ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ..! ಮಾರ್ಚ್ 13 ರಿಂದ 19ರ ತನಕ ಹೇಗಿರಲಿದೆ ನೋಡಿ..? ನಿಮ್ಮ ಧನಲಾಭ,ಆರೋಗ್ಯ,ಕೆಲಸದ ಜಯ.

ಮೇಷ ರಾಶಿ: ಹಣಕಾಸಿನ ವಿಷಯದಲ್ಲಿ ಉತ್ತಮವಾದ ಬದಲಾವಣೆಗಳನ್ನು ನೋಡುತ್ತೀರಿ. ವ್ಯಾಪಾರಸ್ಥರಿಗೆ ಹಾಗೂ ವ್ಯವಹಾರ ಮಾಡುವವರಿಗೆ ದೊಡ್ಡ ಮಟ್ಟದ ಬದಲಾವಣೆಗಳು ಇರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಸಣ್ಣ ಮಟ್ಟದ ಉದ್ಯಮಿದಾರಿಗಳು ಹಾಗೂ ದೊಡ್ಡ ಮಟ್ಟದ ಉದ್ಯಮದಾರರಿಗೂ ಉತ್ತಮವಾದ ಆರ್ಥಿಕ ಲಾಭಗಳು ಉಂಟಾಗುವ ಸೂಚನೆಗಳಿವೆ.

WhatsApp Group Join Now
Telegram Group Join Now

ವೃಷಭ ರಾಶಿ: ಉದ್ಯೋಗದಲ್ಲಿ ದೊಡ್ಡಮಟ್ಟದ ಒಳ್ಳೆಯ ರೀತಿಯ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಹಾಗೂ ಉದ್ಯೋಗ ಬದಲಾಯಿಸುವ ಯೋಜನೆಯಲ್ಲಿ ಇರುವವರಿಗೆ ನಿಮ್ಮ ನಿರೀಕ್ಷೆಗಿಂತಲೂ ಒಳ್ಳೆಯ ಕೆಲಸಗಳು ಸಿಗುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ. ಹೂವಿನ ವ್ಯಾಪಾರಸ್ಥರಿಗೆ ಬಹಳ ಲಾಭವಾಗುವ ಸಾಧ್ಯತೆಗಳಿವೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ವಾರ ಆಲಸ್ಯ ಹಾಗೂ ಜಡತ್ವ ಕಾಡುತ್ತದೆ. ನಿಮಗೆ ಸಿಗುವ ಅತ್ಯುತ್ತಮವಾದ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ನಿಮ್ಮ ದೇಹ ಹಾಗೂ ಮನಸ್ಸು ನಿಮಗೆ ಸಹಕರಿಸದೇ ಹೋಗಬಹುದು. ಈ ವಾರದಲ್ಲಿ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಆಗ ಮನೆಯಲ್ಲಿ ಶುಭಕರವಾದ ವಾತಾವರಣವಿರುತ್ತದೆ. ನಿಮ್ಮ ನಿಧಾನಗತಿಯ ಮನಸ್ಥಿತಿಗೆ ಕಾರಣವೇನೆಂದು ತಿಳಿದುಕೊಂಡು ಪರಿಹರಿಸಿಕೊಳ್ಳುವುದು ಮುನ್ನಡೆಯುವುದು ಒಳ್ಳೆಯದು.

ಕರ್ಕಾಟಕ ರಾಶಿ: ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟದ ಲಾಭವಿರುತ್ತದೆ. ನಿಮ್ಮ ದುಃಖವು ಈ ವಾರದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಈ ವಾರ ಪೂರ್ತಿ ನಿಮಗೆ ನೆಮ್ಮದಿಯ ವಾತಾವರಣ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸಹ ಸ್ವಲ್ಪ ಉತ್ತಮಗೊಳ್ಳುತ್ತದೆ ಹಾಗೂ ನಿಮ್ಮ ಜೀವನ ನಡೆಯಲು ಬೇಕಾದಷ್ಟು ಎಲ್ಲರಿಗೂ ಅನುಕೂಲತೆಗಳು ಇವರ ಪೂರ್ತಿ ನಿಮಗೆ ಸಿಗಲಿದೆ.

