16 ಏಪ್ರಿಲ್ 2022 ಶನಿವಾರದ ದಿನ ಭವಿಷ್ಯ.
ಮೇಷ ರಾಶಿ: ಕೆಲಸದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಿರುತ್ತದೆ. ಇತ್ತೀಚಿಗೆ ನಿಮ್ಮ ಕೆಲಸಕ್ಕೆ ಸಂಬಂಧಪಟ್ಟಹಾಗೆ ಇಂಟರ್ವ್ಯೂ ಕೊಟ್ಟಿದ್ದರೆ ನೀವು ಸಕಾರಾತ್ಮಕ ಉತ್ತರವನ್ನು ಅವರಿಂದ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರು ಅವರ ವ್ಯವಹಾರ ಹೆಚ್ಚಿಸಲು ಉತ್ತಮ ಅವಕಾಶಗಳನ್ನು ಇಂದು ಪಡೆಯಬಹುದು.
ಈ ದಿನದ ಅದೃಷ್ಟದ ಸಂಖ್ಯೆ 1, ಅದೃಷ್ಟದ ಬಣ್ಣ ಗುಲಾಬಿ. ಉತ್ತಮ ಸಮಯ ಸಂಜೆ 5:00ಗಂಟೆಯಿಂದ ರಾತ್ರಿ 8:00ರವರೆಗೆ.
ವೃಷಭ ರಾಶಿ: ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ ಸಾಮಾನ್ಯ ದಿನವಾಗಿರುತ್ತದೆ. ನೀವು ಮಾಡುತ್ತಿರುವ ಕೆಲಸಗಳಲ್ಲಿ ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಿ ಬರಬಹುದು. ನೀವು ಮಾಡಿರುವ ಕೆಲಸಗಳಿಂದ ಬೇರೆ ಅಧಿಕಾರಿಗಳ ಅಷ್ಟೊಂದು ತೃಪ್ತರಾಗುವುದಿಲ್ಲ. ಹಾಗಾಗಿ ಅವರ ಕೋಪವನ್ನು ನೀವು ಎದುರಿಸಬೇಕಾಗುತ್ತದೆ.
ಈ ದಿನದ ಅದೃಷ್ಟ ಸಂಖ್ಯೆ 1, ಅದೃಷ್ಟದ ಬಣ್ಣ ನೇರಳೆ. ಉತ್ತಮ ಸಮಯ ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 2:00ರವರೆಗೆ.
ಮಿಥುನ ರಾಶಿ: ಇದ್ರೆ ನೀವು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ವಿಶೇಷವಾಗಿ ನಿಮ್ಮ ಸುತ್ತಮುತ್ತಲಿನ ಜನರೊಡನೆ ಯಾವುದೇ ರೀತಿಯ ಮನಸ್ತಾಪವನ್ನು ಮಾಡಿಕೊಳ್ಳಬೇಡಿ. ಈ ದಿನ ಯಾರೊಂದಿಗೂ ವಿವಾದವನ್ನು ಮಾಡಬೇಡಿ ಮತ್ತು ಅಂತಹ ಸಂದರ್ಭಗಳಲ್ಲಿ ನೀವು ನಿಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.
ಈ ದಿನದ ಅದೃಷ್ಟದ ಸಂಖ್ಯೆ 1, ಅದೃಷ್ಟದ ಬಣ್ಣ ಕೇಸರಿ. ಉತ್ತಮ ಸಮಯ ಬೆಳಗ್ಗೆ 7:30 ರಿಂದ 12:00 ರವರೆಗೆ.
ಕಟಕ ರಾಶಿ: ನೀವು ಯಾವುದಾದರೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಉತ್ತಮ ನಿರ್ವಹಣೆಯಿಂದ ಇಂದು ನಿಮ್ಮ ಬಾಸ್ ನಿಮ್ಮನ್ನು ಹೊಗಳಬಹುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಇನ್ನು ಮುಂದೆ ಅದಕ್ಕಿಂತಲೂ ಉತ್ತಮವಾದದ್ದನ್ನು ನೀಡಲು ಪ್ರಯತ್ನ ಮಾಡಿ.
ಈ ದಿನದ ಅದೃಷ್ಟದ ಸಂಖ್ಯೆ 1, ಅದೃಷ್ಟದ ಬಣ್ಣ ನೀಲಿ. ಉತ್ತಮ ಸಮಯ ಮಧ್ಯಾಹ್ನ 2:30 ರಿಂದ ಸಂಜೆ 5:00 ರವರೆಗೆ.
