ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ 2022..ನಮಸ್ತೆ ಸ್ನೇಹಿತರೇ, ಕರ್ನಾಟಕ ಪೊಲೀಸ್ ಇಲಾಖೆ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ಇದೀಗ ನೀಡಿದೆ. ಇಲಾಖೆಯು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಒಟ್ಟು 1500 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈ ಹುದ್ದೆಗಳಿಗೆ ಏಪ್ರಿಲ್ ಮೊದಲ ವಾರದಲ್ಲಿ ಅಧಿಕೃತ ನೋಟಿಫಿಕೇಶನ್ ಪ್ರಕಟವಾಗಲಿದ್ದು, ಏಪ್ರಿಲ್ 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರಿ ಹುದ್ದೆಯಾದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಸೇರಬೇಕು ಎಂದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ದಾಖಲೆಗಳೊಂದಿಗೆ ಸಿದ್ಧರಿರಿ. ನೇಮಕಾತಿ ಇಲಾಖೆ – ಪೊಲೀಸ್ ಇಲಾಖೆ ಹುದ್ದೆ ಹೆಸರು – ಪೊಲೀಸ್ ಕಾನ್ಸ್‌ಟೇಬಲ್ ಒಟ್ಟು ಹುದ್ದೆಗಳ ಸಂಖ್ಯೆ – 1500, ನಾನ್ ಹೈದೆರಾಬಾದ್ ಕರ್ನಾಟಕ ಹುದ್ದೆಗಳು- 1068. ಹೈದೆರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಗಳು : 432 ಅಂದಹಾಗೆ ಪೊಲೀಸ್ ಇಲಾಖೆ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದರೆ, ಬೆಂಗಳೂರು ನಗರ : 520 (ಸಿಪಿಸಿ ಹೆಚ್‌ಕೆ- 73), ಮೈಸೂರು ನಗರ : 25, ಮಂಗಳೂರು ನಗರ : 50, ಹುಬ್ಬಳ್ಳಿ-ಧಾರವಾಡ ನಗರ
45, ಬೆಳಗಾವಿ ನಗರ: 75, ಬೆಂಗಳೂರು ಜಿಲ್ಲೆ : 60, ತುಮಕೂರು : 45, ರಾಮನಗರ : 30 ಮೈಸೂರು : 40, ಹಾಸನ : 30, ಮಂಡ್ಯ : 30, ಶಿವಮೊಗ್ಗ: 25, ದಕ್ಷಿಣ ಕನ್ನಡ, ಮಂಗಳೂರು: 45, ಬೆಳಗಾವಿ: 30, ರೈಲ್ವೇಸ್, ಬೆಂಗಳೂರು: (ಸಿಪಿಸಿ ಹೆಚ್‌ಕೆ 17), ಕಲಬುರಗಿ ನಗರ : 20, ಕಲಬುರಗಿಜಿಲ್ಲೆ : 10, ಬೀದರ್ : 79
ಯಾದಗಿರಿ: 25, ಬಳ್ಳಾರಿ/ವಿಜಯನಗರ: 107, ರಾಯಚೂರು: 63, ಕೊಪ್ಪಳ : 38. ಈ ಮೇಲಿನ ಹುದ್ದೆಗಳಿಗೆ 01-04-2022 ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸದರಿ ಹುದ್ದೆಗಳಿಗೆ ಅರ್ಹತೆಗಳೇನು, ವಯೋಮಿತಿ ಹಾಗೂ ಇತರೆ ಮಾಹಿತಿಗಳು ಈ ಕೆಳಗಿನಂತಿವೆ.
ವಿದ್ಯಾರ್ಹತೆ- ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು. ಅರ್ಜಿ ಶುಲ್ಕ (ಸಂಭಾವ್ಯ)- ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.400. SC / ST / Cat-01 ಅಭ್ಯರ್ಥಿಗಳಿಗೆ ರೂ.200. ಅರ್ಜಿ ಶುಲ್ಕವನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಮಾತ್ರ ಪಾವತಿಸತಕ್ಕದ್ದು. ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ವೇತನ ಶ್ರೇಣಿ: ರೂ.23500-47650. ಅರ್ಜಿ ಸಲ್ಲಿಕೆಗೆ ಸಂಭಾವ್ಯ ವೇಳಾಪಟ್ಟಿ. ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- 01-04-2022, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2022. ಆಯ್ಕೆ ಪ್ರಕ್ರಿಯೆ ಹೇಗೆ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ಸಹಿಷ್ಣುತಾ ಪರೀಕ್ಷೆ ನಡೆಸಿ ಅಯ್ಕೆ ಮಾಡಲಾಗುತ್ತದೆ.