ಈ ಪಿರಮಿಡ್ಡುಗಳನ್ನು ಹೇಗೆ ರಚನೆಯಾದವು ಗೊತ್ತ.? ಈ ಪಿರಮಿಡ್ ನಾ ರಹಸ್ಯವನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯವಾಗುತ್ತದೆ.ಭೂಮಿಯಿಂದ 480 ಅಡಿ ಎತ್ತರ 4500 ವರ್ಷಗಳ ಹಿಂದಿನ ಈ ಪುರಾತನ ಪಿರಮಿಡ್ ನಾ ಒಳಗೆ ಒಂದು ಚಿಕ್ಕ ಸುರಂಗದಲ್ಲಿ ಏನಿದೆ ಅಂತ ತಿಳಿದುಕೊಳ್ಳುವುದಕ್ಕೆ ಕ್ಯಾಮರವನ್ನು ಕಳುಹಿಸಿಕೊಡುತ್ತಾರೆ. ಈ ಸುರಂಗದ ಒಂದು ಪ್ರದೇಶಕ್ಕೆ ಬಂದು ಈ ರೋಬೋಟಿಕ್ ಕ್ಯಾಮೆರಾ ನಿಂತು ಹೋಗುತ್ತದೆ. ಏಕೆಂದರೆ ಈ ಕ್ಯಾಮರಾದ ಮುಂದೆ ಒಂದು ಕಲ್ಲಿನ ಸ್ಲಾಬ್ ಇರುತ್ತದೆ ಇದನ್ನು ನೋಡಿದಂತಹ ರಿಸರ್ಚ್ ತಂಡದವರು ಅಂದುಕೊಳ್ಳುತ್ತಾರೆ ಈ ಕಲ್ಲಿನ ಹಿಂದೆ ಏನೋ ರಹಸ್ಯ ಖಂಡಿತವಾಗಿಯೂ ಇದೆ ಅಂತ. ಈ ಕಲ್ಲಿನ ಸ್ಲಾಬ್ ನಾ ಹಿಂದೆ ಒಂದು ಅದ್ಭುತವಾದಂತಹ ರಹಸ್ಯ ಇದೆ ಎಂದು ಅನುಮಾನ ಪಡುತ್ತಾರೆ ತದನಂತರ ಈ ಒಂದು ರಹಸ್ಯವನ್ನು ಭೇದಿಸಬೇಕು ಅಂತ ಅಂದುಕೊಳ್ಳುತ್ತಾರೆ. ತದನಂತರ ಈ ಒಂದು ಸುರಂಗದ ಒಳಗೆ ಡ್ರಿಲ್ ಮಿಷನ್ ನಿಂದ ಒಂದು ರಂಧ್ರವನ್ನು ಕೊರೆಯುತ್ತಾರೆ.
ಈ ರಂಧ್ರದ ಮುಖಾಂತರ ಮತ್ತೊಂದು ಕ್ಯಾಮರಾವನ್ನು ಕಳುಹಿಸಿ ಕೊಡುತ್ತಾರೆ ಎಲ್ಲರಿಗೂ ಒಂದು ಆಶ್ಚರ್ಯ ಕಾದಿರುತ್ತದೆ ಅದೆನೆಂದರೆ ಆ ಕ್ಯಾಮೆರಾದಲ್ಲಿ ಕಂಡುಬಂದಂತಹ ದೃಶ್ಯವನ್ನು 4500 ವರ್ಷಗಳಿಂದಲೂ ಕೂಡ ಯಾರೂ ಕೂಡ ನೋಡಿರಲಿಲ್ಲ. ಈಜಿಪ್ಟ್ ನಾಗರಿಕತೆಯಲ್ಲಿ ಒಟ್ಟು 138 ಎತ್ತರವಾದಂತಹ ಪಿರಮಿಡ್ ಗಳು ಇದೆ ಈ ಪಿರಮಿಡ್ ಗಳು ಬಹಳಷ್ಟು ವರ್ಷಗಳಿಂದಲೂ ಕೂಡ ಸಾಕಷ್ಟು ಬಿರುಗಾಳಿ ಮತ್ತು ಭೂಕಂಪಗಳನ್ನು ಎದುರಿಸಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ಎಷ್ಟೇ ಬಿರುಗಾಳಿ ಮತ್ತು ಭೂಕಂಪಗಳು ಬಂದರೂ ಕೂಡ ಈ ಪಿರಮಿಡ್ ಗಳು ಸ್ವಲ್ಪ ಕೂಡ ಅಲುಗಾಡದೆ ಹಾಗೆಯೇ ನಿಂತಿದೆ. ಈ ಪಿರಮಿಡ್ಡುಗಳಲ್ಲಿ ಎಲ್ಲದಕ್ಕಿಂತಲೂ ಕೂಡ ಎತ್ತರ ಹಾಗೂ ದೊಡ್ಡದಾದಂತಹ ಮತ್ತು ಪ್ರಸಿದ್ಧವಾದಂತಹ ಪಿರಮಿಡ್ ಯಾವುದು ಅಂದರೆ ದಿ ಗ್ರೇಟ್ ‘ಗಿಜಾ ಪಿರಮಿಡ್’.
ಈ ಪಿರಮಿಡ್ ನಾ ಬೇಸ್ ಏರಿಯಾ ಒಟ್ಟು 13 ಎಕರೆ ಇದೆ ನಿಮಗೆ ಇನ್ನೂ ಅರ್ಥ ಆಗುವ ರೀತಿಯಲ್ಲಿ ಹೇಳುವುದಾದರೆ 9 ಫುಟ್ ಬಾಲ್ ಗ್ರೌಂಡ್ ಅನ್ನು ಒಟ್ಟಾಗಿ ಸೇರಿಸಿದರೆ ಎಷ್ಟು ದೊಡ್ಡ ಜಾಗ ಇರುತ್ತದೆ ಅಷ್ಟು ದೊಡ್ಡದಾಗಿರುತ್ತದೆ ಈ ಪಿರಮಿಡ್ ನಾ ಬೇಸ್ ಏರಿಯಾ. ಈ ಪಿರಮಿಡ್ ನಲ್ಲಿ 23,00,000 ಲಕ್ಷ ದೊಡ್ಡ ಗಾತ್ರದ ಕಲ್ಲುಗಳನ್ನು ಬಳಸಿದ್ದಾರೆ ಇವುಗಳಲ್ಲಿ ಹಲವು ಕಲ್ಲುಗಳ ತೂಕ ಬರೋಬ್ಬರಿ ಐವತ್ತು ಟನ್ ಗಿಂತಲೂ ಕೂಡ ಅಧಿಕ. ಇದರಿಂದ ಈ ಒಂದು ಪಿರಮಿಡ್ ನ ಅಂದಾಜು ತೂಕ 60 ಲಕ್ಷ ಟನ್ ಅಂದರೆ ಸುಮಾರು 12 ಬುರ್ಜ್ ಖಲೀಫಾ ಕಟ್ಟಡದ ತೂಕಕ್ಕೆ ಸಮ. ಹಾಗಾದರೆ ಇಷ್ಟು ದೊಡ್ಡದಾದ ಪಿರಮಿಡ್ ಗಳನ್ನು ನಿರ್ಮಾಣ ಮಾಡುವಂತಹ ಉದ್ದೇಶವಾದರೂ ಏನಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಮಾನವನ ಹತ್ತಿರ ಯಾವುದೇ ರೀತಿಯಾದಂತಹ ಅತ್ಯಾಧುನಿಕವಾದಂತಹ ಉಪಕರಣಗಳು ಇರಲಿಲ್ಲ.