ಸಿಂಹ ರಾಶಿ: ಇನ್ನು ನೀವು ಕೆಲಸ ಮಾಡುವುದರ ಜೊತೆಗೆ ನಿಮ್ಮ ಮೇಲಾಧಿಕಾರಿಗಳ ಜೊತೆ ಉತ್ತಮವಾದ ಸಂಬಂಧವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ನೀವು ಕೆಲಸ ಮಾಡುವ ತಾಣದಲ್ಲಿ ಶಾಂತಿ ಹಾಗೂ ತಾಳ್ಮೆಯಿಂದ ಹಾಗೂ ಇತರರೊಂದಿಗೆ ಖುಷಿಯಿಂದ ಇರಲು ಪ್ರಯತ್ನಿಸಿ.
ಈ ದಿನದ ಅದೃಷ್ಟದ ಸಂಖ್ಯೆ 6, ಅದೃಷ್ಟದ ಬಣ್ಣ ಬಿಳಿ. ಉತ್ತಮ ಸಮಯ 7:30 ರಿಂದ ಮಧ್ಯಾಹ್ನ :02ರವರೆಗೆ.
ಕನ್ಯಾ ರಾಶಿ: ಆರೋಗ್ಯದ ದೃಷ್ಟಿಯಿಂದ ಇದನ್ನು ಅಷ್ಟೊಂದು ಉತ್ತಮವಾಗಿರುವುದಿಲ್ಲ ಹಾಗಾಗಿ ನೀವು ಕೆಲಸದ ಕಡೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ವಿಶೇಷವಾಗಿ ನೀವು ತಂಪು ಪಾನೀಯಗಳನ್ನು ಸೇವಿಸುವುದು ತಪ್ಪಿಸಿ. ಕಚೇರಿಯಲ್ಲಿ ಸಹದ್ಯೋಗಿಗಳೊಂದಿಗೆ ಒಟ್ಟಿಗೆ ಕೆಲಸ ಮಾಡಲು ಪ್ರಯತ್ನಿಸಿ.
ಈ ದಿನದ ಅದೃಷ್ಟದ ಸಂಖ್ಯೆ 4, ಅದೃಷ್ಟದ ಬಣ್ಣ ಕೇಸರಿ .ಉತ್ತಮ ಸಮಯ ಬೆಳಿಗ್ಗೆ 7:00 ರಿಂದ 11:00 ಗಂಟೆವರೆಗೆ.
ತುಲಾ ರಾಶಿ: ನೀವು ಮನೆಗೆ ಸಂಬಂಧಪಟ್ಟಂತೆ ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗುತ್ತಿದ್ದರೆ ಮೊದಲು ನಿಮ್ಮ ಮನೆಯ ಹಿರಿಯರ ಬಳಿ ಮಾತನಾಡಿ ನಂತರ ಆ ಬಗ್ಗೆ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ಉತ್ತಮ. ಕೆಲಸದ ವಿಚಾರವಾಗಿ ಬಹಳ ಶುದ್ದವಾಗಿ. ಹಾಗೆಯೇ ಸ್ಥಿರವಾಗಿರುತ್ತದೆ.
ಈ ದಿನದ ಅದೃಷ್ಟದ ಸಂಖ್ಯೆ 1, ಅದೃಷ್ಟದ ಬಣ್ಣ ಕೇಸರಿ. ಉತ್ತಮ ಸಮಯ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ.
ವೃಶ್ಚಿಕ ರಾಶಿ: ಹಣದ ವಿಚಾರವಾಗಿ ಈ ದಿನ ಸ್ವಲ್ಪ ಕಾಳಜಿಯನ್ನು ವಹಿಸಿ. ಹಣಸಂಪಾದನೆಗಾಗಿ ಈಗಲೇ ತಪ್ಪು ಹಾದಿಯನ್ನು ಹಿಡಿದರೆ ತಿದ್ದಬೇಕಾಗುತ್ತದೆ. ಹಣದ ವಿಚಾರವಾಗಿ ಯಾವುದೇ ಕೆಲಸವನ್ನು ಮಾಡಲು ಹೋದರೆ ಪ್ರಮಾಣಿಕತೆಯನ್ನು ವಹಿಸಿ. ಇಂದು ಉದ್ಯೋಗಿಗಳಿಗೆ ಬಹಳ ಅದೃಷ್ಟದ ದಿನವಾಗಿರುತ್ತದೆ.
