ಮನೆಗೆ ಪದೇ ಪದೇ ಹಾವುಗಳು ಬರ್ತಿವೆ ಎಂದು ಮನೆಯಲ್ಲೇ ಬಾವಿ ತೋಡಿದ ಗಂಡ ಹೆಂಡತಿ ಒಂದು ವಾರದ ನಂತರ ಕಾದಿತ್ತು ಶಾಕ್..ಏನಾಯ್ತು ನೋಡಿ.

ಇದ್ದಕ್ಕಿದ್ದಂತೆ ಮನೆಗೆ ಹಾವುಗಳು ಬರ್ತಿವೆ ಎಂದು ಕೇರಳದ ಒಬ್ಬ ಮಂತ್ರವಾದಿಯ ಬಳಿ ಹೋದ ಗಂಡ ಹೆಂಡತಿ ಅವನ ಮಾತಿಗೆ ಮರುಳಾಗಿ ಮನೆ ಒಳಗೆ ಎಂತಹ ಕೆಲಸ ಮಾಡಿದ್ದಾರೆ ನೋಡಿ.ಚಾಮರಾಜನಗರದಲ್ಲಿ ವಾಸವಿರುವ ಈ ದಂಪತಿಗಳು ಮಾಡಿದ ಎಡವಟ್ಟು ಈಗ ಪೋಲಿಸ್ ಠಾಣೆ ಮೆಟ್ಟಿಲೇರಿದೆ.ಚಾಮರಾಜನಗರ ತಾಲೂಕಿನ ಅಮ್ಮನಪುರದಲ್ಲಿ ಸೋಮಣ್ಣ ಎಂಬುವರ ಮನೆಯಲ್ಲಿ ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು.ಇದರಿಂದ ಗಾಬರಿಯಾದ ದಂಪತಿಗಳು ನೇರವಾಗಿ ಕೇರಳದ ಮಾಂತ್ರಿಕನ ಬಳಿ ಹೋಗಿ ವಿಚಾರಿಸಿದಾಗ ಆತ ಮನೆಯಲ್ಲಿ ದೊಡ್ಡ ನಿಧಿ ಇದೆ.ಅದಕ್ಕಾಗಿಯೇ ಹಾವುಗಳು ನಿಧಿಗೆ ಕಾವಲಾಗಿ ನಿಂತಿವೆ ಎಂದು ತಿಳಿಸಿದ್ದ.ಇದನ್ನು ಕೇಳಿದ ದಂಪತಿಗಳು ಸತ್ಯವಿರಬಹುದು ಎಂದು ಭಾವಿಸಿ ಅನೇಕ ಪೂಜೆಗಳನ್ನು ಮಾಂತ್ರಿಕನ ಬಳಿ ಮಾಡಿಸಿ ಲಕ್ಷಾಂತರ ರೂ ಹಣ ಕಳೆದುಕೊಂಡಿದ್ದಲ್ಲದೆ.

ಸ್ವತಃ ಮನೆ ಒಳಗೆ 20 ಅಡಿ ಆಳದ ತನಕ ಬಾವಿಯ ರೀತಿ ಆಳ ತೋಡಿದರು.ಇದನ್ನು ತಿಳಿದ ಪೋಲೀಸರು ಕೂಡಲೆ ಮನೆಗೆ ದಾವಿಸಿ ದಂಪತಿಗಳ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ಕೊನೆಗೆ ತಮ್ಮ ಮನಯನ್ನು ಹಾಳು ಮಾಡಿಕೊಂಡು ಹಣವನ್ನು ಕಳೆದುಕೊಂಡು ಮಂತ್ರವಾದಿಯಿಂದ ಮೋಸ ಹೋಗಿದ್ದವೆಂದು ಪರಿತಪಿಸುತ್ತಿದ್ದಾರೆ.ಸದ್ಯಕ್ಕೆ ಮಂತ್ರವಾದಿ ಪೋನ್ ಸ್ವಿಚ್ ಆಫ್ ಆಗಿದೆ.ಒಂದೊಂದು ರೂ ದುಡಿಯೋಕೆ ಕಷ್ಟ ಇರುವ ಈ ಕಾಲದಲ್ಲಿ ನಿಧಿ ಆಸೆ ಪಟ್ಟು ಹಣ,ಸಮಯ ವ್ಯರ್ಥ ಮಾಡಿಕೊಂಡ ದಂಪತಿಗೆ ನೀವೆನ್ ಹೇಳ್ತೀರಾ ?

By admin

Leave a Reply

Your email address will not be published. Required fields are marked *