ಅಕ್ಷಯ ತೃತೀಯದ ದಿನ ಚಿನ್ನ ಖರೀದಿಸಲು ಸಾಧ್ಯವಾಗುತ್ತಿಲ್ಲವೇ ಹಾಗಾದರೆ ವಸ್ತುಗಳನ್ನು ಖರೀದಿಸಿ…ನಮಸ್ತೆ ಸ್ನೇಹಿತರೆ, ಅಕ್ಷಯ ತೃತೀಯ ಹಿಂದೂ ಮತ್ತು ಜೈನ ಧರ್ಮೀಯರಿಗೆ ಮಂಗಳಕರವಾದ ದಿನವಾಗಿದ್ದು, ವೈಶಾಖ ಮಾಸದ ಶುಕ್ಲ ಪಕ್ಷ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ, ಅಕ್ಷಯ ತೃತೀಯಾ, ಅಖ ತೀಜ್, ಅಕ್ತಿ ಎಂದೂ ಕರೆಯಲ್ಪಡುವ ಈ ದಿನವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಮಂಗಳಕರ ಎಂದು ಹೇಳಲಾಗಿದೆ. ಈ ವರ್ಷ, ಅಕ್ಷಯ ತೃತೀಯವನ್ನು ಮೇ 3 ರಂದು ವಿಷ್ಣು, ದೇವತೆ ಲಕ್ಷ್ಮೀ ಮತ್ತು ಗಣೇಶನನ್ನು ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ಧಾರ್ಮಿಕ ಪುಸ್ತಕಗಳಲ್ಲಿ ಹೇಳಿದಂತೆ, ಅಕ್ಷಯ ತೃತೀಯದಂದು ಶ್ರೇಷ್ಠವಾದ ಕೆಲಸಗಳನ್ನು ಕೈಗೊಂಡರೆ ಎಂದಿಗೂ ಮುಗಿಯದಂತಹ ಮಂಗಳಕರವಾದ ಸಿದ್ಧಿಗಳು ಉಂಟಾಗುವವು ಎಂಬ ನಂಬಿಕೆಯಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಈ ದಿನ ಉತ್ತಮ ಎನ್ನಲಾಗಿದೆ. ಬೆಲೆ ಬಾಳುವ ಅಥವಾ ಕುಟುಂಬಕ್ಕೆ ಸಮೃದ್ಧಿ ಮತ್ತು ಅದೃಷ್ಟವನ್ನು ತರುವ ವಸ್ತುವನ್ನು ಖರೀದಿಸಲು ವರ್ಷದ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಹಿಂದೂ ಮನೆಗಳಲ್ಲಿ, ಚಿನ್ನ, ಬೆಳ್ಳಿ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಅದೃಷ್ಟವನ್ನು ತರುವ ಸಂಕೇತವಾಗಿ ಖರೀದಿಸಲಾಗುತ್ತದೆ.
ಈ ದಿನ ಖರೀದಿಸಿದ ಬಂಗಾರವು ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಆದಕಾರಣ ಅಕ್ಷಯ ತೃತೀಯ ದಿನದಂದು ಜನರು ಚಿನ್ನ ಖರೀದಿಸಲು ಮುಗಿಬೀಳುತ್ತಾರೆ. ಆದರೆ ಕೆಲವರಿಗೆ ಚಿನ್ನ ಖರೀದಿಸುವ ಸಾಮರ್ಥ್ಯ ಇರುವುದಿಲ್ಲ, ಅಥವಾ ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.ಅಂಥವರು ಏನು ಮಾಡಬೇಕು? ಅಕ್ಷಯ ತೃತೀಯದ ದಿನ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಯಾವ ಪೂಜೆಗಳನ್ನು ಮಾಡಬೇಕು? ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದಲ್ಲಿ ಬೇರೆ ಯಾವ ವಸ್ತುವನ್ನು ಖರೀದಿ ಮಾಡಬಹುದು? ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸ್ಥಾಪಿಸಲು ಅಕ್ಷಯ ತೃತೀಯ ದಿನದಂದು ಮನೆಯಲ್ಲಿ ಲಕ್ಷ್ಮಿಯ ಪೂಜೆಯನ್ನು ಹೇಗೆ ಮಾಡಬೇಕು? ಯಾವ ಮಂತ್ರವನ್ನು ಅಕ್ಷಯ ತೃತೀಯದ ದಿನದಂದು ಜಪಿಸಿ ಲಕ್ಷ್ಮಿಯನ್ನು ವಲಿಸಿಕೊಳ್ಳಬಹುದು. ಈ ಎಲ್ಲ ಮಾಹಿತಿಗಳನ್ನು ನೀವು ತಿಳಿಯಬೇಕೆಂದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿಯನ್ನು ಪಡೆದುಕೊಳ್ಳಿ ಧನ್ಯವಾದಗಳು.