ಡಯಟ್ ವ್ಯಾಯಾಮ ಏನು ಇಲ್ಲದೆ ದೇಹದ ತೂಕವನ್ನು ಕಳೆದುಕೊಳ್ಳಲು ಈ ಒಂದು ನೀರನ್ನು ಒಂದು ಗ್ಲಾಸ್ ಸೇವಿಸಿ ನೋಡಿ.ಸಾಮಾನ್ಯವಾಗಿ ಎಲ್ಲರಿಗೂ ಕೂಡ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಅದಕ್ಕಾಗಿ ನಾನಾ ರೀತಿಯಾದಂತಹ ಪ್ರಯತ್ನ ಕೂಡ ಮಾಡುತ್ತಾರೆ. ಅದರಲ್ಲಿಯೂ ಕೂಡ ಮುಖ್ಯವಾಗಿ ನೂರಕ್ಕೆ ತೊಂಬತ್ತು ಭಾಗದಷ್ಟು ಜನ ಬಹುತೇಕರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುತ್ತಾರೆ ಈ ರೀತಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಎಂಬ ನಂಬಿಕೆ ಅವರದ್ದು. ಆದರೆ ಇನ್ನು ಮುಂದೆ ನೀವು ಕೇವಲ ಬಿಸಿ ನೀರನ್ನು ಕುಡಿಯುವುದು ಮಾತ್ರವಲ್ಲದೆ ಅದರ ಜೊತೆಗೆ ನಾವು ಹೇಳುವಂತಹ ಒಂದೇ ಒಂದು ಪದಾರ್ಥವನ್ನು ಸೇರಿಸಿಕೊಂಡು ನೀರನ್ನು ಸೇವನೆ ಮಾಡಿದರೆ ಖಂಡಿತವಾಗಿಯೂ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಆ ಒಂದು ಪದಾರ್ಥ ಯಾವುದು ಹೇಗೆ ಸೇವಿಸಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ಲೇಖನದಲ್ಲಿ ತಿಳಿಸುತ್ತೇವೆ.
ಮೊದಲಿಗೆ ನೀವು ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಅದನ್ನು ಬಿಸಿ ಮಾಡಿ ಕೊಳ್ಳಬೇಕು ತದನಂತರ ಅದಕ್ಕೆ ಒಂದು ಇಂಚು ಹಸಿಶುಂಠಿಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಚೆನ್ನಾಗಿ ತೊಳೆದು ಅದನ್ನು ಚೆನ್ನಾಗಿ ಜೆಜ್ಜಿ ಬಿಸಿನೀರಿಗೆ ಹಾಕಿಕೊಳ್ಳಬೇಕು. ತದನಂತರ ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕದಾಗಿ ನಾಲ್ಕು ಭಾಗಗಳಾಗಿ ಕತ್ತರಿಸಿ ಅದನ್ನು ಕೂಡ ನೀರಿಗೆ ಹಾಕಿ ಎರಡು ನಿಮಿಷಗಳ ಕಾಲ ನೀರನ್ನು ಕುದಿಸಿಕೊಳ್ಳಿ. ಈಗ ಗ್ಯಾಸ್ ಅನ್ನು ಆಫ್ ಮಾಡಿ ಪಾತ್ರೆಗೆ ಒಂದು ತಟ್ಟೆಯನ್ನು ಮುಚ್ಚಿ 5 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಬೇಕು ತದನಂತರ ಒಂದು ಗ್ಲಾಸ್ ಈ ನೀರನ್ನು ಶೋಧಿಸಿಕೊಳ್ಳಬೇಕು.
ಈ ಒಂದು ಮಿಶ್ರಣವನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಪ್ರತಿನಿತ್ಯ ನೀವು ಈ ಒಂದು ವಿಧಾನವನ್ನು ಅನುಸರಣೆ ಮಾಡಿದರೆ ಖಚಿತವಾಗಿದೆ ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬನ್ನು ಕಳೆದುಕೊಳ್ಳಬಹುದು. ಅಷ್ಟೇ ಅಲ್ಲದೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಇನ್ನು ಸಕ್ಕರೆ ಕಾಯಿಲೆ ಇರುವಂತಹ ವ್ಯಕ್ತಿಗಳಿಗೂ ಕೂಡ ಇದು ತುಂಬಾ ಉಪಯುಕ್ತ ಅಂತಾನೆ ಹೇಳಬಹುದು. ರಕ್ತದಲ್ಲಿ ಇರುವಂತಹ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವುದಕ್ಕೆ ಇದು ತುಂಬಾ ಉಪಯುಕ್ತ ಕಾರಿಯಾದಂತಹ ಮನೆಮದ್ದು ಆಗಿದೆ. ಹಾಗಾಗಿ ನೀವೇನಾದರೂ ಅತಿಯಾದ ತೂಕದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಈ ಒಂದು ಸರಳ ವಿಧಾನವನ್ನು ದಿನಕ್ಕೆ ಒಂದು ಬಾರಿಯಾದರೂ ಬಳಸಿ.