ಏಪ್ರಿಲ್ 16ರಂದು ಚೈತ ಪೂರ್ಣಿಮಾ ಹನುಮಾನ್ ಜಯಂತಿ. ಈ 4 ರಾಶಿಯವರು ಒಳ್ಳೆಯ ಸ್ಥಾನವನ್ನು ತಲುಪಲಿದ್ದಾರೆ.
ಅಮಾವಾಸ್ಯೆ ಹಾಗೂ ಹುಣ್ಣಿಮೆ ಎನ್ನುವುದು ಇದು ನೈಸರ್ಗಿಕವಾಗಿ ನಡೆಯುವ ಒಂದು ಕ್ರಿಯೆ. ಅಮಾವಾಸ್ಯೆ, ಪೌರ್ಣಮಿ ದಿನದಂದು ಈ ಭೂಮಿಯ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಮಹತ್ವದ ಬದಲಾವಣೆ ಉಂಟಾಗುತ್ತದೆ. ಪೌರ್ಣಮಿ ಹಾಗು ಅಮಾವಾಸ್ಯೆ ದಿನ ನಡೆಯುವ ಹಲವಾರು ಬದಲಾವಣೆಗಳಲ್ಲಿ ನಾವೆಲ್ಲ ಗಮನಿಸಿರುವ ಹಾಗೆ ಹುಣ್ಣಿಮೆಯ ದಿನ ಚಂದ್ರನ ಹಾಗೂ ಭೂಮಿಯ ಅಂತರಗಳು ಕಡಿಮೆ ಇರುವುದರಿಂದ ಭೂಮಿಯ ಆಕರ್ಷಣೆಗೆ ಅಲೆಗಳು ಉಕ್ಕಿ ಬರುತ್ತವೆ. ಆದ್ದರಿಂದ ಈ ಸಮಯದಲ್ಲಿಯೇ ಅತಿ ಹೆಚ್ಚಾಗಿ ಭೂಕಂಪದ ಹಾಗೂ ಸುನಾಮಿಯ ವಾತಾವರಣ ಸೃಷ್ಟಿ ಯಾಗುವುದು. ಈ ರೀತಿಯಾಗಿ ಬದಲಾವಣೆಗಳು ಉಂಟಾದಾಗ ಗ್ರಹಗಳಲ್ಲಿ ಉಂಟಾಗುವಂತಹ ವೈಪರೀತ್ಯಗಳ ಜೊತೆಗೆ ಮನುಷ್ಯನ ಜೀವನದಲ್ಲಿ ಸಹ ಹಲವು ವ್ಯತ್ಯಾಸಗಳನ್ನು ಉಂಟುಮಾಡುತ್ತದೆ. ಹಾಗೇ ಕೆಲವು ರಾಶಿಗಳಿಗೆ ಇದು ಅನುಕೂಲಕರವಾಗಿರುತ್ತದೆ . ಇದೇ ತಿಂಗಳ ಏಪ್ರಿಲ್ 16ರ ಚೈತ್ರ ಹುಣ್ಣಿಮೆಯ ನಂತರ ಈ ಕೆಲವು ರಾಶಿಗಳಿಗೆ ಅವರ ಅದೃಷ್ಟವು ಉತ್ತಮವಾಗಿರುತ್ತದೆ.
ಅದರಲ್ಲಿ ಮೊದಲಿಗೆ ಸಿಂಹ ರಾಶಿಯವರಿಗೆ ಅವರು ನಿರೀಕ್ಷೆ ಮಾಡಿದಂತಹ ಫಲಿತಾಂಶವು ಕೆಲಸಗಳಲ್ಲಿ ಸಿಗಲಿದೆ ಹಾಗೂ ಸಿಂಹ ರಾಶಿಯವರು ವ್ಯಾಪಾರ ಮಾಡಿ ಹಣ ಮಾಡಬೇಕು ಎಂದಾದರೆ ನಿಮ್ಮ ನಿರೀಕ್ಷೆಗಳು ಹದಿನಾರನೇ ತಾರೀಖಿನ ನಂತರ ಎಲ್ಲವೂ ನೀವು ಅಂದುಕೊಂಡಂತೆ ಆಗುವುದು. ನಿರುದ್ಯೋಗಿಗಳು ಹಾಗೂ ಉದ್ಯೋಗವಕಾಶಕ್ಕಾಗಿ ಅಥವಾ ನೆಚ್ಚಿನ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದ ಎಲ್ಲರಿಗೂ ನೀವು ಆಸೆಪಟ್ಟಿದ್ದ ಸ್ಥಳದಲ್ಲಿಯೇ ಇದ್ದು ಕೆಲಸ ಮಾಡುವಂತಹ ಅವಕಾಶಗಳು ಸಿಗುವುದು, ನಿಮ್ಮ ನಿರೀಕ್ಷೆಯ ಕೆಲಸಗಳು ಸಹ ಸಿಗುವುದು. ಕೆಲಸದ ವಿಚಾರದಲ್ಲಿ ನೀವು ಒಳ್ಳೆ ಹೆಸರನ್ನು ಕೂಡ ಮಾಡುತ್ತೀರಿ. ಮತ್ತು ನೀವು ಮಾಡುವ ನಿಮ್ಮ ಎಲ್ಲಾ ಕೆಲಸಗಳಲ್ಲೂ ವಿಜಯ ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭಗಳು ಸಹ ಮೊದಲಿಗಿಂತ ಹೆಚ್ಚಾಗಿ ಕಂಡು ಬರುವ ಸಾಧ್ಯತೆಗಳಿವೆ.
