ವಾರದಲ್ಲಿ 3 ದಿನ ಟಾಯ್ಲೆಟ್ಗೆ ಹೋದ್ರೆ ಸಾಕು..ನಿಮ್ಮ ಆರೋಗ್ಯದ ಗುಟ್ಟು ಇದು...ಡಾ ಅಂಜನಪ್ಪನವರಿಂದ ವಿಶೇಷ ಸಲಹೆ..! » Karnataka's Best News Portal

ವಾರದಲ್ಲಿ 3 ದಿನ ಟಾಯ್ಲೆಟ್ಗೆ ಹೋದ್ರೆ ಸಾಕು..ನಿಮ್ಮ ಆರೋಗ್ಯದ ಗುಟ್ಟು ಇದು…ಡಾ ಅಂಜನಪ್ಪನವರಿಂದ ವಿಶೇಷ ಸಲಹೆ..!

ಮೋಷನ್ ಬಗ್ಗೆ ನಿಮಗೆ ಏನಾದರೂ ಡೌಟ್ ಇದ್ದರೆ ಇಲ್ಲಿ ನೋಡಿ…ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ನಮ್ಮ ದೈನಂದಿನ ನಿತ್ಯ ಕರ್ಮಗಳನ್ನು ಮುಗಿಸಿದರೆ ಒಂದು ರೀತಿ ಮೈಂಡ್ ಫ್ರೆಶ್ ಆಗಿರುತ್ತದೆ. ಕೆಲವರಿಗೆ ದಿನಕ್ಕೆ ಎರಡು ಬಾರಿ ಶೌಚಕ್ಕೆ ಹೋಗುವ ಅಭ್ಯಾಸ ಇರುತ್ತದೆ. ಆದರೆ ಬಹಳ ಜನಕ್ಕೆ ಪ್ರತಿದಿನವೂ ಕೂಡ ಮೋಶನ್ ಮಾಡಲು ಆಗುವುದಿಲ್ಲ, ಆಗ ಅವರು ಮಲಬದ್ಧತೆ ಬಂದಿದೆ ಎಂದು ಹೆದರುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ ಇದನ್ನು ಮಲಬದ್ಧತೆ ಎಂದು ಪರಿಗಣಿಸುವುದಿಲ್ಲವಂತೆ. ಯಾಕೆಂದರೆ ಈಗಿನ ಜೀವನಶೈಲಿಯಲ್ಲಿ ನಾವು ತಿನ್ನುತ್ತಿರುವ ಆಹಾರ ಪದಾರ್ಥದಲ್ಲಿ ಹಲವು ಪೋಷಕಾಂಶಗಳು ಕೊರತೆ ಇರುವುದರಿಂದ ಅದು ದಿನವೂ ನಮಗೆ ಶೌಚಕ್ಕೆ ಹೋಗಲು ಅನುಕೂಲ ಮಾಡಿಕೊಡುವುದಿಲ್ಲ ಆದ್ದರಿಂದ ವಾರದಲ್ಲಿ ಮೂರು ಬಾರಿ ಮೋಶನ್ ಹೋದರೆ ಸಾಕು ಅದು ಕೂಡ ಆರೋಗ್ಯವಂತ ಲಕ್ಷಣವೇ ಎಂದು ಹೇಳುತ್ತಾರೆ ವೈದರು. ಇದಲ್ಲದೆ ಬೆಳಗ್ಗೆ ಹೊತ್ತು ನಾವು ಮೋಶನ್ ಹೋಗುವ ಮುಂಚೆ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

WhatsApp Group Join Now
Telegram Group Join Now

ಯಾಕೆಂದರೆ ನಮ್ಮ ದೇಹದ ವ್ಯವಸ್ಥೆಗೆ ಆ ರೀತಿ ಸೃಷ್ಟಿಯಾಗಿದೆ ನಾವು ಬೆಳಗ್ಗೆ ಎದ್ದರೆ ತಕ್ಷಣ ಜಠರಕ್ಕೆ ಏನಾದರೂ ಕಳಿಸಿದ ತಕ್ಷಣ ಅಲ್ಲಿಂದ ಮೆಸೇಜ್ ಪಾಸಾಗುತ್ತದೆ ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಅಥವಾ ಕಾಫಿ ಏನನ್ನಾದರೂ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಮೋಷನ್ ಹೋಗಲು ಅನುಕೂಲವಾಗುತ್ತದೆ. ಗಂಡಸರು ಹೆಚ್ಚಾಗಿ ಬೆಳಗ್ಗೆ ಹೊತ್ತು ಧೂಮಪಾನ ಮಾಡುವುದು ಇದೇ ಕಾರಣ ಇರಬಹುದು ಬೆಳಗ್ಗೆ ಧೂಮಪಾನ ಮಾಡದೆ ಹೋದರೆ ಎಷ್ಟು ಗಂಡಸರಿಗೆ ಮೋಶನ್ ಮಾಡಲು ಆಗುವುದಿಲ್ಲ. ಹೆಚ್ಚಿನ ಜನರು ಮೋಶನ್ ಬಂದ ತಕ್ಷಣ ಹೋಗಲು ಸಾಧ್ಯವಾಗುವುದಿಲ್ಲ, ಇದರಿಂದ ಅವರು ಅದನ್ನು ತಡೆಯುತ್ತಾರೆ ಅದು ತುಂಬಾ ತಪ್ಪು ಸಾಧ್ಯವಾದಷ್ಟು ಮೋಶನ್ ಬಂದಾಗಲೇ ಹೋಗುವುದು ಬಹಳ ಒಳ್ಳೆಯ ಅಭ್ಯಾಸ ಇಲ್ಲವಾದಲ್ಲಿ ನಾವು ಬೇಕೆಂದಾಗ ಅದು ಬರುವುದಿಲ್ಲ.

ಅಲ್ಲದೆ ಕೆಲವರು ಪ್ರತಿದಿನ ನಾವು ಮೋಷನ್ ಹೋಗದೆ ಹೋದರೆ ನಮ್ಮ ದೇಹದ ತೂಕ ಹೆಚ್ಚಾಗುತ್ತದೆಯೇ? ಪ್ರತಿದಿನವೂ ದೇಹದಲ್ಲಿ ಮೋಶನ್ ಹೊರಗೆ ಹೋಗದೆ ಹಾಗೆ ಉಳಿದುಕೊಳ್ಳುವುದರಿಂದ ಅದರಿಂದ ಖಾಯಿಲೆಗಳು ಬರುತ್ತವೆಯೇ, ಅದು ದೇಹಕ್ಕೆ ವಿಷ ಅಥವಾ ಟಾಕ್ಸಿನ್ ಆಗುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಇಂತಹ ಗೊಂದಲ ಹಲವರಿಗೆ ಇದೆ ಆದರೆ ಪ್ರತಿದಿನ ಮೋಶನ್ ಹೋಗದೆ ಇರುವುದರಿಂದ ಇಂತಹ ಯಾವುದೇ ರೀತಿಯ ಅಪಾಯಕಾರಿ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ವೈದ್ಯರು. ಈ ವಿಷಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.



crossorigin="anonymous">