ಈಗ ಅದೃಷ್ಟದ ಸಂಖ್ಯೆ 5,ಅದೃಷ್ಟದ ಬಣ್ಣ ಗುಲಾಬಿ. 7:30 ರಿಂದ 11:00 ಗಂಟೆವರೆಗೆ ಉತ್ತಮ ಸಮಯ
ಧನಸ್ಸು ರಾಶಿ: ನಿಮ್ಮ ಕೆಲವು ಪ್ರಮುಖ ಕೆಲಸಗಳು ಸಮಸ್ಯೆಗಳ ಮಧ್ಯದಲ್ಲಿ ಸಿಲುಕಬಹುದು, ಹಾಗಾಗಿ ನಿಮ್ಮ ಕೆಲಸಗಳು ಪೂರ್ತಿಯಾಗಲು ಸಮಸ್ಯೆಯಾಗುತ್ತದೆ. ಈದಿನ ವ್ಯಾಪಾರಸ್ಥರಿಗೆ ಬಹಳ ಲಾಭ ಆಗುವಂತಹ ದಿನವಾಗಿರುತ್ತದೆ. ನೀವು ಇಂದು ದೊಡ್ಡ ಆರ್ಥಿಕ ಲಾಭವನ್ನು ಸಹ ನಿರೀಕ್ಷಿಸಬಹುದು.
ಈ ದಿನದ ಅದೃಷ್ಟ ಸಂಖ್ಯೆ 2, ಅದೃಷ್ಟದ ಬಣ್ಣ ಹಳದಿ. ಉತ್ತಮ ಸಮಯ ಮಧ್ಯಾಹ್ನ 3:00ರಿಂದ ಸಂಜೆ 5:00ರವರೆಗೆ
ಮಕರ ರಾಶಿ: ಮನೆಯಲ್ಲಿ ಹಿರಿಯರು ಇದ್ದರೆ ನೀವು ಇಂದು ಅವರ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಕೆಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶಗಳು ನಿಮಗೆ ಸಿಗಬಹುದು. ಮದುವೆಯಾಗಿರುವವರು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷದಿಂದ ಕಾಲವನ್ನು ಕಳೆಯುತ್ತೀರಿ.
ಈ ದಿನದ ಅದೃಷ್ಟದ ಸಂಖ್ಯೆ 4, ಅದೃಷ್ಟದ ಬಣ್ಣ ಕೇಸರಿ. ಉತ್ತಮ ಸಮಯ 4:00ರಿಂದ 8:00 ಗಂಟೆ ವರೆಗೆ.
ಕುಂಭ ರಾಶಿ: ನೀವು ವ್ಯಾಪಾರಸ್ಥರು ಆಗಿದ್ದರೆ ಕಳೆದ ಕೆಲವು ದಿನಗಳಿಂದ ಯಾವುದಾದರೂ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಯೋಜನೆಯಲ್ಲಿ ಇದ್ದರೆ ಯಾರ ಸಲಹೆಯನ್ನು ತೆಗೆದುಕೊಳ್ಳದೆ ಉದ್ಯೋಗವನ್ನು ಮಾಡುವ ತಪ್ಪನ್ನು ಮಾಡಬೇಡಿ ಉದ್ಯೋಗಿಗಳಿಗೆ ತುಂಬಾ ಒತ್ತಡವನ್ನು ಹಾಕಿಕೊಳ್ಳುವ ದಿನವಾಗಿರುತ್ತದೆ.
ನಿಮ್ಮ ಅದೃಷ್ಟದ ಸಂಖ್ಯೆ 4, ಅದೃಷ್ಟದ ಬಣ್ಣ ಕೆಂಪು. ಉತ್ತಮ ಸಮಯ ಬೆಳಿಗ್ಗೆ 7:00ರಿಂದ 12:00ಗಂಟೆವರೆಗೆ.
ಮೀನ ರಾಶಿ: ಇದು ನಿಮ್ಮ ಕೆಲಸ ಬಗ್ಗೆ ಹೆಚ್ಚು ಗಮನ ಹರಿಸಲು ಸೂಚಿಸಲಾಗಿದೆ. ಇಲ್ಲವಾದರೆ ನೀವು ಮಾಡುತ್ತಿರುವ ಕೆಲಸದಲ್ಲಿ ತೊಂದರೆ ಆಗಬಹುದು. ವ್ಯಾಪಾರಸ್ಥರು ಉತ್ತಮ ಲಾಭಕ್ಕಾಗಿ ಇದನ್ನು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಮನೆಯ ಸದಸ್ಯರ ಜೊತೆ ಸಣ್ಣ ವಿಷಯಕ್ಕೆ ವಿವಾದ ಉಂಟಾಗಬಹುದು.
ಈ ದಿನದ ಅದೃಷ್ಟದ ಸಂಖ್ಯೆ 2, ಅದೃಷ್ಟದ ಬಣ್ಣ ಬಿಳಿ. ಉತ್ತಮವಾದ ಸಮಯ ಬೆಳಿಗ್ಗೆ 7:00ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ.