ವಾಟ್ಸಾಪ್ನ (i) ಬಟನ್ ನಲ್ಲಿರುವ ಸೀಕ್ರೆಟ್ ಸೆಟ್ಟಿಂಗ್ಸ2022 ನ ಬಗ್ಗೆ ನಿಮಗೆಷ್ಟು ಗೊತ್ತು?ವಾಟ್ಸಪ್ ನನ್ನು ಜಗತ್ತಿನಾದ್ಯಂತ ಅತೀ ಹೆಚ್ಚು ಜನರು ಬಳಸುತ್ತಾರೆ. ಇದರಲ್ಲಿರುವ ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಇದರಿಂದ ನಮ್ಮ ವೈಯಕ್ತಿಕ ವಿಷಯಗಳು ಬೇರೆ ಕಡೆ ಸೋರಿಕೆ ಆಗುತ್ತಿದ್ದರೂ ಸಹ ನಮಗೆ ಅದರ ಮಾಹಿತಿ ಇರುವುದಿಲ್ಲ. ಆದರೆ ನಾವು ವಾಟ್ಸಾಪ್ನಲ್ಲಿ (i)ಬಟನ್ ಕ್ಲಿಕ್ ಮಾಡುವ ಮೂಲಕ ಅದರಲ್ಲಿರುವ ಸೆಟ್ಟಿಂಗ್ ಚೆಕ್ ಮಾಡುವ ಮೂಲಕ ವಾಟ್ಸಪ್ ನ ಅತಿ ಉಪಯುಕ್ತ ಟ್ರಿಕ್ ಗಳನ್ನು ನೀವು ತಿಳಿದುಕೊಳ್ಳಬಹುದು. ಇದರ ಮೂಲಕ ನಿಮ್ಮ ವೈಯಕ್ತಿಕ ಚಾರ್ ಗಳನ್ನು ಯಾರಾದರೂ ಚೆಕ್ ಮಾಡುತ್ತಿದ್ದರೆ ಅಥವಾ ನಿಮ್ಮ ಫೋನ್ ಹ್ಯಾಕ್ ಆಗಿದ್ದರೆ ಅದನ್ನು ತಿಳಿದುಕೊಳ್ಳಬಹುದು ಮತ್ತು ಸರಿ ಮಾಡಿಕೊಳ್ಳಬಹುದು. ವಾಟ್ಸಪ್ ನ (i) ಬಟನ್ ನಲ್ಲಿರುವ ಮೂರು ಉಪಯುಕ್ತ ಟ್ರಿಕ್ಗಳಲ್ಲಿ ಒಂದು ಇದು. ಪ್ರತಿನಿತ್ಯ ಸಾಮಾನ್ಯವಾಗಿ ಹಲವಾರು ಜನರು ಬೇರೆ ಜನರೊಂದಿಗೆ ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿರುತ್ತಾರೆ.
ಅವುಗಳಲ್ಲಿ ಕೆಲವೊಂದು ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಕೆಲವೊಂದು ಸಾಮಾನ್ಯವಾಗಿ ಬರುತ್ತಿರುತ್ತವೆ ಆದರೆ ನೀವು ಪ್ರತಿ ಬಾರಿ ವಾಟ್ಸಪ್ ನಲ್ಲಿ ಹೋಗಿ ನಿಮಗೆ ಬಂದಿರುವ ಮೆಸೇಜ್ ನಲ್ಲಿ ಚೆಕ್ ಮಾಡುವುದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಅದರ ಬದಲು ನೀವು ವಾಟ್ಸಾಪ್ನ ಕಷ್ಟಮ್ ನೋಟಿಫಿಕೇಶನ್ ನಲ್ಲಿ ಪ್ರತಿಯೊಬ್ಬರಿಗೂ ಬೇರೆಬೇರೆ ರಿಂಗ್ಟೋನ್ ಸೆಟ್ ಮಾಡುವುದ ಮೂಲಕ ನೋಟಿಫಿಕೇಶನ್ ಬಂದಾಗಲೇ ಅದು ಯಾರದು ಎಂದು