ಅನೇಕ ಮೂಲದಿಂದ ಧನಾಗಮನ ಈ 6 ರಾಶಿಗೆ ಶುಕ್ರದೆಶೆ ಜೊತೆಗೆ ದೇವಿ ಕೃಪೆ,ಪ್ರತಿ ಕೆಲಸದಲ್ಲೂ ಜಯ ಸಿಗಲಿದೆ..

15 ಮಾರ್ಚ್ 2022 ಮಂಗಳವಾರದ ದಿನ ಭವಿಷ್ಯ.

WhatsApp Group Join Now
Telegram Group Join Now

ಮೇಷ ರಾಶಿ: ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಅವರ ಆಶೀರ್ವಾದ ನಿಮಗೆ ದಾರಿ ತೋರಿಸುತ್ತದೆ. ನೀವೇನಾದರೂ ಕೆಲಸಮಾಡುತ್ತಿದ್ದರೆ ಇಂದು ಉತ್ತಮ ಫಲಿತಾಂಶ ಸಿಗುತ್ತದೆ. ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಮತ್ತು ಇದರಿಂದ ನೀವು ಸಾಕಷ್ಟು ತೃಪ್ತರಾಗಿರುತ್ತೀರಿ. ವ್ಯಾಪಾರಿಗಳು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು.

ವೃಷಭ ರಾಶಿ: ನೀವು ವ್ಯಾಪಾರ ಮಾಡುವವರಾಗಿದ್ದರೆ ಈ ಸಮಯದಲ್ಲಿ ಯಾವುದೇ ಅಪಾಯ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ. ಉದ್ಯೋಗದಲ್ಲಿರುವವರು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನೀವು ಇದೇ ರೀತಿಯಾಗಿ ಕೆಲಸಮಾಡುತ್ತಿದ್ದರೆ ನಿಮ್ಮ ಎಲ್ಲಾ ಕನಸುಗಳು ಶೀಘ್ರದಲ್ಲೇ ನೆರವೇರುತ್ತದೆ.

ಮಿಥುನ ರಾಶಿ: ಕೆಲವು ಹೆಚ್ಚುವರಿ ಕೆಲಸಗಳಿಗಾಗಿ ನೀವು ಇಂದು ಕಚೇರಿಗಳಿಗೆ ಹೋಗಬಹುದು. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ ಯಾಕೆಂದರೆ ನಿಮ್ಮ ಕಠಿಣ ಪರಿಶ್ರಮವು ನಿಮ್ಮನ್ನು ಉತ್ತಮ ಸ್ಥಾನಕ್ಕೆ ಕರೆದೊಯ್ಯುತ್ತದೆ. ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಇಂದು ಉತ್ತಮ ಲಾಭಗಳನ್ನು ಕಾಣುತ್ತೀರಿ. ಹಣದ ವಿಚಾರವಾಗಿ ಹೇಳುವುದಾದರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆ ಕಂಡುಬರುತ್ತದೆ.

ಕರ್ಕಾಟಕ ರಾಶಿ: ಇಂದು ನೌಕರಸ್ಥರಿಗೆ ಶುಭ ದಿನವಾಗಿರುತ್ತದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಇಂದು ನೀವು ಸುವರ್ಣ ಅವಕಾಶಗಳನ್ನು ಪಡೆಯಬಹುದು. ಹಣದ ವಿಚಾರದಲ್ಲಿ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಮತ್ತು ನೀವು ಸ್ವಲ್ಪ ಯೋಚಿಸಿ ಖರ್ಚು ಮಾಡುವುದು ಒಳ್ಳೆಯದು. ಹಾಗೂ ಉಳಿತಾಯದ ಕಡೆ ಗಮನ ಕೊಡಿ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ.

ಸಿಂಹ ರಾಶಿ: ಇಂದು ನಿಮಗೆ ಮಿಶ್ರಫಲ ದಿನವಾಗಿರಲಿದೆ. ಹಣದ ಬಗ್ಗೆ ಹೇಳುವುದಾದರೆ ಇಂದು ನೀವು ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕೆಲಸದ ವಿಚಾರವಾಗಿ ಹೇಳುವುದಾದರೆ ಉದ್ಯೋಗಿಗಳ ಕೆಲಸದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಒತ್ತಡ ಹೆಚ್ಚಾದರೆ ನೀವು ಕೆಲಸದ ಬಗ್ಗೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗದೆ ಹೋಗಬಹುದು.

ಕನ್ಯಾ ರಾಶಿ: ನಿಮ್ಮ ಕೋಪವನ್ನು ನೀವು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರೆ ನೀವು ಯಾರೊಂದಿಗಾದರೂ ಜಗಳಕ್ಕೆ ಹೋಗಬಹುದು. ಇದರಿಂದ ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡಿ. ಕೆಲಸ ಹಾಗೂ ವ್ಯವಹಾರದ ಬಗ್ಗೆ ಹೇಳುವುದಾದರೆ ಈ ದಿನ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಕುಟುಂಬ ಜೀವನವು ಸಾಮಾನ್ಯವಾಗಿರುತ್ತದೆ.

