಟ್ ಕೊಡದೆ ಇರುವ ಕಾರಣ ಮನೆ ಅರ್ಧಕ್ಕೆ ನಿಂತಿದೆ. ಹಾಗಾಗಿ ಈ ಮನೆಯನ್ನು ಸಂಪೂರ್ಣವಾಗಿ ಕಟ್ಟಲು ಇದೀಗ ಪುನೀತ್ ರಾಜಕುಮಾರ್ ಅವರ ನೆರವಾಗಿದ್ದಾರೆ.

By admin

Leave a Reply

Your email address will not be published. Required fields are marked *