ಅಬ್ಬ ಇವರ ಹೋರಾಟ KGF 2 ಬಿಡುಗಡೆ ಆಗಬಾರದಂತೆ,ಬಿಡುಗಡೆ ಆದರೆ ಏನ್ ಮಾಡ್ತಾರಂತೆ ಗೊತ್ತಾ ನೀವೆ ನೋಡಿ ಈ ವಿಡಿಯೋ..

ಕೆಜಿಎಫ್ ಸಿನಿಮಾ ಬಿಡುಗಡೆ ಮಾಡದಂತೆ ಇದೀಗ ಉ’ಗ್ರ ಹೋರಾಟ ಪ್ರಾರಂಭವಾಗುತ್ತದೆ ಕಾರಣ ಏನು ಗೊತ್ತಾ.?ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ಇದೇ ತಿಂಗಳು ಏಪ್ರಿಲ್ 14 ರಂದು ಇಡೀ ವಿಶ್ವದಾದ್ಯಂತ ಬಿಡುಗಡೆಯಾಗಲು ಎಲ್ಲಾ ರೀತಿಯಾದಂತಹ ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದೆ. ಆದರೆ ಇದೀಗ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಇಂದು ಹಲವು ಕನ್ನಡ ಪರ ಸಂಘಟನೆ ಹೋರಾಟಗಾರರು ಹೋರಾಟ ಮಾಡಲು ಸಿದ್ಧರಾಗಿದ್ದಾರೆ. ಈ ರೀತಿಯಾದಂತಹ ಸಂಘಟನೆಗಾರರು ಯಾಕೆ ಹೋರಾಟ ಮಾಡುತ್ತಿದ್ದಾರೆ ಅಂತ ಕಾರಣ ನೋಡುವುದಾದರೆ. ಈ ಸಿನಿಮಾದ ಟ್ರೈಲರ್ ಕಳೆದ ವಾರವಷ್ಟೇ ಬಿಡುಗಡೆಯಾಯಿತು ಉತ್ತಮ ರೀತಿಯಾದಂತಹ ಪ್ರತಿಕ್ರಿಯ ಬಂದರೂ ಕೂಡ ಟ್ರೈಲರ್ ನಲ್ಲಿ ಅತಿ ಹೆಚ್ಚು ಕ್ರೌರ್ಯ ಮತ್ತು ರಕ್ತಪಾತ ಕೊಲೆ ಇರುವುದರಿಂದ ಇದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀಳುತ್ತದೆ.

ಯುವಜನತೆಗೆ ಕ್ರೌರ್ಯದ ಬಗ್ಗೆ ಅಸಡ್ಡೆ ಉಂಟಾಗುತ್ತದೆ ಹಾಗಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಅಂತ ಹೇಳಿದ್ದಾರೆ ಸಾಮಾನ್ಯವಾಗಿ ಯಾವುದೇ ಸಿನಿಮಾ ಬಿಡುಗಡೆ ಮಾಡುವುದಕ್ಕಿಂತ ಮುಂಚೆ ಅದನ್ನು ಒಂದು ಬಾರಿ ವಾಣಿಜ್ಯ ಮಂಡಳಿಯವರು ನೋಡುತ್ತಾರೆ. ಈ ಸಿನಿಮಾದ ಪ್ರತಿಯೊಂದು ಅಂಶವನ್ನು ಗಮನಿಸಿದ ನಂತರ ಈ ಸಿನಿಮಾಗೆ ಯಾವ ಸರ್ಟಿಫಿಕೇಟನ್ನು ನೀಡಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ. ಸಾಮಾನ್ಯವಾಗಿ ಸಿನಿಮಾಗಳಿಗೆ ಎರಡು ರೀತಿಯಾದಂತಹ ಸರ್ಟಿಫಿಕೇಟ್ಗಳನ್ನು ನೀಡುತ್ತಾರೆ ಅದರಲ್ಲಿ UA ಸರ್ಟಿಫಿಕೇಟ್ ಮತ್ತು A ಸರ್ಟಿಫಿಕೇಟ್ ಎಂಬ ಎರಡು ವಿಧಗಳಿರುತ್ತವೆ. ಸಿನಿಮಾ ಯಾವ ಕಥೆಯ ಆಧಾರದ ಮೇಲೆ ನಿರ್ಮಾಣವಾಗಿದೆ ಹಾಗೂ ಈ ಸಿನಿಮಾದಲ್ಲಿ ಏನಾದರೂ ಸಮಾಜಘಾತಕತನ ಅಥವಾ ಕ್ರೌರ್ಯ ಇನ್ನು ಮುಂತಾದ ಚಟುವಟಿಕೆಗಳು ಇದ್ದರೆ ಅದನ್ನು A ಸರ್ಟಿಫಿಕೇಟ್ ಎಂದು ಪರಿಗಣಿಸಲಾಗುತ್ತದೆ.

WhatsApp Group Join Now
Telegram Group Join Now

ಸಿನಿಮಾದಲ್ಲಿ ಯಾವುದೇ ರೀತಿಯಾದಂತಹ ಕ್ರೌರ್ಯ ರಕ್ತಪಾತವಿಲ್ಲದೆ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡಿದ್ದರೆ ಹಾಗೂ ಕೌಟುಂಬಿಕ ಸನ್ನಿವೇಶಗಳನ್ನು ಹಾಗೂ ಕುಟುಂಬದವರು ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾಗಳು ಆಗಿದ್ದರೆ ಅದನ್ನು UA ಸರ್ಟಿಫಿಕೇಟ್ ಎಂದು ಘೋಷಣೆ ಮಾಡಲಾಗುತ್ತದೆ. ಆದರೆ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಹಳ ಕ್ರೌರ್ಯತೆ ಇಂದ ಕೂಡಿರುವುದನ್ನು ನಾವು ಈಗಾಗಲೇ ಟ್ರೈಲರ್ ನಲ್ಲಿ ನೋಡಿದ್ದೇವೆ. ಆಗಿದ್ದರೂ ಕೂಡ ಸಿನಿಮಾ ಮಂಡಳಿಯವರು UA ಸರ್ಟಿಫಿಕೇಟನ್ನು ನೀಡಿದ್ದಾರೆ ಹಾಗಾಗಿ ಕನ್ನಡಪರ ಸಂಘಟನೆಗಳು ಈ ರೀತಿ ಸರ್ಟಿಫಿಕೇಟ್ ನೀಡಿರುವುದು ನಿಜಕ್ಕೂ ತಪ್ಪು ಹಾಗಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಅಂತ ಹೇಳಿದ್ದಾರೆ.

[irp]