ಅಪ್ಪಿಯತಪ್ಪಿಯೂ ಈ ರೀತಿಯಾದ ಕಳಶವನ್ನು ವರಮಹಾಲಕ್ಷ್ಮಿ ಹಬ್ಬದಲ್ಲಿ ಬಳಸಬೇಡಿ..ಪಲ ಕೊಡೋದಿಲ್ಲ.

ವರಮಹಾಲಕ್ಷ್ಮಿ ಹಬ್ಬ 2022 ||ನಮ್ಮ ಹಿಂದೂ ಧರ್ಮದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಬಹಳ ವಿಶೇಷವಾದಂತಹ ಸ್ಥಾನವಿದೆ ಎಂದೇ ಹೇಳಬಹುದಾಗಿದೆ. ಅದರಲ್ಲೂ ಆಷಾಢ ಮುಗಿದ ನಂತರ ಬರುವ ಹಬ್ಬವೇ ಈ ವರಮಹಾಲಕ್ಷ್ಮಿ ಹಬ್ಬ ಈ ಹಬ್ಬವನ್ನು ಭಕ್ತಿಯಿಂದ ಆಚರಿಸುತ್ತಾರೆ. ಹಾಗೆ ಪ್ರತಿ ವರ್ಷವೂ ವಿಭಿನ್ನವಾದ ರೀತಿಯಲ್ಲಿ ಲಕ್ಷ್ಮಿಯನ್ನು ಮನೆಯಲ್ಲಿ ಕೂರಿಸುತ್ತಾರೆ. ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನದಂದು ತಾಯಿ ವರಮಹಾಲಕ್ಷ್ಮಿಯನ್ನು ವಿಶೇಷ ವ್ರತದ ರೂಪದಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ. ಹಾಗೆಯೇ ದೀಪಾವಳಿ ಮತ್ತು ನವರಾತ್ರಿಯ ದಿನದಂದು ಲಕ್ಷ್ಮಿಗೆ ವಿಶೇಷವಾದ ಪೂಜೆಯನ್ನು ಅರ್ಪಿಸಲಾಗುತ್ತದೆ. ಹಾಗೆಯೇ ವರಮಹಾಲಕ್ಷ್ಮಿ ಮಾಡುವಂತಹ ಸಮಯದಲ್ಲಿ ತಾಯಿ ಲಕ್ಷ್ಮಿಗೆ ಬಹಳ ಮುಖ್ಯವಾಗಿ ಸೀರೆಯನ್ನು ತಂದು ತಾಯಿಗೆ ಉಳಿಸುವುದರ ಮೂಲಕ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಅದರಲ್ಲಿಯೂ ಲಕ್ಷ್ಮಿ ದೇವಿಗೆ ಬಿಳಿ ಬಣ್ಣದ ಸೀರೆ ಬಹಳ ಪ್ರಿಯವಾದದ್ದು ಎಂದೇ ಹೇಳ ಬಹುದು. ಈ ಹಬ್ಬದ ಲ್ಲಿ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ಕೊಟ್ಟು ಅವರ ಆಶೀರ್ವಾದವನ್ನು ಪಡೆಯುವುದರಿಂದ ಒಳ್ಳೆಯದಾಗತ್ತದೆ ಎಂಬ ನಂಬಿಕೆ ಇದೆ.

ಹಾಗೆಯೇ ತಾಯಿ ವರಮಹಾಲಕ್ಷ್ಮಿಯನ್ನು ಕೂರಿಸುವಂತಹ ಸಮಯದಲ್ಲಿ ಯಾವ ರೀತಿ ಕಳಶವನ್ನು ಇಡಬೇಕು ಯಾವ ರೀತಿ ಕಳಶವನ್ನು ಇಡಬಾರದು ಎಂಬ ವಿಧಿ ವಿಧಾನವನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ. ಯಾವ ರೀತಿ ಕಳಶವನ್ನು ಇಟ್ಟರೆ ಆ ಮನೆಗೆ ಸಕಲ ಸಮೃದ್ಧಿ ಸಿಗುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳೋಣ ವರಮಹಾಲಕ್ಷ್ಮಿ ಹಬ್ಬವನ್ನು ಯಾವುದೇ ಆಡಂಬರ ವಿಜೃಂಭಣೆಯಿಂದ ಬೇರೆಯ ವರನ್ನು ಮೆಚ್ಚಿಸುವುದಕ್ಕೋಸ್ಕರ ಮಾಡುವುದಲ್ಲ ಅದರ ಬದಲಾಗಿ ಬಹಳ ಭಕ್ತಿಯಿಂದ ನಿಮಗೆ ಅನುಕೂಲವಾದಂತಹ ರೀತಿ ಮಾಡುವುದ ರಿಂದ ಒಳ್ಳೆಯ ಫಲಗಳನ್ನು ಪಡೆದು ಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ವರಮಹಾಲಕ್ಷ್ಮಿ ಹಬ್ಬದಲ್ಲಿ ಕೆಲವರು ಲಕ್ಷ್ಮಿಯನ್ನು ಕೂರಿಸುವಾಗ ಹಲವಾರು ಎತ್ತರವಾದoತಹ ಪಾತ್ರಗಳನ್ನು ಇಟ್ಟು ಅದರ ಮೇಲೆ ಕಳಶವನ್ನು ಇಡುತ್ತಾರೆ ಹೀಗೆ ಇಡುವುದು ತಪ್ಪು ಇದರಿಂದ ಯಾವುದೇ ಸಿದ್ದಿ ನಿಮಗೆ ದೊರೆಯುವುದಿಲ್ಲ. ಲಕ್ಷ್ಮಿ ದೇವಿಯನ್ನು ಕೇವಲ ಕಂಚಿನ ಪಾತ್ರೆ ಮತ್ತು ತಾಮ್ರ ಅಥವಾ ಬೆಳ್ಳಿಯ ಬಿಂದಿಗೆ ಯಲ್ಲಿ ಲಕ್ಷ್ಮಿಯನ್ನು ಕೋರಿಸುವುದು ಒಳ್ಳೆಯದು. ಹಾಗಾಗಿ ಈ ಮೂರರಲ್ಲಿ ಯಾವುದಾದರೂ ಒಂದನ್ನು ಬಳಸಿ ಲಕ್ಷ್ಮಿಯನ್ನು ಕೋರಿಸುವುದು ಉತ್ತಮ. ಹಾಗೆ ತಾಯಿಗೆ ತರುವಂತಹ ಸೀರೆಯನ್ನು ಯಾವುದೇ ಕಾರಣಕ್ಕೂ ಮೊದಲು ಯಾರು ಕೂಡ ಧರಿಸಿರಬಾರದು, ಮೊದಲು ತಾಯಿಗೆ ಧರಿಸಿ ಆನಂತರ ಮನೆಯ ಗೃಹಿಣಿ ಮನೆಯ ಹೆಣ್ಣು ಮಕ್ಕಳು ಧರಿಸಿ ಕೊಂಡರೆ ಮನೆಗೆ ಒಳ್ಳೆಯ ದಾಗುತ್ತದೆ ಎಂಬುದು ಪುರಾಣಗಳಲ್ಲಿ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

[irp]