ವಿಪರೀತವಾಗಿ ಕೂದಲು ಉದುರುತ್ತಿದ್ದರೆ 1 ಗ್ಲಾಸ್ ಇದನ್ನು ಕುಡಿಯಿರಿ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ಕಪ್ಪಗೆ, ದಟ್ಟವಾಗಿ ಬೆಳೆಯುತ್ತದೆ.ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ ಅದರಲ್ಲಿ ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೆ ಇಬ್ಬರಲ್ಲೂ ಕೂಡ ಕೂದಲು ಉದುರುವ ಸಮಸ್ಯೆ ಇರುವುದನ್ನು ನಾವು ಸರ್ವೇಸಾಮಾನ್ಯವಾಗಿ ಕಾಣಬಹುದಾಗಿದೆ. ಹಾಗಾಗಿ ಇಂದು ಕೂದಲು ಉದುರುವ ಸಮಸ್ಯೆಯನ್ನು ಯಾವ ರೀತಿ ನೈಸರ್ಗಿಕ ವಿಧಾನದಲ್ಲಿ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ನಾವು ಹೇಳುವಂತಹ ಈ ವಿಧಾನವನ್ನು ನೀವು ಅನುಸರಿಸಿದರೆ ಖಚಿತವಾಗಿಯೂ ಕೂಡ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿ ಕೂದಲು ದಟ್ಟವಾಗಿ ಬೆಳೆಯುತ್ತದೆ ಇದು ನೈಸರ್ಗಿಕ ವಿಧಾನ ಹಾಗಾಗಿ ಯಾವುದೇ ಭಯಪಡುವಂತಹ ಅಗತ್ಯವಿಲ್ಲ.ಹಾಗಾದರೆ ಈ ಮನೆಮದ್ದನ್ನು ಮಾಡುವುದು ಹೇಗೆ ಹಾಗೂ ಇದಕ್ಕೆ ಬೇಕಾಗುವಂತಹ ಪದಾರ್ಥಗಳು ಏನು ಇದನ್ನು ಯಾವ ವಿಧದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.
ಮೊದಲನೇದಾಗಿ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಅಶ್ವಗಂಧ ಪುಡಿ, ಎರಡನೆಯದಾಗಿ ನಿಂಬೆಹಣ್ಣು, ಮೂರನೆಯದಾಗಿ ಜೇನುತುಪ್ಪ ಈ ಮೂರು ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆಮದ್ದನ್ನು ತಯಾರಿ ಮಾಡಬಹುದಾಗಿದೆ. ಮೊದಲಿಗೆ ಒಂದು ಬಟ್ಟಲಿಗೆ ಒಂದುವರೆ ಗ್ಲಾಸ್ ನೀರನ್ನು ಹಾಕಿ ನಂತರ ಒಂದು ಟೇಬಲ್ ಸ್ಪೂನ್ ಅಶ್ವಗಂಧ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಸ್ವಲ್ಪವೂ ಕೂಡ ಗಂಟು ಇರಬಾರದು. ಈಗ ಗ್ಯಾಸ್ ಮೇಲೆ ಪಾತ್ರೆಯನ್ನು ಇಟ್ಟು ಒಂದರಿಂದ ಎರಡು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ ಒಂದುವರೆ ಗ್ಲಾಸ್ ಇರುವಂತಹ ನೀರು ಒಂದು ಗ್ಲಾಸ್ ಆಗಬೇಕು ಅಲ್ಲಿಯವರೆಗೂ ಕೂಡ ಇದನ್ನು ಕುದಿಸಿಕೊಳ್ಳಬೇಕು.
ತದನಂತರ ಗ್ಯಾಸ್ ಅನ್ನು ಆಫ್ ಮಾಡಿ ಇದನ್ನು ಸಂಪೂರ್ಣವಾಗಿ ತಣ್ಣಗಾಗುವುದು ಬಿಡಬೇಕು ನಂತರ ಒಂದು ಗ್ಲಾಸ್ ಗೆ ಇದನ್ನು ಶೋಧಿಸಿಕೊಂಡು ಒಂದು ಟೇಬಲ್ ಸ್ಪೂನ್ ನಿಂಬೆಹಣ್ಣಿನ ರಸ ಮತ್ತು ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಸೇವನೆ ಮಾಡುತ್ತಿದ್ದರೆ ಖಚಿತವಾಗಿಯೂ ಕೂಡ ತಲೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಕೂದಲು ಉದುರುವುದು ನಿಂತು ಅದೇ ಜಾಗದಲ್ಲಿ ಮತ್ತೆ ಹೊಸ ಕೂದಲು ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ. ಹಾಗಾಗಿ ವಾರದಲ್ಲಿ ಎರಡು ಬಾರಿಯಾದರೂ ನೀವು ಕೂಡ ಈ ವಿಧಾನವನ್ನು ಅನುಸರಿಸಿ ನಿಮ್ಮ ಕೂದಲನ್ನು ಪೋಷಣೆ ಮಾಡಿ.