ಮಹಾಲಕ್ಷ್ಮಿ ಹಬ್ಬದಲ್ಲಿ ಕಳಶವನ್ನು ಯಾವ ಬಗೆಯಲ್ಲಿ ಇಡಬೇಕು ಒಂದರ ಮೇಲೊಂದು ಕಳಶ ಅಥವಾ ಎರಡು ಕಳಶ ಗೊಂದಲಕ್ಕೆ ಉತ್ತರ ನೋಡಿ.

ವರಮಹಾಲಕ್ಷ್ಮಿಯಲ್ಲಿ ಕಳಸ ಜೋಡಣೆ ಯಾವ ರೀತಿ ಮಾಡಿದರೆ ಒಳ್ಳೆಯದು ??ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳು ಬಹಳ ಸಂಭ್ರಮದಿಂದ ಮಾಡುವಂತಹ ಹಬ್ಬವೇ ಈ ವರ ಮಹಾಲಕ್ಷ್ಮಿ ವರಮಹಾಲಕ್ಷ್ಮಿಯು ಸ್ವತಹ ದೇವರಲ್ಲಿ ದೇವರಾದಂತಹ ಮಹಾ ವಿಷ್ಣುವಿನ ಪತ್ನಿಯಾಗಿದ್ದು ಮಹಾಲಕ್ಷ್ಮಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ ಧನಲಕ್ಷ್ಮಿ, ಭಾಗ್ಯಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ ,ವಿದ್ಯಾ ಲಕ್ಷ್ಮಿ, ಆದಿ ಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯ ಲಕ್ಷ್ಮಿ, ಗಜಲಕ್ಷ್ಮಿ, ಹೀಗೆ ಹಲವಾರು ಹೆಸರಿನಿಂದ ಕರೆಯುತ್ತಾರೆ. ಪ್ರತಿ ವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆಯನ್ನು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ ಸಲ್ಲಿಸಲಾಗುತ್ತದೆ. ದೀಪಾವಳಿಯ ದಿನದಂದು ಮತ್ತು ನವರಾತ್ರಿಯ ಸಮಯದಲ್ಲಿ ಲಕ್ಷ್ಮಿಗೆ ವಿಶೇಷವಾದ ಪೂಜೆಯನ್ನು ಅರ್ಪಿಸುತ್ತಾರೆ. ಹಾಗೆಯೇ ವರಮಹಾಲಕ್ಷ್ಮಿಯನ್ನು ಮಾಡುವಂತ ಸಮಯದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳು ಯಾವುವೆಂದು ಈ ಕೆಳಗಿನಂತೆ ನೋಡೋಣ.

ಮೊದಲನೆಯದಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಮಾಡುವ ಮುನ್ನ ಮನೆಯನ್ನು ಶುಚಿಯಾಗಿ ಮಾಡಿರ ಬೇಕು ನಂತರ ಲಕ್ಷ್ಮಿಯನ್ನು ಕೂರಿಸುವಾಗ ನೀವು ನಿಮ್ಮ ಮನಸ್ಥಿತಿ ಹೇಗೆ ಇರುತ್ತದೆಯೋ ಹಾಗೆ ಲಕ್ಷ್ಮಿಯನ್ನು ಕೂರಿಸುವುದರಿಂದ ನಿಮಗೆ ಉತ್ತಮ ಬೇರೆಯವರು ಹೇಗೆ ಕೂರಿಸಿದ್ದರೋ ಹಾಗೆ ಹಾಗೆಸಬೇಕು ಎಂಬ ನೀತಿ ನಿಯಮಗಳು ಎಲ್ಲಿಯೂ ಇಲ್ಲ ನಿಮ್ಮ ಅನುಗುಣಕ್ಕೆ ನಿಮಗೆ ಇಷ್ಟವಾದ ರೀತಿಯಲ್ಲಿ ಲಕ್ಷ್ಮಿಯನ್ನು ಕೂರಿಸುವುದು ಉತ್ತಮ. ಕೆಲವರ ಬಳಿ ಅಷ್ಟೊಂದು ಅದ್ದೂರಿಯಾಗಿ ಮಾಡಲು ಆಗುವುದಿಲ್ಲ ಅಂತವರು ನೀವು ಪ್ರತಿನಿತ್ಯ ದೇವರ ಪೂಜೆಯನ್ನು ಹೇಗೆ ಮಾಡುತ್ತೀರೋ ಅದೇ ರೀತಿಯಲ್ಲಿ ಮಾಡುವುದು ಸಹ ಒಳ್ಳೆಯದು ಹೇಗೆ ಮಾಡಿದರು ಲಕ್ಷ್ಮಿ ಒಲೆಯುತ್ತಾಳೆ ಎಂಬುದು ನಂಬಿಕೆಯಾಗಿದೆ.

WhatsApp Group Join Now
Telegram Group Join Now

ಹಾಗೆಯೇ ಲಕ್ಷ್ಮಿಯನ್ನು ಕೂರಿಸುವಂತಹ ವಿಧಾನದಲ್ಲಿ ಒಂದು ಲಕ್ಷ್ಮಿಗೆ ಅಂದರೆ ಮುಖ್ಯವಾಗಿ ಕೂರಿಸುವ ಲಕ್ಷ್ಮಿಯ ಬಿಂದಿಗೆಗೆ ನೀರನ್ನೋ ಅಥವಾ ಧಾನ್ಯವನ್ನೋ ತುಂಬಿಸಬಹುದು ಅದಲ್ಲದೆ ಇನ್ನೊಂದು ಕಳಶವನ್ನು ಕೆಳಗಡೆ ಇಟ್ಟು ಪೂಜಿಸುವುದರಿಂದ ಲಕ್ಷ್ಮಿಯನ್ನು ಆಹ್ವಾನಿಸಿದ ಅರ್ಥ ಬರುತ್ತದೆ ಆದ್ದರಿಂದ ಕೆಳಗಡೆ ಇಡುವಂತಹ ಕಳಶಕ್ಕೆ ಅಕ್ಕಿಯನ್ನು ಮತ್ತು ಧಾನ್ಯ ಗಳನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಗೆ ಸಕಲ ಸಂಪತ್ತನ್ನು ಸಮೃದ್ಧಿಯನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಲಕ್ಷ್ಮಿಯನ್ನು ಕೂರಿಸಿ ಮುತ್ತೈದೆಯರನ್ನು ಕರೆದು ಅರಿಶಿಣ ಕುಂಕುಮ ಕೊಡುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಸದಾ ಕಾಲ ನೆಲೆಸಿರುತ್ತದೆ ಎಂಬುದು ಪ್ರತಿಯೊಬ್ಬರ ನಂಬಿಕೆ ಯಾಗಿದೆ ಇದನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳು ಅಂದರೆ ಮುತ್ತೈದೆಯರು ಮಾಡುವುದರಿಂದ ತಮ್ಮ ಸಕಲ ಇಷ್ಟಾರ್ಥಗಳನ್ನು ಸಿದ್ಧಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]