ಹೊಟ್ಟೆ ತುಂಬಾ ಗ್ಯಾಸ್ ಓಡಾಡುತ್ತಾ ಇದಿಯಾ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆ ಮಾಡಲು ಇದೊಂದು ಕೆಲಸ ಮಾಡಿ ಸಾಕು ಸಂಜೀವಿನಿಯಂತೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುರಕ್ಷೆ ಮಾಡುತ್ತದೆ.ಗ್ಯಾಸ್ಟ್ರಿಕ್ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಈ ಒಂದು ಸಮಸ್ಯೆಯನ್ನು ಎದುರಿಸುತ್ತ ಇರುವುದನ್ನು ನಾವು ನೋಡಬಹುದು ಗ್ಯಾಸ್ಟ್ರಿಕ್ ಸಮಸ್ಯೆ ಬಂದರೆ ಸೊಂಟ ನೋವು, ಮಂಡಿ ನೋವು, ಕೈಕಾಲು ನೋವು ಅಥವಾ ಅತಿಯಾದ ತಲೆನೋವು ಎದೆ ಉರಿ, ಹೊಟ್ಟೆ ಉರಿ, ಹುಳಿತೇಗು ಈ ರೀತಿ ನಾನ ರೀತಿಯಾದಂತಹ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದು ಎಲ್ಲದಕ್ಕೂ ಒಂದೇ ಕಾರಣ ನಮ್ಮ ಹೊಟ್ಟೆಯಲ್ಲಿ ಉತ್ಪತ್ತಿಯಾಗುವಂತಹ ವಾಯು ಹೌದು ಇದನ್ನು ನಾವು ನಿವಾರಣೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಏಕೆಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡುವಂತಹ ಗುಣವನ್ನು ಈ ವಾಯು ಒಳಗೊಂಡಿದೆ. ಹೀಗಾಗಿ ಇಂದು ಗ್ಯಾಸ್ಟಿಕ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು ಅಂದರೆ ಯಾವ ರೀತಿಯಾದಂತಹ ವಿಧಾನವನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ.
ಕೆಲವರಂತೂ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗಬೇಕು ಅಂತ ಮಾತ್ರೆಗಳನ್ನು ಅಥವಾ ಟಾನಿಕ್ ಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಅವುಗಳಿಂದಲೂ ಕೂಡ ಒಂದು ಸಮಸ್ಯೆಗೆ ಪರಿಹಾರ ಎಂಬುವುದು ದೊರೆಯುವುದಿಲ್ಲ. ಏಕೆಂದರೆ ನಾವು ತೆಗೆದುಕೊಂಡಂತಹ ಔಷಧಿಯು ಕೂಡ ನಮ್ಮ ದೇಹಕ್ಕೆ ಸಲ್ಲುವುದಿಲ್ಲ ಹಾಗಾಗಿ ಇಂತಹ ಸಮಸ್ಯೆ ನಿವಾರಣೆಯಾಗುವುದಿಲ್ಲ. ನಾವು ಯಾವುದೇ ಆಹಾರ ಸೇವನೆ ಮಾಡಿದರು ಕೂಡ ಅದು ನಮ್ಮ ಹೊಟ್ಟೆಯ ಒಳಗೆ ಸೇರಿದ ಮೂರು ಗಂಟೆಯ ಒಳಗೆ ಜೀರ್ಣವಾಗ ಬೇಕು. ಈ ರೀತಿ ಆದರೆ ಮಾತ್ರ ನಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಇದೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಒಂದು ವೇಳೆ ನಾವು ತಿಂದ ಆಹಾರ ಮೂರು ಗಂಟೆಯಾದರು ಕೂಡ ಇನ್ನು ಜೀರ್ಣವಾಗಿಲ್ಲ ಅಂತ ಅಂದರೆ ಅಲ್ಲಿ ಗ್ಯಾಸ್ಟಿಕ್ ಅಂದರೆ ಕೆಟ್ಟವಾಯು ಉತ್ಪತ್ತಿಯಾಗುತ್ತಿದೆ ಅಂತ ಹೇಳಬಹುದು.
ಯಾರಿಗೆ ಜೀರ್ಣಾಂಗ ವ್ಯವಸ್ಥೆ ಸರಿ ಇರುವುದಿಲ್ಲ ಅಂತವರಿಗೆ ಮೊಟ್ಟಮೊದಲು ಕಂಡುಬರುವಂತಹ ಕಾಯಿಲೆಯೆಂದರೆ ಅದು ಗ್ಯಾಸ್ಟಿಕ್ ಸಮಸ್ಯೆ. ಈ ಸಮಸ್ಯೆ ಬಂದರೆ ರೋಗಗಳ ಸರಮಾಲೆಯೇ ಒಂದರ ಹಿಂದೆ ಮತ್ತೊಂದು ಸರಪಳಿಯಂತೆ ಸೇರಿಕೊಳ್ಳುತ್ತದೆ ಇನ್ನು ಸಾಮಾನ್ಯವಾಗಿ ಗ್ಯಾಸ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು ಅಂತ ನೀವು ಕೆಲವೊಮ್ಮೆ ಮಾತ್ರ ಮತ್ತು ಟಾನಿಕ್ ಗಳನ್ನು ತೆಗೆದುಕೊಂಡರೂ ಕೂಡ ಅದು ನಿಮ್ಮ ದೇಹದ ಮೇಲೆ ಯಾವುದೇ ರೀತಿಯಾದಂತಹ ಪ್ರಯೋಜನಕಾರಿ ಬೀರದೆ ಇರುವುದಕ್ಕೆ ಮತ್ತೊಂದು ಕಾರಣವಿದೆ ಅದೇನೆಂದರೆ ನೀವು ತೆಗೆದುಕೊಂಡ ಔಷಧಿಯು ಕೂಡ ನಿಮ್ಮ ಹೊಟ್ಟೆಯೊಳಗೆ ಜೀರ್ಣವಾಗುವುದಿಲ್ಲ ಹಾಗಾಗಿ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ.