ಕೆಮ್ಮು ಶೀತ ನೆಗಡಿ ಗಂಟಲು ನೋವು ತಕ್ಷಣ ಕಡಿಮೆಯಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ…!

ಈ ಒಂದು ಮನೆಮದ್ದನ್ನು ತಯಾರಿಸಬೇಕು ಅಂದರೆ ಮೊದಲಿಗೆ ಒಂದು ಪಾತ್ರೆಗೆ ಮೂರು ಗ್ಲಾಸ್ ನೀರನ್ನು ಹಾಕಿಕೊಳ್ಳಿ. ಈ ಒಂದು ಮನೆಮದ್ದು ಇಬ್ಬರು ವ್ಯಕ್ತಿಗಳು ಸೇವಿಸಬಹುದಾಗಿದೆ ಈ ನೀರಿಗೆ ಒಂದುವರೆ ಇಂಚು ಚಕ್ಕೆಯನ್ನು ಚಿಕ್ಕದಾಗಿ ಕಟ್ ಮಾಡಿ ಹಾಕಿ, ನಂತರ ಎರಡು ಏಲಕ್ಕಿಯನ್ನು ಸಿಪ್ಪೆ ಸಮೇತ ಹಾಕಬೇಕು, ನಂತರ ನಾಲ್ಕರಿಂದ ಐದು ಲವಂಗವನ್ನು ಹಾಕಿ, ಹಾಗೂ ಒಂದು ಪಲಾವ್ ಎಲೆಯನ್ನು ಹಾಕಿ, ನಂತರ ಐದರಿಂದ ಆರು ಕರಿಮೆಣಸನ್ನು ಪುಡಿ ಮಾಡಿ ಹಾಕಿ, ತದನಂತರ ಒಂದು ಇಂಚು ಶುಂಠಿಯನ್ನು ಸಿಪ್ಪೆ ತೆಗೆದು ಜಜ್ಜಿ ಹಾಕಬೇಕು, ನಂತರ ಅರ್ಧ ಇಂಚು ಅರಿಶಿಣದ ಕೊಂಬನ್ನು ತುರಿದು ಹಾಕಬೇಕು. ಒಂದು ವೇಳೆ ಹಸಿ ಅರಿಶಿಣದ ಕೊಂಬು ಇಲ್ಲದಿದ್ದರೆ ಒಂದು ಟೇಬಲ್ ಸ್ಪೂನ್ ಅರಶಿಣದ ಪುಡಿಯನ್ನು ಹಾಕಿ.

ನಂತರ ಇದಕ್ಕೆ ಎಂಟರಿಂದ ಹತ್ತು ತುಳಸಿ ದಳಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಚಿಕ್ಕದಾಗಿ ಕತ್ತರಿಸಿ ಹಾಕಿ. ನಂತರ ಸ್ವಲ್ಪ ಆರ್ಗಾನಿಕ್ ಬೆಲ್ಲ ಅಥವಾ ಜೋನಿ ಬೆಲ್ಲವನ್ನು ಒಂದು ಟೇಬಲ್ ಸ್ಪೂನ್ ಹಾಕಿ ಈ ಎಲ್ಲಾ ಮಿಶ್ರಣವನ್ನು ಕೂಡ ಹತ್ತು ನಿಮಿಷಗಳ ಕಾಲ ನಿಧನ ಉರಿಯಲ್ಲಿ ಕುದಿಸಿಕೊಳ್ಳಬೇಕು. ಮೂರು ಗ್ಲಾಸ್ ಇರುವಂತಹ ನೀರು ಎರಡು ಗ್ಲಾಸ್ ನೀರು ಆಗುವ ತನಕ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಪ್ರತಿನಿತ್ಯವೂ ಕೂಡ ಬಿಸಿ ಇರುವಾಗಲೇ ಸೇವಿಸಬೇಕು. ಹೀಗೆ ಮಾಡುವುದರಿಂದ ಗಂಟಲು ನೋವು, ಕೆಮ್ಮು, ನೆಗಡಿ, ಜ್ವರವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಕೂಡ ಈ ಒಂದು ಮನೆ ಮದ್ದು ಹೆಚ್ಚಿಸುತ್ತದೆ.

WhatsApp Group Join Now
Telegram Group Join Now
[irp]


crossorigin="anonymous">