ಮಕರ ರಾಶಿಗೆ ಸಾಡೆ ಸಾತಿ ಕೊನೆ ಭಾಗ.ನಮಸ್ತೆ ಸ್ನೇಹಿತರೇ, ಗ್ರಹಗಳ ಗೋಚಾರ ಹೊಸತೇನಲ್ಲ. ಪ್ರತಿ ಗ್ರಹಕ್ಕೂ ಅದರದ್ದೇ ಆದ ಚಲನೆಯ ಅವಧಿ ಇರುತ್ತದೆ. ಆದರೆ ಈ ಬಾರಿ ಅಂದರೆ ಇದೇ ಏಪ್ರಿಲ್ನಲ್ಲಿ ಒಂಭತ್ತೂ ಗ್ರಹಗಳು ತಮ್ಮ ರಾಶಿ ಬದಲಾವಣೆ ಮಾಡಲಿವೆ. ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳ ಗೋಚಾರಕ್ಕೆ ಒಂದು ತಿಂಗಳು ತೆಗೆದುಕೊಳ್ಳುತ್ತವೆ. ಅದೇ ಮಂಗಳ ಗ್ರಹವು ನಲವತ್ತೈದು ದಿನಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ಅದೇ ಚಂದ್ರಗ್ರಹವು ಅರ್ಧ ದಿನಕ್ಕೆ ಒಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ರಾಹು ಕೇತು ಶನಿ ಮತ್ತು ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಗುರುಗ್ರಹವು ಒಂದೇ ರಾಶಿಯಲ್ಲಿ ಹನ್ನೆರಡು ತಿಂಗಳು ಇರುತ್ತದೆ. ರಾಹು ಕೇತು ಒಂದೇ ಮನೆಯಲ್ಲಿ ಹದಿನೆಂಟು ತಿಂಗಳು ಇರುತ್ತವೆ. ಶನಿಗ್ರಹವು ಒಂದೇ ರಾಶಿಯಲ್ಲಿ ಮೂವತ್ತು ತಿಂಗಳು ಇರುತ್ತದೆ ಅಂದರೆ 2½ವರ್ಷ ಇರುತ್ತದೆ. 2½ವರ್ಷದಂತೆ ಮೂರು ಚರಣಗಳಲ್ಲಿ ಶನಿಗ್ರಹವು ಒಂದೊಂದು ರಾಶಿಯನ್ನು ಪರಿಣಾಮ ಬೀರುತ್ತದೆ. 2½ವರ್ಷದಂತೆ ಮೂರು ಚರಣಗಳಲ್ಲಿ ಅಂದರೆ
7½ವರ್ಷ ಹಿಂದಿಯಲ್ಲಿ 7½ವರ್ಷಕ್ಕೆ ಸಾಡೇಸಾತ್ ಎನ್ನುತ್ತಾರೆ ಹೀಗೆ 7½ವರ್ಷ ಶನಿ ಪ್ರಭಾವ ಬೀರುವುದನ್ನೇ ಸಾಡೇಸಾತ್ ಪರಿಣಾಮ ಎನ್ನುವರು. ಶನಿ ಗ್ರಹವು ನ್ಯಾಯ ನೀಡುವ ಗ್ರಹವಾಗಿದೆ. ವ್ಯಕ್ತಿಯ ಕರ್ಮಗಳಿಗೆ ತಕ್ಕಂತೆ ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತಾನೆ. ಜಾತಕದಲ್ಲಿ ಶನಿ ಗ್ರಹವು ಶುಭ ಭಾವದಲ್ಲಿದ್ದರೆ ಅಂತಹ ವ್ಯಕ್ತಿಗಳಿಗೆ ಶುಭ ಫಲಗಳು ಉಂಟಾಗುತ್ತವೆ. ಅದೇ ಶನಿ ಗ್ರಹವು ಅಶುಭ ಭಾವದಲ್ಲಿ ಸ್ಥಿತವಾಗಿದ್ದರೆ ಅಂಥ ವ್ಯಕ್ತಿಗಳಿಗೆ ಅನೇಕ ತೊಂದರೆ ತಾಪತ್ರಯಗಳ ಕಷ್ಟಗಳು ಎದುರಾಗುತ್ತವೆ. ಇದೇ ಏಪ್ರಿಲ್ ತಿಂಗಳಿನಲ್ಲಿ ಈ ಎಲ್ಲಾ ಗ್ರಹಗಳು ರಾಶಿ ಬದಲಾವಣೆ ಮಾಡಲಿವೆ. ಶನಿ ಸಾಡೆ ಸಾತಿಯು ಧನು ರಾಶಿಗೆ ಮುಕ್ತಿ ನೀಡಲಿದ್ದು. ಮೀನರಾಶಿಯಲ್ಲಿ ಪ್ರಾರಂಭ ವಾಗಲಿದೆ.
ಏಪ್ರಿಲ್ 29ರಂದು ಶನಿಗ್ರಹವು ಕುಂಭ ರಾಶಿಗೆ ಪ್ರವೇಶಿಸಲಿದೆ. ಶನಿಗ್ರಹದ ರಾಶಿ ಪರಿವರ್ತನೆ ಜತೆಗೆ ಮಿಥುನ ಮತ್ತು ತುಲಾ ರಾಶಿಗೆ ಶನಿ ಅರ್ಧಾಷ್ಟಮ ಮುಗಿಯಲಿದೆ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಗೆ ಶನಿಯ ಅರ್ಧಾಷ್ಟಮ ಆರಂಭವಾಗಲಿದೆ. ಶನಿ ಸಾಡೇಸಾತಿಯ ಪ್ರಭಾವ ಮಕರ, ಕುಂಭ ಮತ್ತು ಮೀನ ರಾಶಿಯ ಮೇಲೆ ಆಗುತ್ತದೆ. ಕುಂಭ ರಾಶಿಗೆ ಶನಿ ಸಾಡೇಸಾತಿಯ ಎರಡನೇ ಚರಣ , ಮಕರ ರಾಶಿಗೆ ಮೂರನೇ ಚರಣ ಮತ್ತು ಮೀನ ರಾಶಿಗೆ ಮೊದಲ ಚರಣ ಆರಂಭ ವಾಗಲಿದೆ. ಶನಿಗ್ರಹದ ರಾಶಿ ಪರಿವರ್ತನೆಯಿಂದಾಗಿ ಕೆಲವು ರಾಶಿಯವರಿಗೆ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಮೇಷ ತುಲಾ ವೃಷಭ ಮತ್ತು ಧನು ರಾಶಿ ವ್ಯಕ್ತಿಗಳಿಗೆ ಶನಿ ರಾಶಿ ಪರಿವರ್ತನೆಯಿಂದಾಗಿ ಶುಭ ಪರಿಣಾಮಗಳು ಉಂಟಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಿ ಧನ್ಯವಾದಗಳು.