ತನ್ನ ಲಿಂಗವನ್ನೇ ಮುಚ್ಚಿಟ್ಟ ಈಕೆಯ ಕಥೆ ಕೇಳಿ ಲಾಯರ್ ಹಾಗೂ ಪೋಲೀಸ್ ದಂಗಾಗಿ ಹೋಗಿದ್ದರು!ಉದರ ನಿಮಿತ್ತಂ ಬಹು ವೇಷಂ ಎಂಬ ನಾಣ್ಣುಡಿಯಂತೆ ಮನುಷ್ಯ ಹಾಳು ಹೊಟ್ಟೆ ಪಾಡಿಗಾಗಿ ತನ್ನ ಜೀವಿತಾವಧಿಯಲ್ಲಿ ಎಷ್ಟೆಲ್ಲ ವೇಷಗಳನ್ನು ಧರಿಸಬೇಕಾಗುತ್ತದೆ ಎಂಬುದು ಈ ನುಡಿಗಟ್ಟಿನ ಸಾರ. ಹೊಟ್ಟೆಪಾಡಿಗಾಗಿ ಎಲ್ಲರೂ ಒಂದೊಂದು ವೇಷವನ್ನು ಧರಿಸುವುದು ಅನಿವಾರ್ಯ ಕೂಡ. ಇದು ನ್ಯಾಯದ ಮಾರ್ಗವಾದರೆ ಸರಿ. ಆದರೆ ದುರಾಸೆಯ ವೈರಿ ನಮ್ಮ ದೇಹ ಮನಸ್ಸನ್ನು ವ್ಯಾಪಿಸಿದರೆ ಅದು ಇಲ್ಲದ ಸ್ವಾರ್ಥತನವನ್ನು ನಮ್ಮಲ್ಲಿ ತುಂಬುತ್ತದೆ. ಇಲ್ಲಿ ಒಂದು ಕಥೆಯು ಇದಕ್ಕೆ ಪೂರಕವಾಗಿದೆ. ಸ್ವಾರ್ಥ ಸಾಧನೆಗಾಗಿ ವ್ಯಕ್ತಿ ಒಬ್ಬ ತನ್ನ ಹೆಸರನ್ನು, ಊರಿನ ಹೆಸರನ್ನು, ತನ್ನ ವಿಳಾಸದ ಬಗ್ಗೆ, ಉದ್ಯೋಗದ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ತನ್ನ ಲಿಂಗವನ್ನೆ ಮರೆಮಾಚಿ ವಂಚನೆ ಮಾಡಿರುವಂತಹ ಪ್ರಕರಣ ನಡೆದಿದೆ. ಮಹಿಳೆ ಒಬ್ಬಳು ವರದಕ್ಷಿಣೆ ಪಡೆಯುವ ಸಲುವಾಗಿ ತಾನು ಪುರುಷ ಎಂದು ಹೇಳಿಕೊಂಡು ಇಬ್ಬರು ಕನ್ಯೆಯರನ್ನು ಮದುವೆಯಾಗಿ ಅವರಿಂದ ವರ್ಷಾನುಗಟ್ಟಲೆ ಲಕ್ಷಾಂತರ ರೂ ಹಣಗಳನ್ನು ದೋಚಿ ಸಿಕ್ಕಿ ಕೊಂಡಿರುವ ಶಾಕ್ಕಿಂಗ್ ಪ್ರಕರಣ ಒಂದು 2012 ರಲ್ಲಿ ಜರುಗಿತ್ತು.
ಈ ಘಟನೆ ನಡೆದದ್ದು ಉತ್ತರಖಾಂಡ್ ನಲ್ಲಿ. ಈ ಘಟನೆ ವರದಿ ಆದಾಗ ಅಲ್ಲಿನ ಪೊಲೀಸರೆ ದಿಗ್ಬ್ರಮೆ ಆಗಿದ್ದರು ಆ ಘಟನೆಯ ಬಗ್ಗೆ ತಿಳಿಯೋಣ. ಇದೆಲ್ಲ ಪ್ರಾರಂಭವಾಗಿದ್ದು 2012 ರಲ್ಲಿ. ಉತ್ತರಖಾಂಡ್ ನ ಹಂದ್ವಾನಿ ಎಂಬಲ್ಲಿ ವಾಸವಿದ್ದ ಯುವತಿ ಒಬ್ಬಳಿಗೆ ಫೇಸ್ ಬುಕ್ ನಲ್ಲಿ ಒಂದು ಫ್ರೆಂಡ್ ರಿಕ್ವೇಸ್ಟ್ ಬರುತ್ತದೆ. ಅದನ್ನು ನೋಡಿದಾಗ ರಿಕ್ವೇಸ್ಟ್ ಕಳುಹಿಸಿದ ಖಾತೆಯ ಪ್ರೊಫೈಲ್ ಪಿಕ್ ನಲ್ಲಿ ಹಾಲಿವುಡ್ ನಾ ಸುಪ್ರಸಿದ್ಧ ನಟನಾಗಿದ್ದ ಲಿಯೋನಾರ್ಡ್ ಚಿತ್ರ ಇದ್ದಿದ್ದು ಯುವತಿಗೆ ಕಾಣಿಸುತ್ತದೆ. ಕೆಳಗಿದ್ದ ಹೆಸರು ಮಾತ್ರ ಕೃಷ್ಣ ಸೇನ. ಈ ಯುವತಿಗೆ ಹಾಲಿವುಡ್ ನಟ ಎಂದರೆ ವಿಪರೀತ ಕ್ರೇಜ್. ಹಾಗಾಗಿ ಕುತೂಹಲದಿಂದ ಆ ರಿಕ್ವೇಸ್ಟ್ಅನ್ನು ಆಕೆ ಅಕ್ಸೆಪ್ಟ್ ಮಾಡುತ್ತಾಳೆ.
ಆದಾದ ಕೆಲವು ದಿನಗಳು ಇಬ್ಬರ ನಡುವೆ ಚಾಟಿಂಗ್ ನಡೆದು ಪರಸ್ಪರ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಯುವತಿ ವಿದ್ಯಾವಂತಳಾಗಿದ್ದು ಇಂಗ್ಲಿಷ್ ಮತ್ತು ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಳು. ಕೃಷ್ಣ ಸೇನ್ ಎಂಬ ಫೇಸ್ಬುಕ್ ಖಾತೆಯನ್ನ ಬಳಸುತ್ತಿದ್ದ ವ್ಯಕ್ತಿಯು ಆ ಯುವತಿಯನ್ನು ತಾನಿದ್ದ ಸ್ಥಳಕ್ಕೆ ಬಂದು ಒಮ್ಮೆ ಭೇಟಿಯಾಗುವಂತೆ ಕೇಳಿಕೊಳ್ಳುತ್ತಾನೆ. ಆ ಆಹ್ವಾನಕ್ಕೆ ಮಣಿದ ಆ ಯುವತಿ ಸ್ಥಳಕ್ಕೆ ಬಂದು ಭೇಟಿ ಆಗುತ್ತಾಳೆ ಆ ದಿನ ಕೃಷ್ಣ ಸೇನ್ ಪ್ಯಾಂಟ್ ಹಾಗೂ ಕ್ರೀಂ ಬಣ್ಣದ ಶರ್ಟ್ ಧರಿಸಿ ಟಿಪ್ ಟಾಪಾಗಿ ಬಂದಿದ್ದಲ್ಲದೇ ಅವನು ಕೂಡ ಟಾಟಾ ಸಫಾರಿ ಕಾರಲ್ಲೆ ಬಂದಿದ್ದ.