ತುಲಾ ರಾಶಿ: ಇಂದು ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂಗಾತಿಯ ಜೊತೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ನಿಮ್ಮ ಕೈಲಾದಷ್ಟು ಇಂದು ಪ್ರಯತ್ನ ಮಾಡಬೇಕಾಗುತ್ತದೆ. ನೀವು ಕೆಲವು ಪ್ರಮುಖ ಹೊಂದಾಣಿಕೆಗಳನ್ನು ಕೂಡ ಮಾಡಿಕೊಳ್ಳಬೇಕಾಗಿ ಬರಬಹುದು. ನಿಮ್ಮ ತಂದೆಯವರು ಬಹುದಿನಗಳಿಂದ ಯಾವುದಾದರೂ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ ಇಂದು ಸ್ವಲ್ಪ ಸುಧಾರಿಸಿಕೊಳ್ಳುತ್ತಾರೆ.

ವೃಶ್ಚಿಕ ರಾಶಿ: ನೀವು ಇಂದು ಪ್ರಮುಖ ಕಾರ್ಯಗಳನ್ನು ಮಾಡಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಸಂಗಾತಿ ಜೊತೆಗಿನ ಎಲ್ಲಾ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಪೋಷಕರ ಜೊತೆಗಿನ ಸಂಬಂಧ ಉತ್ತಮವಾಗಿರುತ್ತದೆ. ಒಂದು ಪ್ರಮುಖ ಕಾರ್ಯವನ್ನು ನಿಮ್ಮ ತಂದೆಯ ಸಹಾಯದಿಂದ ಪೂರೈಸಬಹುದು. ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಧನಸ್ಸು ರಾಶಿ: ಹಣದ ವಿಚಾರದಲ್ಲಿ ಇಂದು ನಿಮಗೆ ಒಳ್ಳೆಯ ದಿನವಲ್ಲ. ಇಂದು ನಿಮ್ಮ ಕೈಯಲ್ಲಿರುವ ಹಣ ಸುಲಭವಾಗಿ ಖರ್ಚಾಗಬಹುದು ಆದರೆ ಅಷ್ಟೇ ಸುಲಭವಾಗಿ ಇಂದು ನೀವು ಹಣವನ್ನು ಸಂಪಾದಿಸಲು ಸಾಧ್ಯವಾಗುವುದಿಲ್ಲ. ಯಾವುದೇ ವ್ಯವಹಾರದಲ್ಲಿ ಧೈರ್ಯಗೆಡದೆ ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಇಂದು ಕೆಲಸದ ಉತ್ತರವು ಸ್ವಲ್ಪ ಕಡಿಮೆಯಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ತಿಗೊಳ್ಳುತ್ತದೆ.

ಮಕರ ರಾಶಿ: ಇಂದು ನಿಮ್ಮ ಆರೋಗ್ಯ ಕ್ಷೀಣಿಸಬಹುದು, ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಗಮನಹರಿಸುವುದು ಒಳ್ಳೆಯದು. ಹಳೆಯ ಆಹಾರವನ್ನು ಸೇವಿಸಬೇಡಿ. ಲಘು ಹೃದಯದ ವ್ಯಾಯಾಮವನ್ನು ಮಾಡಿ. ಕೆಲಸದ ವಿಚಾರವಾಗಿ ಹೇಳುವುದಾದರೆ ಉದ್ಯೋಗಿಗಳು ಏರಿಳಿತಗಳನ್ನು ಕಾಣಬಹುದು. ನೀವು ದಿನಪೂರ್ತಿ ಕಾರ್ಯನಿರತರಾಗಿರುವ ಅಂತೆ ಕಠಿಣ ಜವಾಬ್ದಾರಿಗಳನ್ನು ನಿಮಗೆ ವಹಿಸಿಕೊಡಬಹುದು.

ಕುಂಭ ರಾಶಿ: ನೌಕರಸ್ಥ ರು ಯಾವುದೇ ತಮಾಷೆಯ ವಿಷಯದಲ್ಲಿ ಸಿಲುಕದಂತೆ ಜಾಗ್ರತೆಯಿಂದ ಇರಬೇಕು. ನಿಮ್ಮ ಕೆಲಸವನ್ನಷ್ಟೇ ಮಾಡಿಕೊಂಡಿರುವುದು ಉತ್ತಮ. ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ವಿಷಯಗಳ ಬಗ್ಗೆ ಚರ್ಚೆ ಮಾಡಿ ಹಾಳು ಮಾಡಿಕೊಳ್ಳಬೇಡಿ. ನೀವೇನಾದರೂ ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ಇಂದು ನೀವು ತೆಗೆದುಕೊಳ್ಳಬಹುದು.

ಮೀನ ರಾಶಿ: ಉದ್ಯೋಗಸ್ಥರು ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಕಾಣುತ್ತೀರಿ. ವೃತ್ತಿ ಸಂಬಂಧಿತ ಸಮಸ್ಯೆಗಳು ಇಂದು ನಿವಾರಣೆಯಾಗಬಹುದು. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ವ್ಯಾಪಾರಸ್ಥರು ಇಂದು ಲಾಭಗಳನ್ನು ಕಾಣಬಹುದು. ಹಣದ ಹರಿವು ಉತ್ತಮವಾಗಿರುತ್ತದೆ. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ಮನೆಯ ವಾತಾವರಣವು ಇಂದು ಸಾಕಷ್ಟು ಉತ್ತಮವಾಗಿರುತ್ತದೆ. ಕುಟುಂಬದೊಂದಿಗೆ ಸಂತೋಷದಿಂದ ದಿನವನ್ನು ಕಳೆಯುತ್ತೀರಿ.

[irp]