ಸಿಂಹ ರಾಶಿ: ಈ ರಾಶಿಯವರು ನಿರೀಕ್ಷಿಸಿದ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತದೆ. ನಿಮಗೆ ಹಾಗೂ ಬೇರೆಯವರ ಒಳಿತಿಗಾಗಿ ಮಾಡುವ ಎಲ್ಲಾ ಕೆಲಸಗಳು ಫಲ ಕೊಡುತ್ತವೆ. ದೈವಕಾರ್ಯಗಳು ಮಾಡುವವರಿಗೆ ತಕ್ಕ ಫಲ ಸಿಗುತ್ತದೆ. ಬಡ್ಡಿ ವ್ಯವಹಾರಸ್ಥರಿಗೆ ಹಣಕಾಸಿನ ವಸೂಲಿಗೆ ಯಾವುದೇ ತೊಂದರೆ ಇರುವುದಿಲ್ಲ. ಈ ವಾರ ಪೂರ್ತಿ ನಿಮಗೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ ರಾಶಿ: ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಕೆಮಿಕಲ್ ವ್ಯಾಪಾರ ಮಾಡುವವರಿಗೆ ದೊಡ್ಡಮಟ್ಟದ ಲಾಭಗಳಾಗುವ ಸೂಚನೆಗಳಿವೆ. ಕೋರ್ಟು ಕೇಸಿಗೆ ಸಂಬಂಧಪಟ್ಟ ಕೆಲಸಗಳು ಹಾಗೂ ಬಹಳ ದಿನದಿಂದ ಉಳಿದಿದ್ದ ಯಾವುದಾದರೂ ಹಳೆಯ ಕೇಸ್ ನಿಮಗೆ ಸಂಬಂಧಪಟ್ಟಂತೆ ಇದ್ದರೆ ಅದೆಲ್ಲವೂ ನಿಮಗೆ ಈ ವಾರದಲ್ಲಿ ಕ್ಲಿಯರ್ ಆಗುತ್ತದೆ.

ತುಲಾ ರಾಶಿ: ಅಕ್ಕಸಾಲಿಗ ವೃತ್ತಿ ಮಾಡುವವರಿಗೆ ಶುಭವಾರವಾಗಿರುತ್ತದೆ. ಹಾಗೆ ಚಿನ್ನ-ಬೆಳ್ಳಿ ವ್ಯಾಪಾರಸ್ಥರು ಮತ್ತು ಅಪರೂಪದ ಬೆಲೆಬಾಳುವ ವಸ್ತು ಮಾರಾಟ ಮಾಡುವವರು ಹಾಗೂ ಸುಗಂಧದ್ರವ್ಯ ವ್ಯಾಪಾರ ಮಾಡುವವರು ಉತ್ತಮವಾದ ಆರ್ಥಿಕ ಲಾಭಗಳನ್ನು ಗಳಿಸುತ್ತಾರೆ. ಪಾರ್ಟ್ನರ್ ಶಿಪ್ ನಲ್ಲಿ ವ್ಯವಹಾರ ಮಾಡುವವರ ಮಧ್ಯೆ ಸಣ್ಣಪುಟ್ಟ ವೈ ಮನಸ್ಸು ಉಂಟಾಗುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ: ಈ ವಾರದಲ್ಲಿ ನಿಮಗೆ ಮನಸ್ಸಿಗೆ ತುಂಬಾ ನೋವುಂಟು ಮಾಡುವ ಘಟನೆಗಳು ನಡೆಯುತ್ತವೆ. ನೀವು ತಿಳಿದುಕೊಂಡ ಹಾಗೆ ಈ ಪ್ರಪಂಚ ಹಾಗೂ ಜನರು ಇಲ್ಲ ಎನ್ನುವುದು ನಿಮಗೆ ಪದೇಪದೇ ಅರಿವಿಗೆ ಬರುತ್ತದೆ. ಉದ್ಯೋಗದಲ್ಲಿ ನಿಮ್ಮ ಮೇಲಾಧಿಕಾರಿಗಳು ಹಾಗೂ ನಿಮ್ಮ ಕೆಳಗೆ ಕೆಲಸ ಮಾಡುವವರಿಂದ ಕಿರಿಕಿರಿಯನ್ನು ಅನುಭವಿಸುತ್ತೀರಿ. ಇಲ್ಲಸಲ್ಲದ ಅಪವಾದಗಳನ್ನು ಮೇಲೆ ಬರಬಹುದು. ಆದರೂ ಸಂಗತಿಯಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ.

