ಕೇವಲ 5 ನಿಮಿಷದಲ್ಲಿ ಮನೆ ಹಾಗೂ ಟಾಯ್ಲೆಟ್ ಫಳ ಫಳ.. ಹೀಗೆ ಮಾಡಿ ಸಾಕು... - Karnataka's Best News Portal

ಎಷ್ಟೇ ಗಲೀಜ್ ಆಗಿರುವ ಟಾಯ್ಲೆಟ್ ಆದರೂ ಈ ಉಪಾಯದಿಂದ ಪಳಪಳ ಹೊಳೆಯುವಂತೆ ಕ್ಲೀನ್ ಮಾಡಬಹುದು.ಶೌಚಾಲಯ ಎನ್ನುವುದು ನಮ್ಮ ಮನೆಯ ಪ್ರಮುಖವಾದ ಜಾಗ ನಮ್ಮ ಆರೋಗ್ಯ ಎಷ್ಟು ಚೆನ್ನಾಗಿರಬೇಕು ಎಂದು ಕಾಳಜಿ ಮಾಡುತ್ತಿವೋ ನಮ್ಮ ಶೌಚಾಲಯ ಅಷ್ಟೇ ಶುದ್ಧವಾಗಿರುವಂತೆ ನೋಡಿ ಕೊಳ್ಳಬೇಕು. ಯಾಕೆಂದರೆ ನಮ್ಮ ಆರೋಗ್ಯದ ಗುಟ್ಟು ಇರುವುದು ಅಲ್ಲೇ, ಎಲ್ಲಾ ರೋಗಗಳ ಮೂಲ ಇರುವುದು ಅಲ್ಲಿಯೇ ಶೌಚಾಲಯ ಗಲೀಜಾಗಿ ಇದ್ದರೆ ಅಥವಾ ಶೌಚಾಲಯ ಸ್ವಚ್ಛವಾಗಿ ಇಲ್ಲದೆ ಹೋದರೆ ಡೆಂಗ್ಯೂ, ಮಲೇರಿಯಾ ಮತ್ತು ಜಾಂಡಿಸ್ ಮುಂತಾದ ಕಾಯಿಲೆಗಳು ಬರುತ್ತವೆ. ವೈರಲ್ ಫೀವರ್ ಗಳು ಹಾಗೂ ಬ್ಯಾಕ್ಟೀರಿಯಾ ದೇಹದ ಮೇಲೆ ಅಟ್ಯಾಕ್ ಮಾಡಿ ನಾನಾ ರೋಗಗಳನ್ನು ಉಂಟುಮಾಡುತ್ತದೆ. ಹಾಗಾಗಿ ಇಂತಹ ರೋಗಗಳಿಂದ ದೇಹವನ್ನು ಕಾಪಾಡಿ ಕೊಳ್ಳಬೇಕಾದರೆ ಶೌಚಾಲಯವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಅಲ್ಲದೆ ಶೌಚಾಲಯ ಚೆನ್ನಾಗಿ ಇಲ್ಲದೆ ಹೋದರೆ ನಾವು ಅಲ್ಲಿ ಹೋಗಲು ಇಷ್ಟಪಡುವುದಿಲ್ಲ ಇದರಿಂದ ಮಲಬದ್ಧತೆ ಅಂತಹ ಸಮಸ್ಯೆಗಳು ಹಾಗೂ ಮೂತ್ರಕೋಶದ ಸೋಂಕು ಇನ್ನು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ನಿಮ್ಮ ಮನೆಯ ಟಾಯ್ಲೆಟ್ ಎಷ್ಟೇ ಗಲೀಜ್ ಆಗಿದ್ದರೂ ಅದನ್ನು ಪಳಪಳ ಇರಿಸಬೇಕು ಎಂದರೆ ಈ ರೀತಿ ಮಾಡಿ ನೋಡಿ. ಮೂರು ಅಥವಾ ನಾಲ್ಕು ನಿಂಬೆಹಣ್ಣನ್ನು ತೆಗೆದುಕೊಂಡು ಅದರಿಂದ 50 ರಿಂದ 100 ಮಿಲಿಯಷ್ಟು ರಸವನ್ನು ತೆಗೆದುಕೊಳ್ಳಿ ಅದಕ್ಕೆ ಎರಡು ಚಮಚದಷ್ಟು ಅಡಿಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಪೂರ್ತಿ ಇಡಿ ಮತ್ತು ಬಂಟ್ವಾಳದ ಕಾಯಿಯನ್ನು ಒಂದು ಹಿಡಿ ತೆಗೆದುಕೊಂಡು ಅದನ್ನು ರಾತ್ರಿ ಪೂರ್ತಿ ನೆನೆ ಹಾಕಿ ಬೆಳಗ್ಗೆ ಎದ್ದು ಅದನ್ನು ಪೇಸ್ಟ್ ಮಾಡಿಕೊಂಡು ಈ ಮೂರು ಪದಾರ್ಥದಿಂದ ಒಂದು ಲಿಕ್ವಿಡ್ ತಯಾರು ಮಾಡಿಕೊಳ್ಳಿ.

ಇದನ್ನು ನಿಮ್ಮ ಮನೆಯಲ್ಲಿರುವ ಖಾಲಿ ಹಾರ್ಪಿಕ್ ಅಥವಾ ಡೊಮಿಕ್ಸ್ ಬಾಟಲಿಗೆ ತುಂಬಿ ಇದರಿಂದ ನಿಮ್ಮ ಶೌಚಾಲಯದ ಪೂರ್ತಿ ಈ ಲಿಕ್ವಿಡ್ ಅನ್ನು ಹಾಕಿ ಚೆನ್ನಾಗಿ ಉಜ್ಜಿ, ಒಂದು ತಾಸು ಬಿಟ್ಟು ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿಇದರಿಂದ ಅಲ್ಲಿರುವ ಎಲ್ಲಾ ರೀತಿಯ ಸೋಂಕುಗಳು ಕೂಡನಾಶವಾಗುತ್ತವೆ. ಬ್ಯಾಕ್ಟೀರಿಯ ವೈರಸ್ ಯಾವುದೇ ಇನ್ಫೆಕ್ಷನ್ ಕೂಡ ಇರುವುದಿಲ್ಲ ಮತ್ತು ಯಾವುದೇ ಎಷ್ಟೇ ಕೆಟ್ಟದಾದ ಹಳೆ ಕರೆ ಇದ್ದರೆ ಕೂಡ ಅದು ಹೋಗಿ ಪಳಪಳ ಹೊಳೆಯುತ್ತಿರುತ್ತದೆ. ಮತ್ತು ಎಂತಹ ಕೆಟ್ಟ ದುರ್ವಾಸನೆ ಇದ್ದರೂ ಕೂಡ ಅದು ಕೂಡ ಸರಿ ಹೋಗುತ್ತದೆ ಈ ರೀತಿ ವಾರಕ್ಕೆ ಎರಡು ಬಾರಿ ನಿಮ್ಮ ಶೌಚಾಲಯವನ್ನು ಕ್ಲೀನ್ ಮಾಡುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಅನೇಕ ರೋಗಗಳಿಗೆ ನೀವು ವಿನಾಕಾರಣ ತುತ್ತಾಗುವುದು ತಪ್ಪುತ್ತದೆ.

Leave a Reply

Your email address will not be published. Required fields are marked *