ವ್ಯಾಪಾರಸ್ಥರು ಹೊಸ ಉದ್ಯೋಗವನ್ನು ಸ್ಥಾಪಿಸುವ ಯೋಜನೆ ಇದ್ದರೆ ಅದಕ್ಕೆ ಪೂರಕವಾಗಿ ಪರಿಸ್ಥಿತಿಗಳು ಇರುತ್ತದೆ . ನೀವು ಯಾವುದೇ ವ್ಯವಹಾರಕ್ಕೆ ಕೈ ಹಾಕಿದರೂ ಸಹ ಹೆಚ್ಚು ಲಾಭವನ್ನು ತಂದುಕೊಡುತ್ತದೆ. ನಿಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ನೀವು ನಿಮ್ಮ ಕೆಲಸದಲ್ಲಿ ಉನ್ನತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಕಲೆಗಳ ವಿಚಾರವಾಗಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು ಕೂಡಿ ಬರಲಿದೆ. ನಿಮಗೆ ಬರುವ ಪ್ರತಿ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರೆ ನೀವು ಇನ್ನಷ್ಟು ಜೀವನದಲ್ಲಿ ಮುಂದೆ ಬರುವ ಎಲ್ಲಾ ಸಾಧ್ಯತೆಗಳಿವೆ. ಮದುವೆ ಆಗದೆ ಇರುವವರಿಗೆ ಕಂಕಣಬಲ ಕೂಡಿ ಬರುವ ಸಾಧ್ಯತೆಗಳು ಇವೆ. ಹಣಕಾಸಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ಕೂಡ ಸ್ವಲ್ಪಸ್ವಲ್ಪವಾಗಿ ಇನ್ನು ಮುಂದೆ ಪರಿಹಾರವಾಗುತ್ತಾ ಬರುತ್ತದೆ.ಇಷ್ಟೆಲ್ಲ ಒಳ್ಳೆಯ ವಿಷಯಗಳ ಜೊತೆ ಇರುವ ಎಚ್ಚರಿಕೆಗಳಿಗೆ ಏನೆಂದರೆ ಆರೋಗ್ಯದ ವಿಷಯದಲ್ಲಿ ಮಾತ್ರ ಹೆಚ್ಚು ಜಾಗರೂಕರಾಗಿರಬೇಕು.
ಕೆಲಸದ ವಿಚಾರದಲ್ಲಿ ಮೈಮರೆತು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ಇನ್ನು ಮುಂದೆ ನೀವೇನಾದ್ರೂ ಯಾವುದೇ ಕೆಲಸಕ್ಕಾಗಿ ಮನೆಯಿಂದ ಆಚೆ ಹೊರಟರು ಸಹ ಹತ್ತಿರದ ಶಿವಾಲಯ ದೇವಾಲಯಕ್ಕೆ ಹೋಗಿ ಶಿವನ ದರ್ಶನವನ್ನು ಪಡೆದು ಕೆಲಸ ಮುಂದುವರಿಸುವುದ್ದರಿಂದ ಖಂಡಿತವಾಗಿ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಅದೇ ರೀತಿಯಾಗಿ ಚೈತ್ರ ಪೌರ್ಣಮಿಯ ದಿನ ಲಕ್ಷ್ಮಿ ಆರಾಧನೆಯನ್ನು ಸಹ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷವೂ ನಿಮ್ಮ ಮೇಲೆ ಇರುತ್ತದೆ. ಆದ್ದರಿಂದ ಚೈತ್ರ ಪೌರ್ಣಿಮ ದಿನ ತಪ್ಪದೇ ಲಕ್ಷ್ಮಿ ಆರಾಧನೆ ಮಾಡಿ ನಿಮ್ಮ ಮನೆಯಲ್ಲಿರುವ ಎಲ್ಲಾ ಕಷ್ಟಗಳು ಸಹ ದೂರ ಆಗುವಂತೆ ನೋಡಿಕೊಳ್ಳಿ. ಈ ವಿಷಯಕ್ಕೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಗಾಗಿ ವೀಡಿಯೋವನ್ನು ಪೂರ್ತಿಯಾಗಿ ನೋಡಿ.