ನಾವೆಲ್ಲರೂ ಸಿನಿಮಾಗಳನ್ನು ಧಾರಾವಾಹಿಗಳನ್ನು ನೋಡಿ ಅಲ್ಲಿ ಕಲಾ ವಿದರು ನಟಿಸುವ ಪಾತ್ರಗಳನ್ನು ನೋಡಿ ಎಷ್ಟೋ ಬಾರಿ ನಿಜ ಜೀವನ ದಲ್ಲಿ ಅವರು ಹಾಗೆ ಇರುತ್ತಾರೆ ಎಂದು ಭಾವಿಸಿ ಬಿಡುತ್ತೇವೆ. ನಿಜಜೀ ವನದಲ್ಲಿ ಖಳನಾಯಕನ ಪಾತ್ರ ಮಾಡಿದ ನಟನನ್ನು ಖಳನಾಯಕನಂತೆ ನೋಡುತ್ತೇವೆ ಹಾಗೂ ಹಾಸ್ಯ ನಟನನ್ನು ಸೀರಿಯಸ್ ಆಗಿ ತೆಗೆದುಕೊ ಳ್ಳುವುದಿಲ್ಲ ಆದರೆ ಅವರ ನಿಜ ಜೀವನದಲ್ಲಿ ಹಲವಾರು ಕಲಾವಿದರು ಪಾತ್ರಕ್ಕಿಂತ ವಿರುದ್ಧ ವ್ಯಕ್ತಿತ್ವದವರಾಗಿರುತ್ತಾರೆ. ಹೀಗೆ ಕನ್ನಡ ಕಿರುತೆ ರೆಯ ಗಂಗಾ, ಅಗ್ನಿಸಾಕ್ಷಿ, ಪಾರು ಹೀಗೆ ಸಾಲು-ಸಾಲು ಧಾರವಾ ಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸಿತಾರ ಅವರು. ಮೂಲತಃ ಉತ್ತರ ಕರ್ನಾಟಕದ ಕಡೆಗಿನ ಇವರು ಬಾಲ್ಯ ದಿಂದಲೇ ಅನಾಥೆಯಾಗಿದ್ದು, ಒಂದು ಮಠದಲ್ಲಿ ಒಬ್ಬ ಸ್ವಾಮೀಜಿಯ ಸಹಾಯದಿಂದ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಉದ್ಯೋಗಕ್ಕಾಗಿ ಹಾಗೂ ಕಲೆಯನ್ನು ಬೆಳಕಿಗೆ ತರಬೇಕೆಂಬ ಆಸೆಯಿಂದ ಬೆಂಗಳೂರಿಗೆ ಬರುತ್ತಾರೆ.
ಹತ್ತಿರದ ಸ್ನೇಹಿತರು ಒಬ್ಬರನ್ನು ನಂಬಿಕೊಂಡು ಬೆಂಗಳೂರಿಗೆ ಬಂದ ಅವರಿಗೆ ಅಲ್ಲಿ ದೊಡ್ಡದಾದ ಆಘಾತವಾಗುತ್ತದೆ. ಯಾಕೆಂದರೆ ಯಾರು ಇವರಿಗೆ ಬೆಂಗಳೂರಿಗೆ ಬರಲು ಹೇಳಿದರು ಅವರಿಂದ ಮೋಸ ಹೋಗಿ ರುತ್ತಾರೆ ನಂತರ ಜೀವನ ನಿರ್ವಹಣೆಗಾಗಿ ಹಲವು ಕೆಲಸಗಳನ್ನು ಮಾಡಿಕೊಂಡು ತಮ್ಮ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಬದುಕಿನಲ್ಲಿ ನಡೆದದ್ದೆಲ್ಲವೂ ಕೆಟ್ಟ ವಿಧಿಯಾಟ ಎನ್ನಬಹುದು. ಎಷ್ಟೋ ಬಾರಿ ಮೂರು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದ ದಿನಗಳನ್ನು ನೆನೆಸಿಕೊಳ್ಳುತ್ತಾ ಆ ದಿನಗಳಲ್ಲಿ ಅವರಿಗೆ ಪ್ರತಿದಿನವೂ ಒಂದು ಪ್ಲೇಟ್ ಪಾನಿಪುರಿಯನ್ನು ಕೊಡುತ್ತಿದ್ದ ಪಾನಿಪುರಿ ಮಾಡುತ್ತಿದ್ದವರನ್ನು ಇಂದಿಗೂ ನೆನೆಸಿಕೊಳ್ಳುತ್ತಾರೆ. ಹಾಗೂ ಅವರಿಂದ ಕೆಲಸವನ್ನು ಮಾಡಿಸಿಕೊಂಡು ನಂತರ ಸಂಭಾವನೆ ಕೇಳಿದ ಸಮಯ ದಲ್ಲಿ ಅವಮಾನ ಮಾಡಿದವರನ್ನು ಹಾಗೂ ಅತ್ಯಂತ ಕಷ್ಟದ ಸಮ ಯದಲ್ಲಿ ಸಹಾಯ ಕೇಳಿದಾಗ ಎಷ್ಟೋ ಜನ ಅವರಿಗೆ ಸಹಾಯ ಮಾಡಲಿಲ್ಲವಂತೆ ಅದನ್ನೆಲ್ಲ ನೆನೆಸಿಕೊಳ್ಳುತ್ತಾ ಹೀಗೆ ಹೇಳಿದ್ದಾರೆ.
ಇಂದಿಗೂ ಸಹ ನನಗೆ ಯಾರಾದರೂ ಬಂದು ಸಹಾಯ ಕೇಳಿದರೆ ನಾನು ಅವರು ಏನು ಎತ್ತ ಎಂದು ವಿಚಾರಿಸಿದೆ ನನ್ನ ಕೈಯಲ್ಲಾದಷ್ಟು ಕೊಟ್ಟುಬಿಡುತ್ತೇನೆ ಯಾಕೆಂದರೆ ನನಗೆ ಅವರನ್ನು ನೋಡಿದಾಗ ನಾನು ಕಷ್ಟದಲ್ಲಿದ್ದ ದಿನಗಳು ಮತ್ತು ನನ್ನ ಮೇಲೆ ನಿರ್ಲಕ್ಷ ಮಾಡಿದವರು ನೆನ ಪಾಗುತ್ತಾರೆ ಎಂದು ಹಾಗೂ ಇಂದು ನಾನು ಕಷ್ಟಪಟ್ಟು ದುಡಿದು ಈ ಹಂತಕ್ಕೆ ತಲುಪಿದ್ದೇನೆ ಆದರೆ ಇಷ್ಟು ದಿನ ಸಹಾಯಕ್ಕೆ ಬರದ ನನ್ನ ಸಂಬಂಧಿಕರು ಹಾಗೂ ನೆರೆಹೊರೆಯವರು ಅವಳು ಇಷ್ಟು ಬೇಗ ಹೇಗೆ ಬೆಳೆದಿದ್ದಾಳೆ ಅವಳು ತಪ್ಪು ದಾರಿಯಲ್ಲಿ ನಡೆದಿರಬೇಕು ಎಂದು ಟೀಕಿ ಸುತ್ತಾರೆ. ಆದರೆ ಇದಕ್ಕೆಲ್ಲ ನನ್ನ ಕಠಿಣ ಪರಿಶ್ರಮವೇ ಕಾರಣ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ.