ಶಕ್ತಿಶಾಲಿ ದೇವಿ ದೇಗುಲ ನಿಮ್ಮ ಮೇಲೆ ಮಾಟ ಮಂತ್ರ ಆಗಿದ್ರೆ ಅದು ಇಲ್ಲಿ ಹೊರ ಬರುತ್ತೆ..

ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎಂದು ತಿಳಿದುಕೊಳ್ಳಬೇಕೇ? ಅದು ಇಲ್ಲಿ ಹೊರಬರುತ್ತದೆ ನೋಡಿ.ಒಡಂಬೈಲು ಪದ್ಮಾವತಿ ದೇವಸ್ಥಾನ, ಈ ದೇವಸ್ಥಾನ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಸಮೀಪದಲ್ಲಿ. ಈ ದೇವಸ್ಥಾನದ ವಿಶೇಷತೆ ಏನೆಂದರೆ ಇಲ್ಲಿಯ ಪದ್ಮಾವತಿ ದೇವಿಗೆ ಹರಕೆ ಹೊತ್ತುಕೊಂಡು ಯಾವುದಾದರೂ ಒಂದು ಸಂಕಲ್ಪ ಮಾಡಿಕೊಂಡರೆ ಅದು ಅಲ್ಪಾವಧಿಯಲ್ಲೇ ನೆರವೇರುತ್ತದೆ. ಅದೇ ಈ ದೇವಸ್ಥಾನದ ವಿಶೇಷವೂ ಹೌದು. ಹಾಗಾಗಿ ಈ ದೇವಸ್ಥಾನಕ್ಕೆ ಹಲವಾರು ಭಕ್ತಾದಿಗಳು ರಾಜ್ಯದ ನಾನಾ ಭಾಗಗಳಿಂದ ಬಂದು ದರ್ಶನ ಪಡೆದು ಹರಕೆ ಹೊತ್ತು ಕೊಳ್ಳುತ್ತಾರೆ. ಈ ದೇವಸ್ಥಾನವು ಕಾಡಿನ ಮಧ್ಯೆ ಇದೆ. ಭಕ್ತಾದಿಗಳು ರೈಲಿನಲ್ಲಿ ಹೋಗಬೇಕು ಎಂದರೆ ತಾಳಗುಪ್ಪದಲ್ಲಿ ಇಳಿದು ಕೊಳ್ಳಬೇಕು, ಅಲ್ಲಿಂದ ಬಸ್ಸಿನಲ್ಲಿ ಗಾಂಧಿ ಸರ್ಕಲ್ ವರೆಗೂ ಹೋಗ ಬೇಕು. ಗಾಂಧಿ ಸರ್ಕಲ್ ಇಂದ ಒಡಂಬೈಲು ಪದ್ಮಾವತಿ ದೇವಸ್ಥಾನಕ್ಕೆ ಬಸ್ಸಿನ ವ್ಯವಸ್ಥೆ ಇರುತ್ತದೆ. ಅಲ್ಲಿಂದ ನೀವು ಬಸ್ಸಿನಲ್ಲಿ ಹೋಗ ಬಹುದು.

ಈ ದೇವಸ್ಥಾನಕ್ಕೆ ವಿಶೇಷ ಬಗ್ಗೆ ಹೇಳುವುದಾದರೆ ಇಲ್ಲಿ ಎಲ್ಲರೂ ಬಳೆಯ ಹರಕೆ ಹೊರುತ್ತಾರೆ ನೀವು ದೇವಸ್ಥಾನದ ಒಳಗೆ ಪ್ರವೇಶ ಮಾಡುತ್ತಿದ್ದಂತೆ ದೇವಸ್ಥಾನ ಮುಂದಗಡೆ ಒಂದು ದೊಡ್ಡ ತೊಟ್ಟಿಯಲ್ಲಿ ಹಸಿರು ಬಣ್ಣದ ಬಳೆಗಳ ರಾಶಿಯನ್ನು ಹಾಕಿರುವುದನ್ನು ನೀವು ಕಾಣಬಹುದು. ಇದೆಲ್ಲವೂ ಭಕ್ತಾದಿಗಳು ಹರಕೆ ಹೊತ್ತುಕೊಂಡು ಅವು ನೆರವೇರಿದ ನಂತರ ಹರಕೆಯ ರೂಪದಲ್ಲಿ ಬಳೆಗಳನ್ನು ತಂದು ಹಾಕಿರುವುದು. ಆದರೆ ತೊಟ್ಟಿಯಲ್ಲಿ ಕಡಿಮೆ ಬೆಳೆಗಳನ್ನು ಹಾಕಿದ್ದಾರೆ ಹಾಗೂ ಇದಕ್ಕಿಂತ ಹೆಚ್ಚಿಗೆ ದೇವಿಗೆ ಕಾಣಿಕೆ ರೂಪದಲ್ಲಿ ಬಳೆಗಳು ಬಂದು ಸೇರುತ್ತವೆ. ಹಾಗೂ ಕೆಲವು ಬಳೆಗಳನ್ನು ದೇವಿಯ ಅಪ್ಪಣೆ ರೂಪದಲ್ಲಿ ಭಕ್ತಾದಿಗಳಿಗೆ ಕೊಟ್ಟು ಕಳುಹಿಸಲಾಗುತ್ತದೆ. ದೇವಿಗೆ ತಂದು ಕೊಡುವ ಕೆಲವು ಬಳೆಗಳನ್ನು ದೇವಿಗೆ ಹಾಕಿದ ನಂತರ ಒಂದು ಬುಟ್ಟಿಯಲ್ಲಿ ಹೊರಗಡೆ ಇಡುತ್ತಾರೆ. ಭಕ್ತರು ಅವುಗಳನ್ನು ಆಶೀರ್ವಾದದ ರೂಪದಲ್ಲಿ ಹಾಕಿ ಕೊಂಡು ಹೋಗುತ್ತಾರೆ.

WhatsApp Group Join Now
Telegram Group Join Now

ಇನ್ನು ದೇವಸ್ಥಾನದ ಗರ್ಭಗುಡಿಯ ಬಗ್ಗೆ ಹೇಳುವುದಾದರೆ ಗರ್ಭಗುಡಿಯಲ್ಲಿ 12 ಅಡಿ ಎತ್ತರದ ಹುತ್ತವಿದೆ. ಹುತ್ತದ ಸುತ್ತ ಕಟ್ಟೆ ಕಟ್ಟಲಾಗಿದೆ. ಹಾಗೆ ಅಲ್ಲಿಯೇ ಅಮ್ಮನವರ ಮೂರ್ತಿ ಇದೆ. ಮೂರ್ತಿ ಹಿಂದೆ ಹರಕೆ ರೂಪದಲ್ಲಿ ಕೊಡಲಾದ ಬಳೆಗಳನ್ನು ಅಲಂಕರಿಸಲಾಗಿದೆ. ಹಾಗೂ ಇಲ್ಲಿ ಪ್ರಸಾದ ರೂಪದಲ್ಲಿ ಹುತ್ತದ ಮಣ್ಣನ್ನು ಸಹ ಕೊಡುತ್ತಾರೆ. ಹಾಗೆಯೇ ಇಲ್ಲಿ ದೇವಸ್ಥಾನವನ್ನು ಪ್ರತಿಷ್ಟಾಪನೆ ಮಾಡಿದ್ದೇ ಒಂದು ಕುತೂಹಲಕಾರಿ ಕಥೆಯಾಗಿದೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.



crossorigin="anonymous">