ವರಮಹಾಲಕ್ಷ್ಮಿ ಹಬ್ಬದ ದಿನ ಮನೆಯಲ್ಲಿ ಯಾರೂ ಹೀಗೆ ಹೇಳಬೇಡಿ ಜೊತೆಗೆ ಈ ತಪ್ಪುಗಳನ್ನು ಮಾಡಲೇಬಾರದು !!
ವರಮಹಾಲಕ್ಷ್ಮಿ ಪೂಜೆಯನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ ಹಬ್ಬ ಇರುವವರು ವ್ರತ ಇರುವವರು ಸಾಮಾನ್ಯವಾಗಿ ಎಲ್ಲರೂ ವರಮಹಾ ಲಕ್ಷ್ಮಿ ಹಬ್ಬವನ್ನು ಮಾಡುತ್ತಾರೆ ಆದರೆ ಕೆಲವೊಂದು ಸಲ ಸಾಕಷ್ಟು ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ ಆತುರ ಆತುರವಾಗಿ ಮಾಡುತ್ತಾ ಇರುತ್ತಾರೆ ಕೆಲವರು ಮಾಡಲೇ ಬೇಕಾ ಎಂಬ ಸೋಮಾರಿತನದಿಂದಲೂ ಬೇಜವಾಬ್ದಾರಿಯಿಂದ ಮಾಡುತ್ತಿರುತ್ತಾರೆ ಹೀಗೆ ತಾತ್ಸಾರ ಮನೋಭಾವದಿಂದ ಮಾಡುವುದು ಅಷ್ಟೊಂದು ಸಮಂಜಸವಲ್ಲ ಯಾವುದೇ ಒಂದು ಪೂಜೆ ಪುನಸ್ಕಾರವನ್ನು ಮಾಡಬೇಕಾದರೂ ಮುಖ್ಯವಾಗಿ ಮನೆಯನ್ನು ಸ್ವಚ್ಛ ಮಾಡಿ ಮನೆಯ ಮುಂಭಾಗಿಲನ್ನು ಸ್ವಚ್ಛ ಮಾಡಿರಬೇಕು ಹೀಗೆ ಮಾಡಿದ ನಂತರವೇ ವರಮಹಾಲಕ್ಷ್ಮಿ ಹಬ್ಬವನ್ನು ಮಾಡುವುದು ಉತ್ತಮ ಹಾಗೆ ಮುಖ್ಯವಾಗಿ ತಿಳಿದಿರಬೇಕಾದಂತ ಅಂಶ ಯಾವುದೇ ಎಂದರೆ ಮೊದಲು ಗಣಪತಿಯ ಪೂಜೆಯನ್ನು ಮಾಡಿದ ನಂತರವೇ ವರಮಹಾಲಕ್ಷ್ಮಿ ಯನ್ನು ಪೂಜಿಸಬೇಕು ಜೊತೆಗೆ ಕುಲ ದೇವರ ಪೂಜೆ ಯನ್ನು ಮಾಡಿದ ನಂತರ ವರಮಹಾಲಕ್ಷ್ಮಿ ಹಬ್ಬ ಮಾಡಬೇಕು.
ಇನ್ನು ವರಮಹಾಲಕ್ಷ್ಮಿಗೆ ಬಳಸುವಂತಹ ಯಾವುದೇ ಪೂಜೆ ಸಾಮಾನುಗಳನ್ನಾಗಲಿ ಮತ್ತು ಸೀರೆ ಆಭರಣಗಳು ಅಥವಾ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಯಾಕೆ ಎಂದರೆ ಎಲ್ಲರೂ ಸಹ ನೆಲದ ಮೇಲೆ ಓಡಾಡಿರುತ್ತಾರೆ ಆದ್ದರಿಂದ ಯಾವುದಾದರೂ ಬಟ್ಟೆ ಅಥವಾ ತಟ್ಟೆ ಚಾಪೆಯನ್ನು ಹಾಕಿ ಅದರ ಮೇಲೆ ಇಡುವುದು ಉತ್ತಮ ಮತ್ತು ವರಮಹಾಲಕ್ಷ್ಮಿಗೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಸೀರೆಯಾಗಲಿ ಮತ್ತು ನೀಲಿ ಬಣ್ಣದ ಸೀರೆಯನ್ನಾಗಲಿ ಧರಿಸಬಾರದು ಮತ್ತು ಪೂಜೆ ಮಾಡುವವರು ಸಹ ಈ ಬಣ್ಣದ ಸೀರೆಗಳನ್ನು ಧರಿಸಿಕೊಂಡಿರಬಾರದು.
ಮತ್ತು ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಕೋಪ ಮಾಡಿಕೊಂಡು ಜಗಳ ಮಾಡಿಕೊಂಡು ಜೋರಾಗಿ ಮಾತನಾಡಿಕೊಂಡು ಬೇಜಾರು ಮಾಡಿಕೊಂಡು ಈ ರೀತಿ ಮಾಡುವುದರಿಂದ ಜೇಷ್ಠ ಲಕ್ಷ್ಮಿಯನ್ನು ಆಹ್ವಾನ ಮಾಡಿದಂತೆ ಆಗುತ್ತದೆ ಇದರಿಂದ ನೀವು ಯಾವುದೇ ಸಿದ್ದಿಯನ್ನು ಗಳಿಸಿ ಕೊಳ್ಳುವುದಕ್ಕೆ ಆಗುವುದಿಲ್ಲ ಹಾಗಾಗಿ ಆದಷ್ಟು ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಸಾಮರಸ್ಯದಿಂದ ಪೂಜೆಯನ್ನು ಮಾಡಬೇಕು ವರಮಹಾಲಕ್ಷ್ಮಿ ಹಬ್ಬದ ದಿನ ಬ್ರಾಹ್ಮಣರಿಗೆ ದಾನವನ್ನು ಕೊಡುವುದು ಅಥವಾ ಊಟವನ್ನು ಕೊಡುವಂತದ್ದು ಆ ದಿನ ಯಾರೇ ಮನೆಗೆ ಬಂದರು ಪ್ರತಿಯೊಬ್ಬರಿಗೂ ಗೌರವವನ್ನು ಕೊಟ್ಟು ಅತಿಥಿ ಸತ್ಕಾರವನ್ನು ಮಾಡಿ ಅವರಿಗೆ ತಾಂಬೂಲವನ್ನು ಕೊಟ್ಟು ಅವರಿಂದ ಆಶೀರ್ವಾದವನ್ನು ಪಡೆದು ಕೊಳ್ಳಬೇಕು ತಾಂಬೂಲದ ಜೊತೆ ಯಾವುದೇ ಕಾರಣಕ್ಕೂ ಸ್ಟೀಲ್ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಕೊಡಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.