ವರಮಹಾಲಕ್ಷ್ಮಿ ಹಬ್ಬಕ್ಕೆ ಸೀರೆ ತರುವವರು ಅಪ್ಪಿತಪ್ಪಿಯೂ ಈ ಒಂದು ತಪ್ಪನ್ನು ಮಾಡಬೇಡಿ..ವ್ರತದ ಪಲ ಸಿಗೋದಿಲ್ಲ

ಶ್ರೀ ಮಹಾಲಕ್ಷ್ಮಿಗೆ ಸೀರೆ ತರುವಾಗ ಈ ತಪ್ಪನ್ನು ಎಂದು ಮಾಡಬಾರದು !!ಹಿಂದೂ ಧರ್ಮದಲ್ಲಿನ ದೇವತೆ ಗಳಲ್ಲೊಬ್ಬರು  ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆ ಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯ ನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ವರಮಹಾಲಕ್ಷ್ಮಿ ವ್ರತ ವನ್ನು ಆಚರಿಸುವ ಮೂಲಕ ಸಲ್ಲಿಸಲಾಗುತ್ತದೆ ದೀಪಾ ವಳಿ ಹಬ್ಬದ ಸಮಯದಲ್ಲಿ ಹಾಗೂ ನವರಾತ್ರಿ ಹಬ್ಬದ ಸಮಯ ದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿ ಪೂಜೆ ಎಂದು ಆಚರಿಸಲಾಗುತ್ತದೆ. ಮಹಾ ಲಕ್ಷ್ಮಿಗೆ ಅನೇಕ ಸ್ವರೂಪಗಳು ಇವೆ ಅವು ವೆಂದರೆ ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯ ಲಕ್ಷ್ಮಿ, ಗಜ ಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾ ಲಕ್ಷ್ಮಿ, ಧನಲಕ್ಷ್ಮಿ.ಹಾಗೆಯೇ ಆಷಾಢ ಮಾಸ ಮುಗಿದ ನಂತರ ಬರುವ ಮೊದಲ ಹಬ್ಬವೇ ವರಮಹಾಲಕ್ಷ್ಮಿ ಈ ಹಬ್ಬವನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಬಹಳ ಭಕ್ತಿ ಯಿಂದ ಆಚರಿಸುತ್ತಾರೆ ಇದರಿಂದ ಆ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನಿಲ್ಲಿಸಿರುತ್ತಾಳೆ

ಎಂಬುದು ಎಲ್ಲರ ನಂಬಿಕೆಯಾಗಿರುತ್ತದೆ ಆದ್ದರಿಂದ ಮನೆಯಲ್ಲಿರುವ ಮುತ್ತೈದೆಯರು ಲಕ್ಷ್ಮಿಯನ್ನು ಕೂರಿಸಿ ಎಲ್ಲರನ್ನೂ ಅರಿಶಿನ ಕುಂಕುಮಕ್ಕೆ ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ಮಡಲಕ್ಕಿಯನ್ನು ತುಂಬಿ ಅವರನ್ನು ಸಂತೋಷಪಡಿಸಿದಾಗ ತನಗೆ ಮುತ್ತೈದೆ ಭಾಗ್ಯ ಹೆಚ್ಚು ತ್ತದೆ ಎಂದು ಆಕೆಯ ನಂಬಿಕೆಯಾಗಿರುತ್ತದೆ. ವರ ಮಹಾಲಕ್ಷ್ಮಿ ಹಬ್ಬಕ್ಕೆ ತಾಯಿ ವರಮಹಾಲಕ್ಷ್ಮಿ ಯನ್ನು ಹೇಗೆ ಕೂರಿಸಬೇಕು ಎಂಬುದು ಕೆಲವು ನೀತಿ ನಿಯ ಮಗಳು ಇವೆ. ಅವುಗಳಲ್ಲಿ ಮುಖ್ಯವಾದವು ಏನು ಎಂದು ಈ ಕೆಳಕಂಡಂತೆ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ವರಮಹಾಲಕ್ಷ್ಮಿ ಹಬ್ಬವನ್ನು ಮಾಡುವುದಕ್ಕಿಂತ ಮೊದಲು ಮನೆಯನ್ನು ಶುಭ್ರವಾಗಿ ಯಾವುದೇ ಕೊಳೆ ಇಲ್ಲದ ಹಾಗೆ ಶುಚಿ ಮಾಡಿರಬೇಕು ನಂತರ ಲಕ್ಷ್ಮಿ ಕೂರಿಸುವಾಗ ಒಂದು ಬಿಂದಿಗೆಯಲ್ಲಿ ನೀರನ್ನೋ ಅಥವಾ ಅಕ್ಕಿಯನ್ನೋ ಇಟ್ಟು ತಾಯಿ ವರಮಹಾಲಕ್ಷ್ಮಿ ಕೂತಿರುವ ಹಾಗೆಯೇ ಕೂರಿಸುತ್ತಾರೆ ನಂತರ ಅದಕ್ಕೆ ಸೀರೆಯನ್ನು ಉಡಿಸುತ್ತಾರೆ ಇಲ್ಲಿ ತಾಯಿ ವರಮಹಾ ಲಕ್ಷ್ಮಿಗೆ ಬಿಳಿ ಬಣ್ಣದ ಸೀರೆ ಹಾಗೂ ಕೆಂಪು ಹಂಚು ಇರುವಂತಹ ಸೀರೆ ತುಂಬಾ ಪ್ರಿಯ ವಾದದ್ದು ಆದ್ದ ರಿಂದ ಬಿಳಿ ಬಣ್ಣದ ಸೀರೆಯನ್ನು ಉಡಿಸುವುದು ಉತ್ತಮ. ಹಾಗೆಯೇ ಈ ಸೀರೆಯನ್ನು ತೆಗೆದುಕೊಂಡು ಬರುವಾಗ ನಾವು ಅದನ್ನುಯಾವುದೇ ಕಾರಣಕ್ಕೂ ಉಟ್ಟಿಕೊಂಡಿರಬಾರದು ಅದನ್ನು ತಾಯಿ ಲಕ್ಷ್ಮಿಗೆ ಉಡಿಸುವುದು ಶ್ರೇಷ್ಠವಲ್ಲ ಮೊದಲು ತಾಯಿಗೆ ಉಡಿಸಿ ನಂತರ ಅದನ್ನು ಮನೆಯ ಗೃಹಿಣಿ ಧರಿಸು ವುದರಿಂದ ಒಳ್ಳೆಯದಾಗುತ್ತದೆ ಎಂಬುದು ಒಂದು ನಂಬಿಕೆ ಎಲ್ಲರಲ್ಲೂ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]