ಧನಸ್ಸು ರಾಶಿ: ಈ ವಾರದಲ್ಲಿ ಧನಸು ರಾಶಿಯ ಯಾರು ಇಂಪಾರ್ಟ್ ಹಾಗೂ ಎಕ್ಸ್ಪೋರ್ಟ್ ಕೆಲಸಗಳನ್ನು ಮಾಡುತ್ತಿರುತ್ತಾರೆ ಅವರಿಗೆ ಶುಭವಾಗುತ್ತದೆ. ಹಾಗೂ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ಕೆಲಸ ಮಾಡುವ ಯೋಜನೆಯಲ್ಲಿ ಇದ್ದವರಿಗೆ ಅದು ಕೈಗೂಡುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿರುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಮಕರ ರಾಶಿ: ಈ ವಾರದಲ್ಲಿ ಬಹಳವೇ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಆರೋಗ್ಯದ ವಿಚಾರವಾಗಿ ಹೆಚ್ಚಾಗಿ ನೋವು ಅನುಭವಿಸುತ್ತೀರಿ. ಆದಾಯವು ಬಹಳ ಕಡಿಮೆಯಾಗುತ್ತದೆ. ಹಾಗೂ ನೀವು ಮಾಡಿದ ಕೆಲಸಗಳಿಗೆ ಪಡೆಯಬೇಕಾಗಿದ್ದ ಸಂಬಳಗಳು ನಿಮ್ಮ ಕೈಸೇರದೇ ಇರಬಹುದು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ಕೋಟ ಕಚೇರಿ ಕೆಲಸಗಳು ನಿರ್ಧಾರವಾಗಿದೆ ಮುಂದಕ್ಕೆ ತಳ್ಳಲ್ಪಡುತ್ತದೆ.

ಕುಂಭ ರಾಶಿ: ಇವರ ಪೂರ್ತಿ ನೀವು ಶುಭ ಹಾಗೂ ಅಶುಭ ಎರಡು ಫಲಗಳನ್ನು ಪಡೆಯುತ್ತೀರಿ. ನೀವು ತಪ್ಪು ಎಂದು ಭಾವಿಸಿದ್ದ ಎಷ್ಟು ವಿಚಾರಗಳು ಸರಿಯಾಗಿ ಇರುವ ಸಾಧ್ಯತೆಗಳಿವೆ. ಗಣ್ಯವ್ಯಕ್ತಿಗಳನ್ನು ಭೇಟಿಯಾಗುವ ಸಂಭವಗಳಿವೆ. ವಾರಂತ್ಯದಲ್ಲಿ ಕುಟುಂಬದ ಜೊತೆ ಹೊರಗೆ ಹೋಗುತ್ತೀರಿ. ಈ ವಾರದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ಗಾರ್ಮೆಂಟ್ಸ್ ಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವವರು ಉತ್ತಮವಾದ ಲಾಭಗಳನ್ನು ಪಡೆಯುತ್ತೀರಿ.

ಮೀನ ರಾಶಿ: ಹಣಕಾಸಿಗೆ ಸಂಬಂಧಪಟ್ಟ ತೊಂದರೆಗಳು ಹಾಗೂ ತಾಪತ್ರಯಗಳು ಕಾಡುತ್ತಲೇ ಇರುತ್ತವೆ. ತೀರ್ಥಕ್ಷೇತ್ರಗಳಿಗೆ ಹೋಗಿ ಬರುವ ಭಾಗ್ಯ ನಿಮಗೆ ದೊರೆಯುತ್ತದೆ. ನೀವು ನಂಬಿರುವ ಬಹಳ ಆತ್ಮೀಯರಿಂದಲೇ ಮೋಸ ಹೋಗುವ ಸಾಧ್ಯತೆಗಳಿವೆ. ಯಾವ ಕಾರಣಗಳು ಇಲ್ಲದೆ ಇದ್ದರೂ ಸಹ ಈ ವಾರ ಪೂರ್ತಿ ಬೇಜಾರಿನಲ್ಲಿ ಇರುತ್ತೀರಿ. ಅದರಿಂದ ವಾರಪೂರ್ತಿ ಮಿಶ್ರ ಫಲವಿರುವ ದಿನವಾಗಿರುತ್ತದೆ ಎಂದು ಸೂಚಿಸಲಾಗಿದೆ.