ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಹಾಕಿ ಇಡಿ ಜೀವನದ ಎಲ್ಲಾ ಕಷ್ಟಗಳು ಕರಗುತ್ತೆ ಇದು ಸತ್ಯ…! ಪರೀಕ್ಷಿಸಿ.

ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗಬೇಕು ಎಂದರೆ ಉಪ್ಪಿನ ಡಬ್ಬದಲ್ಲಿ ಒಂದು ವಸ್ತು ಹಾಕಿ ಬಚ್ಚಿಡಿ ಸಾಕು, ನಂತರ ಆಗುವ ಚಮತ್ಕಾರವನ್ನು ನೀವೇ ನೋಡಿ.ನಾವು ತಿನ್ನುವ ಆಹಾರದಲ್ಲಿ ಉಪ್ಪು ಇಲ್ಲ ಎಂದರೆ ಎಂತಹ ಮೃಷ್ಟಾನ್ನ ಭೋಜನವಾದರೂ ಸಹ ರುಚಿಸುವುದಿಲ್ಲ. ಹಾಗೆಯೇ ಉಪ್ಪಿದ್ದರೆ ಎಂತಹ ಆಹಾರವನ್ನು ಬೇಕಾದರೂ ರುಚಿ ಇರುವಂತೆ ಮಾಡಿಬಿಡಬಹುದು. ಉಪ್ಪಿನ ವೈಜ್ಞಾನಿಕ ಹಾಗೂ ಆಯುರ್ವೇದಿಕ್ ಮಹತ್ವ ಎಲ್ಲರಿಗೂ ಗೊತ್ತೇ ಇದೆ. ಉಪ್ಪು ಆಹಾರ ಸಂರಕ್ಷಕವಾಗಿ, ಸಮತೋಲಿತ ಆಹಾರದ ಪ್ರಮುಖ ಅಂಶವಾಗಿ ಬಹಳ ಮುಖ್ಯವಾಗುತ್ತದೆ. ಇದನ್ನು ಹೊರತುಪಡಿಸಿ ಜ್ಯೋತಿಷ್ಯದಲ್ಲಿ ಕೂಡ ಉಪ್ಪಿಗೆ ಬಹಳ ಶ್ರೇಷ್ಠವಾದ ಜಾಗ ಕೊಡಲಾಗುತ್ತದೆ. ನಮ್ಮ ಜೀವನದಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವಿಗೂ ಜ್ಯೋತಿಷ್ಯದ ಮಹತ್ವವಿದೆ. ಅದು ನಿಂಬೆಹಣ್ಣು ಆಗಿರಲಿ ಅಥವಾ ಉಪ್ಪೇ ಆಗಿರಲಿ. ಇವು ಅದ್ಭುತವಾದ ಚಮತ್ಕಾರಿ ಗುಣಗಳನ್ನು ಹೊಂದಿವೆ. ಉಪ್ಪು ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ನೀಡುತ್ತದೆ. ಜೊತೆಗೆ ನಕಾರತ್ಮಕ ಶಕ್ತಿಯ ಪ್ರಭಾವವನ್ನು ತೆಗೆದು ಹಾಕುತ್ತದೆ.

ಉಪ್ಪಿನ ಬಳಕೆಯಿಂದ ನಮ್ಮ ಅದೃಷ್ಟವನ್ನು ಸಹ ಬದಲಾಯಿಸಿಕೊಳ್ಳಬಹುದು. ಅದು ಹೇಗೆಂದರೆ ಉಪ್ಪಿಗೆ ವಾಸ್ತುದೋಷ ಮತ್ತು ಅಶುಭ ಶಕುನಗಳನ್ನು ದೂರ ಮಾಡುವ ಶಕ್ತಿಯಿದೆ. ಆದರೆ ಅದನ್ನು ಹೇಗೆ ಸರಿಯಾಗಿ ಬಳಕೆ ಮಾಡಬೇಕು ಎನ್ನುವುದು ತಿಳಿದುಕೊಂಡು ನಂತರ ಬಳಸಬೇಕು. ಉಪ್ಪನ್ನು ರಾಹು ಎಂದು ಗುರುತಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಉಪ್ಪು ಮನೆಯಲ್ಲಿರುವ ನಕಾರಾತ್ಮಕತೆಯನ್ನು ದೂರಮಾಡುವ ಸಾಧನವಾಗಿದೆ. ಇದು ಸುಖ-ಸಮೃದ್ಧಿಯನ್ನು ತರಬಲ್ಲದು. ಈ ಉಪ್ಪಿನ ಪ್ರಯೋಗಗಳನ್ನು ಹೇಗೆ ಮಾಡಬೇಕು ಎಂದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದಾದರೂ ವಾಸ್ತುದೋಷ ಇದೆ ಎಂದರೆ ಒಂದು ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ತುಂಬಿ ವಾಷ್ ರೂಮಿನಲ್ಲಿ ಇಡಬೇಕು. ಇದು ನಿಮ್ಮ ಮನೆಯಲ್ಲಿರುವ ವಾಸ್ತುದೋಷವನ್ನು ದೂರಮಾಡುತ್ತದೆ. ವಾರಕ್ಕೊಮ್ಮೆ ಆ ಗಾಜಿನ ಪಾತ್ರೆಯಲ್ಲಿರುವ ಉಪ್ಪನ್ನು ಬದಲಾಯಿಸುತ್ತಿರಬೇಕು. ವಾರಕ್ಕೊಮ್ಮೆ ಸಾಧ್ಯವಾಗದೆ ಹೋದರೆ ತಿಂಗಳಿಗೆ ಒಮ್ಮೆಯಾದರೂ ಖಂಡಿತವಾಗಿ ಬದಲಾಯಿಸಲೇ ಬೇಕು.

WhatsApp Group Join Now
Telegram Group Join Now

ಇದರ ಜೊತೆಗೆ ಪ್ರತಿ ಗುರುವಾರವನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ ನೆಲ ಒರೆಸುವ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿಕೊಂಡು ನೆಲವನ್ನು ಒರೆಸಿ. ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಕಾಣಿಸಿಕೊಳ್ಳುತ್ತಿದೆ ಎಂದರೆ ಉಪ್ಪನ್ನು ಗಾಜಿನ ತಟ್ಟೆ ಅಥವಾ ಗಾಜಿನ ಡಬ್ಬದಲ್ಲಿ ಇಟ್ಟು ಮನೆ ಯಾವುದಾದರೂ ಒಂದು ಮೂಲೆಯಲ್ಲಿ ಇಡಿ. ಈಗಾಗಲೇ ಜ್ಯೋತಿಷ್ಯದಲ್ಲಿ ಹೇಳಿರುವಂತೆ ಉಪ್ಪು ಹಾಗು ಗಾಜು ಎರಡು ರಾಹುವಿನ ಸಂಕೇತವಾಗಿರುತ್ತದೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಹುವಿನ ದೋಷವಿದ್ದು ಅದನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಕಂಚಿನ ತಟ್ಟೆಯಲ್ಲಿ ಉಪ್ಪನ್ನು ಹಾಕಿ ಒಂದು ಮೂಲೆಯಲ್ಲಿಡಿ. ಈ ರೀತಿಯಾಗಿ ಇನ್ನಷ್ಟು ಉಪ್ಪಿನ ಚಮತ್ಕಾರವನ್ನು ತಿಳಿಯಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">