ಮೊಬೈಲ್ನ ಚೆಕ್ ಮಾಡದೆ ತಿಳಿದುಕೊಳ್ಳಬಹುದು. ಈ ಆಪ್ಷನ್ ನಿಮ್ಮ ಫ್ರೆಂಡ್ ನ ಡಿಪಿಯಲ್ಲಿ ಇರುವ (i) ಬಟನ್ ಅನ್ನು ಕ್ಲಿಕ್ ಮಾಡಿದಾಗ ಕಸ್ಟಮ್ ನೋಟಿಫಿಕೇಶನ್ ಎಂದು ಬರುತ್ತದೆ ನಂತರ ನೀವು ಯೂಸ್ ಕಸ್ಟಮ್ ನೋಟಿಫಿಕೇಶನ್ ಎಂದು ಇರುವಲ್ಲಿ ಕ್ಲಿಕ್ ಮಾಡಿದರೆ ರೈಟ್ ಮಾರ್ಕ್ ಬರುತ್ತದೆ. ಈಗ ನೋಟಿಫಿಕೇಶನ್ ರಿಂಗ್ಟೋನ್ ಗೆ ಹೋಗಿ ನಿಮ್ಮ ಗ್ಯಾಲರಿಯಲ್ಲಿ ಇರುವ ನಿಮಗೆ ಬೇಕಾದ ರಿಂಗ್ ಟೋನ್ ಅನ್ನು ಸೆಟ್ ಮಾಡಿ ಓಕೆ ಮಾಡಿಕೊಳ್ಳಿ.
ಹೀಗೆ ಮಾಡೋದ್ರಿಂದ ನೀವು ಯಾವ ಇಂಪಾರ್ಟೆಂಟ್ ವ್ಯಕ್ತಿಗೆ ಯಾವ ರಿಂಗ್ಟೋನ್ ಸೆಟ್ ಮಾಡಿರುತ್ತೀರೋ ನೋಟಿಫಿಕೇಶನ್ ಬಂದಕೂಡಲೇ ಅವರದೇ ಮೆಸೇಜ್ ಎಂದು ತಿಳಿದುಕೊಳ್ಳಬಹುದು. ನಂತರ ಇರುವ ಎರಡನೇ ಟ್ರಿಕ್ ಯಾವುದೆಂದರೆ ಸಾಮಾನ್ಯವಾಗಿ ವಾಟ್ಸಪ್ ಮಾಡುವಾಗ ನೀವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತೀರಿ. ಆ ರೀತಿಯಾಗಿ ಶೇರ್ ಆದ ಫೋಟೋಗಳು, ವಿಡಿಯೋಗಳು ನಿಮ್ಮ ಗ್ಯಾಲರಿಯಲ್ಲಿ ವಾಟ್ಸಪ್ ಇಮೇಜಸ್ ಎನ್ನುವ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ. ಆದರೆ ನೀವು ಆ ರೀತಿ ವೈಯಕ್ತಿಕ ಫೋಟೋಗಳು ವೀಡಿಯೋಗಳು ಗ್ಯಾಲರಿಯಲ್ಲಿ ಶೋ ಆಗಬಾರದು ಎನ್ನುವ ಉದ್ದೇಶವಿದ್ದರೆ ನಿಮ್ಮ ಫ್ರೆಂಡ್ ನ ಡಿಪಿ ಅನ್ನು ಕ್ಲಿಕ್ ಮಾಡಿ ಅದರಲ್ಲಿ ಇರುವ (i) ಬಟನ್ ಅನ್ನು ಕ್ಲಿಕ್ ಮಾಡಿ ಆಗ ಮೀಡಿಯಾ ವಿಸಿಬಲಿಟಿ ಎಂದು ಬರುತ್ತದೆ ಅದರಲ್ಲಿ ಡಿಫಾಲ್ಟ್ ಎಂದಿರುವ ಆಪ್ಷನ್ ಅನ್ನು ನೋ ಎಂದು ಕ್ಲಿಕ್ ಮಾಡಿ. ಹೀಗೆ ಮಾಡುವ ಮೂಲಕ ಆ ಫ್ರೆಂಡಿನಿಂದ ನಿಮಗೆ ಬರುವ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನು ಚಾಟ್ ನಲ್ಲಿ ಮಾತ್ರ ಶೋ ಆಗುವಂತೆ ನೋಡಿಕೊಳ್ಳಬಹುದು.