ಮನೆಗೆ ಹೆಬ್ಬಾಗಿಲು ಲಕ್ಷಣ ಮನೆಯ ಗಾಂಭೀರ್ಯತೆಯನ್ನು ಬಾಗಿಲು ಪ್ರತಿಬಿಂಬಿಸುತ್ತದೆ ಯಾವುದೇ ಶುಭ ಪಕ್ಷದಲ್ಲಿ ರಾಜಯೋಗ ವಿರುವ ಒಳ್ಳೆಯ ಮುಹೂರ್ತದಲ್ಲಿ ಹೆಬ್ಬಾಗಿಲು ಸ್ಥಾಪಿಸಬೇಕು ಹೆಬ್ಬಾಗಿಲು ಸ್ಥಾ ಪಿಸುವುದು ಉತ್ತರ, ಪೂರ್ವ, ದಕ್ಷಿಣ ದಿಕ್ಕುಗಳು ಸರ್ವೇ ಸಾಮಾ ನ್ಯವಾಗಿ ಎಲ್ಲರಿಗೂ ಶುಭಕರವೇ ಎಂದು ಹೇಳಬಹುದು ಆದರೆ ಗೃಹ ಮುಖ ಉಪ ದಿಕ್ಕಿನಲ್ಲಿ ಇರಬಾರದು. ಮನೆ ಕಟ್ಟುವ ಯಜಮಾನ ಯಾವ ರಾಶಿಯವರು ಅದನ್ನು ನೋಡಿಕೊಂಡು ಬಾಗಿಲು ನಿರ್ಮಿ ಸಬೇಕು. ಮೇಷರಾಶಿ, ಸಿಂಹರಾಶಿ, ಧನಸ್ಸುರಾಶಿ ಅವರಿಗೆ ಉತ್ತರ ದಿಕ್ಕು ಶ್ರೇಷ್ಠವಾಗಿರುತ್ತದೆ. ವೃಷಭರಾಶಿ, ತುಲಾರಾಶಿ, ಕುಂಭರಾಶಿ ಅವರಿಗೆ ಪಶ್ಚಿಮ ದಿಕ್ಕು ಶ್ರೇಷ್ಠವಾಗಿರುತ್ತದೆ. ಮಿಥುನರಾಶಿ, ಮಕರ ರಾಶಿ, ಕನ್ಯಾರಾಶಿ ಅವರಿಗೆ ದಕ್ಷಿಣ ದಿಕ್ಕು ಶುಭಕರ.

ಕಟಕರಾಶಿ, ವೃಶ್ಚಿಕರಾಶಿ, ಮೀನರಾಶಿ ಅವರಿಗೆ ಪೂರ್ವ ದಿಕ್ಕಿನ ಹೆಬ್ಬಾ ಗಿಲು ಸ್ಥಾಪನೆ ಶುಭಪ್ರದವಾಗುತ್ತದೆ. ಇದೇ ರೀತಿ ಕರೆಯುವೆ ಹೆಸರಿನ ರಾಶಿ ಫಲದಂತೆ ಹೆಬ್ಬಾಗಿಲು ಇಡಬಹುದು ಹೆಬ್ಬಾಗಿಲು ಯಾವಾಗಲು ವಿಶೇಷ ಕಟ್ಟಿಗೆಯಲ್ಲಿ ಅಲಂಕಾರ, ನಕ್ಷೆ, ಸುಳಿವು ಗಳಿಂದ ಕೊಡಿ ದೊಡ್ಡದಾಗಿ ಬಲವುಳ್ಳದ್ದಾಗಿಯೂ ಇಬೇಕು. ಹಾಗೆಯೆ ಬಾಗಿಲನ್ನು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ದಿನಗಳಲ್ಲಿ ಶುಭ ವೇಳೆಯಲ್ಲಿ ಹೆಬ್ಬಾಗಿಲಿನ ಹೊಸ್ತಿಲಿನ ಕೆಳಗೆ ಪಂಚಲೋಹ ಪಂಚರತ್ನ ಅಕ್ಷತೆಗಳನ್ನು ಹಾಕಿ ಹಾಲು ನೀರು ಪ್ರೋಕ್ಷಿಸಿ ಹೆಬ್ಬಾಗಿಲನ್ನು ಇಟ್ಟು ಪೂಜಿಸಬೇಕು. ಹೆಬ್ಬಾಗಿಲು ಅಥವಾ ಮುಖ್ಯದ್ವಾರದಿಂದ ನೇರವಾಗಿ ಮೂರು ಬಾಗಿಲುಗಳನ್ನು ಇಡಬಾರದು ಹಾಗೆಯೆ ಒಂದು ಮನೆಗೆ ಮೂರು ದಿಕ್ಕುಗಳಲ್ಲಿ 3 ಬಾಗಿಲುಗಳನ್ನು ಇಡಬಾರದು. ಹೆಬ್ಬಾಗಿಲಿನ ಎದುರಿಗೆ ನೀರು, ನೀರು ತುಂಬಿದ ತೊಟ್ಟಿ ಬಾವಿಗಳು ಇದ್ದರೆ ದಾರಿದ್ರ್ಯ ಹಾಗೂ ರೋಗಗಳು ಬರುತ್ತವೆ.

By admin

Leave a Reply

Your email address will not be published. Required fields are marked *