ರಸ್ತೆ ಮೇಲೆ ತರಕಾರಿ ಮಾರುತ್ತಿದ್ದಳು ಸ್ಕೂಲ್ ಹುಡುಗಿ ಡೌಟ್ ಬಂದು ಚೆಕ್ ಮಾಡಿದಾಗ ಬೆಚ್ಚಿ ಬಿದ್ದರು.!ಮೋಹಿನಿ ಎಂಬ ಒಂದು ಹುಡುಗಿ ಹಗಲಿನಲ್ಲಿ ಶಾಲೆಗೆ ಹೋಗುತ್ತಾಳೆ ರಾತ್ರಿ ವೇಳೆ ಅಮ್ಮನ ಜೊತೆ ಸೇರಿ ತರಕಾರಿ ಮಾರಲು ಹೋಗುತ್ತಾಳೆ. ಈ ಹುಡುಗಿ ಮಾಡಿರುವ ಕೆಲಸ ಬೇರೆ ಅವರಿಗೆ ಮಾದರಿ ಹಾಗಾದರೆ ಆ ಹುಡುಗಿ ಮಾಡಿರುವ ಕೆಲಸ ಏನು ಅಂತ ತಿಳಿಯೋಣ. ಶ್ರೀಮಂತ ಮನೆಯ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಲು ಬೇಕಾದಂತ ಒಳ್ಳೆಯ ಶಾಲೆ, ಪುಸ್ತಕ, ಓಡಾಡುವುದಾಕ್ಕೆ ಗಾಡಿ, ಕಾರು, ಓದಿಕೊಳ್ಳೊಕ್ಕೆ ನಿಶ್ಯಬ್ದವಿರುವ ಕೊಠಡಿ ಎಲ್ಲವೂ ಇರುತ್ತದೆ. ಆದರೆ ಇಷ್ಟೆಲ್ಲ ಐಶಾರಾಮಿ ವ್ಯವಸ್ಥೆ ಇದ್ದರು ಕೂಡ ಶ್ರೀಮಂತರ ಮಕ್ಕಳು ಸರಿಯಾಗಿ ಓದದೆ ಫೇಲ್ ಆಗುತ್ತಾರೆ. ಆದರೆ ಈ ಮೋಹಿನಿ ಎಂಬ ಹುಡುಗಿ ಹತ್ತಿರ ಯಾವ ವ್ಯವಸ್ಥೆಯು ಸರಿಯಾಗಿ ಇಲ್ಲ. ಈ ಹುಡುಗಿ ಸಂಜೆ ವೇಳೆ ತನ್ನ ತಾಯಿಯ ಜೊತೆ ಸೇರಿ ತರಕಾರಿ ಮಾರಲು ಹೋಗುತ್ತಾಳೆ. ಕೆಲವು ವರ್ಷಗಳ ಹಿಂದೆ ಮೋಹಿನಿ ತನ್ನ ತಂದೆಯ ಜೊತೆ ತರಕಾರಿ ಮಾರಲು ಹೋಗುತ್ತಿದ್ದಳು. ಆದರೆ ಕಳೆದ ವರ್ಷ ಅವಳ ತಂದೆಯು ಅನಾರೋಗ್ಯದಿಂದ ಬರಳುತ್ತಿದ್ದು ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ ಇರಬೇಕು ಎಂದು ಡಾಕ್ಟರ್ ಹೇಳಿದ್ದರು.
ದುಡಿಯುವ ಗಂಡಸು ಅನಾರೋಗ್ಯದಿಂದ ಮನೆಯಲ್ಲಿಯೇ ಕುಳಿತರೆ ಜೀವನ ಹೇಗೆ ನಡೆಸುವುದು ಎಂದು ಮೋಹಿನಿ ತನ್ನ ಅಮ್ಮನನ್ನು ಕರೆದು ಕೊಂಡು ತರಕಾರಿ ಮಾರಲು ನಿರ್ಧಾರ ಮಾಡಿ ಹೋಗಲು ಆರಂಭಿಸಿದಳು. ಮೋಹಿನಿ ಈಗ ಹನ್ನೊಂದನೆಯ ತರಗತಿಯಲ್ಲಿ ಓದುತ್ತಿದ್ದಳು. ಇವಳು ಶಾಲೆಯಲ್ಲಿ ಮಾದರಿ ವಿದ್ಯಾರ್ಥಿನಿ ಎಂದು ಹೆಸರು ಪಡೆದಿದ್ದಾಳೆ. ಇವಳನ್ನು ನೋಡಿದ ಅವಳ ಶಾಲೆಯ ಪ್ರಾಂಶುಪಾಲರು ಮತ್ತು ನಿರ್ದೇಶಕರು ಶಾಲೆ ಆವರಣದಲ್ಲಿ ಮೋಹಿನಿಗೆ ಸನ್ಮಾನ ಮಾಡಿದ್ದಾರೆ. ಇಂತಹ ವಿದ್ಯಾರ್ಥಿನಿ ನಮ್ಮ ಶಾಲೆಯಲ್ಲಿ ಓದುತ್ತಿದ್ದಾಳೆ ಎಂದು ಪ್ರಾಂಶುಪಾಲರು ಹೆಮ್ಮೆಯಿಂದ ಎಲ್ಲರೊಟ್ಟಿಗೆ ಹೇಳಿಕೊಳ್ಳುತ್ತಾರೆ.
ಮೋಹಿನಿ ಅವರು ವಿದ್ಯಾಭ್ಯಾಸದಲ್ಲಿಯು ಮುಂದೆ ಇದ್ದರು. ಹಾಗು ಶಾಲೆಯ ಎಲ್ಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಳು. ಮೋಹಿನಿಗೆ ಪಾಠ ಮಾಡುತ್ತಿದ್ದ ಶಿಕ್ಷಕರು ಕೂಡ ಅವಳ ಬಗ್ಗೆ ಗಮನವಹಿಸಿ ಪಾಠ ಮಾಡುತ್ತಿದ್ದರು. ಮೋಹಿನಿಯು ಬಡ ಕುಟುಂಬದವಳು ಅವಳ ತಂದೆ ಹಾಸಿಗೆ ಇಡಿದಿದ್ದಾರೆ. ಮನೆಯ ಸಂಪೂರ್ಣ ಜವಾಬ್ದಾರಿಯು ಮೋಹಿನಿ ಒತ್ತಿದ್ದಾಳೆ. ಮನೆ ನಡೆಸುವ ಸಲುವಾಗಿ ಶಾಲೆಯಿಂದ ಬಂದು ತರಕಾರಿ ಮಾರುತ್ತಾಳೆ ಎಂದು ಶಾಲೆಯಲ್ಲಿ ಶಿಕ್ಷಕರು ಬೇರೆ ವಿದ್ಯಾರ್ಥಿಗಳಿಗೆ ಹೇಳುತ್ತಾರೆ. ಇನ್ನು ಮೋಹಿನಿಯ ತಾಯಿ ನನಗೆ ಗಂಡು ಮಕ್ಕಳಿಲ್ಲ. ಇರುವುದು ಒಬ್ಬಳೆ ಹೆಣ್ಣು ಮಗಳು. ಗಂಡು ಮಗ ಇದ್ದರೆ ಅವನು ನನ್ನನ್ನು ನೋಡಿಕೊಳ್ಳುವುದರಲ್ಲಿ ಹತ್ತು ಪಟ್ಟು ಹೆಚ್ಚಾಗಿ ಇವಳು ನೋಡಿಕೊಳ್ಳುತ್ತಾಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.