ಒಮ್ಮೆ ಈ ತಾಯಿ ದರ್ಶನ ಮಾಡಿ ಮನೆಯಲ್ಲಿರುವ ದರಿದ್ರ ಹೋಗಿ ಹಣ ಬಂಗಾರ ಹೆಚ್ಚಾಗುತ್ತದೆ..ಈ ದೇವಿಯ ವಿಸ್ಮಯ ನೇರವಾಗಿ ನೋಡಿ‌.ಇಲ್ಲಿ ಹರಕೆ ಕಟ್ಟಿಕೊಂಡರೆ ಸೌಭಾಗ್ಯ ಮತ್ತು ಸಂತಾನ ಭಾಗ್ಯ ಖಚಿತ.ನಮ್ಮ ದೇಶದಲ್ಲಿ ನಮ್ಮ ರಾಜ್ಯ ಕರ್ನಾಟಕ ಪ್ರವಾಸಿಗರನ್ನು ಆಕರ್ಷಣೆ ಮಾಡುವುದರಲ್ಲಿ ನಾಲ್ಕನೇ ಅತ್ಯಂತ ಜನಪ್ರಿಯ ತಾಣ ಎಂದು ಪ್ರಸಿದ್ಧಿಯಾಗಿದೆ. ಇದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಇರುವಂತಹ ಪ್ರವಾಸಿ ತಾಣಗಳು ಇದರಿಂದ ದೇಶಗಳಲ್ಲಿ ಕರ್ನಾಟಕ ಹೆಸರುವಾಸಿಯಾಗಿದೆ. ಅದರಲ್ಲಿಯೂ ಆಧ್ಯಾತ್ಮಿಕ ಕ್ಷೇತ್ರಗಳಿಗೆ ಬೇರೆ ಬೇರೆ ಕಡೆಗಳಿಂದ ಸಾವಿರಾರು ಜನರು ಬಂದು ದರ್ಶನವನ್ನು ಪಡೆದುಕೊಳ್ಳುತ್ತಾರೆ. ಅಂತಹ ಕ್ಷೇತ್ರಗಳಲ್ಲಿ ಒಂದಾದ ಪ್ರಸಿದ್ಧ ದೇವಾಲಯ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಇಲ್ಲಿ ಇರುವಂತಹ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯು ತುಂಬ ಶಕ್ತಿಶಾಲಿಯಾದ ಆದಂತಹ ದೇವಿ ಆಗಿದ್ದು ತನ್ನ ಭಕ್ತರಿಗೆ ಬೇಡಿದ್ದನ್ನು ಕರುಣುಸುವಂತಹ ಕರುಣಾಮಯಿ ಎಂದು ಅನ್ನಿಸಿಕೊಂಡಿದ್ದಾಳೆ. ಗೊರವನಹಳ್ಳಿ ಮಹಾಲಕ್ಷ್ಮಿ ತಾಯಿ ಎಂದರೆ ಸಾಕು ಎಲ್ಲರಲ್ಲಿಯೂ ಭಕ್ತಿ ಭಾವ ಉಕ್ಕಿ ಬರುತ್ತದೆ ತನ್ನ ಸಂಕಷ್ಟ ದೂರಮಾಡು ಎಂದು ಬೇಡಿಕೊಂಡರು ಸಾಕು ಈ ಮಹಾತಾಯಿ ಅವರನ್ನು ಉದ್ಧಾರ ಮಾಡುತ್ತಾರೆ.

ಎಲ್ಲ ಕಷ್ಟಗಳನ್ನು ನಿವಾರಣೆ ಮಾಡುತ್ತಾಳೆ, ಕರುಣಾಮಯಿ ನೆನೆದವರಿಗೆ ಕರುಣೆಯನ್ನು ತೋರಿ ಕೃಪೆ ನೀಡುತ್ತಾಳೆ. ಲಕ್ಷಾಂತರ ಮಂದಿ ಭಕ್ತರು ಮಹಾಲಕ್ಷ್ಮಿಯ ಆಶೀರ್ವಾದವನ್ನು ಪಡೆದುಕೊಂಡು ಧನ್ಯರಾಗಿದ್ದಾರೆ ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷವಾದಂತಹ ಪೂಜೆಯನ್ನು ನೆರವೇರಿಸಲಾಗುತ್ತದೆ. ಅಷ್ಟೇ ಅಲ್ಲದೆ ದೇವಸ್ಥಾನದ ಕಡೆಯಿಂದ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆಯು ಸಹ ಮಾಡಿಕೊಡಲಾಗಿದೆ ಇಲ್ಲಿಗೆ ಬರುವಂತಹ ಭಕ್ತಾದಿಗಳು ಮಧ್ಯಾಹ್ನದ ಪ್ರಸಾದವನ್ನು ಸೇವಿಸಿ ನಂತರ ಹೋಗಬಹುದು. ಲಕ್ಷ್ಮಿ ಎಂದಕೂಡಲೇ ಎಲ್ಲರಿಗೂ ನೆನಪಾಗುವುದು ಕೊಲ್ಲಾಪುರದ ಲಕ್ಷ್ಮೀದೇವಿ ಆದರೆ ಗೊರವನಹಳ್ಳಿ ಕರ್ನಾಟಕದ ಕೊಲ್ಲಾಪುರವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ. ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಜನಪ್ರಿಯ ಕ್ಷೇತ್ರದ ಹಿರಿಮೆಗೆ ಗೊರವನಹಳ್ಳಿ ಪಾತ್ರವಾಗಲಿದೆ. ಸಂತಾನ ಭಾಗ್ಯ, ಆರೋಗ್ಯ ಭಾಗ್ಯ, ಅಷ್ಟೇ ಅಲ್ಲದೆ ವಿವಾಹ ಭಾಗ್ಯ ಯಾವುದೇ ಒಂದು ತೊಂದರೆಗಳು ಇದ್ದರು ಸರಿಯೇ ಭಕ್ತರು ತಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಈ ಲಕ್ಷೀ ತಾಯಿಗೆ ಹರಕೆಯನ್ನು ಕಟ್ಟಿಕೊಂಡರೆ ಸಾಕು ಅವರಿಗೆ ಇರುವಂತಹ ಎಲ್ಲ ತೊಂದರೆಗಳು ದೂರವಾಗಿ ಅವರ ಜೀವನ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎನ್ನುವಂತಹದ್ದು ನೆಲೆಸುತ್ತದೆ.

By admin

Leave a Reply

Your email address will not be published. Required fields are marked *