ಈ ಐದು ರೀತಿಯ ವ್ಯಕ್ತಿಗಳನ್ನು ದೂರವಿಡಿ ಇಲ್ಲಾಂದ್ರೆ ನಿಮ್ಮ ಜೀವನ ನರಕ ಎಲ್ಲದರಲ್ಲೂ ನಷ್ಟ... ಮರೆಯಬೇಡಿ » Karnataka's Best News Portal

ಈ ಐದು ರೀತಿಯ ವ್ಯಕ್ತಿಗಳನ್ನು ದೂರವಿಡಿ ಇಲ್ಲಾಂದ್ರೆ ನಿಮ್ಮ ಜೀವನ ನರಕ ಎಲ್ಲದರಲ್ಲೂ ನಷ್ಟ… ಮರೆಯಬೇಡಿ

ಈ ಐದು ತರಹದ ಜನರಿಂದ ದೂರವಿರಿ.
ಎಷ್ಟೋ ಜನ ನಮ್ಮ ಜೊತೆಯಲ್ಲಿ ಇರುತ್ತಾರೆ. ನಾವು ಎಂಥವರ ಜೊತೆಯಲ್ಲಿ ಇರುತ್ತೇವೆ ಎಂದು ನಮಗೆ ಪರಿಜ್ಞಾನವೇ ಇರುವುದಿಲ್ಲ. ನಾವು ಬೇಜಾರಿನಲ್ಲಿ ಇರುತ್ತೇವೆ, ನೋವಿನಲ್ಲಿ ಇರುತ್ತೇವೆ, ನಮಗೆ ಏಕೆ ಈ ತರಹ ಆಗುತ್ತಿದೆ ಎಂದು ನಮಗೆ ತಿಳಿಯುವುದಿಲ್ಲ. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಗಳು ನಿಮ್ಮ ಜೊತೆಯಲ್ಲಿದ್ದರೆ ಕಷ್ಟ, ಸೋಲು ತಪ್ಪಿದ್ದಲ್ಲ. ಹಾಗಾಗಿ ಇಂತಹ ಐದು ತರಹದ ವ್ಯಕ್ತಿಗಳಿಂದ ದೂರವಿರಿ. ಯಾವ ವ್ಯಕ್ತಿಗಳು ಎಂದರೆ ಸುಳ್ಳು ಹೇಳುವವರಿಂದ ದೂರವಿರಿ ಪದೇ ಪದೇ ಸಣ್ಣ ಸಣ್ಣ ವಿಷಯಕ್ಕೂ, ಯಾವಾಗಲೂ ಸುಳ್ಳು ಹೇಳುವವರಿಂದ ದೂರವಿರಿ. ಇಂಥವರನ್ನು ನಂಬಬಾರದು ಜೊತೆಗೆ ಇರಬಾರದು. ಇಂಥವರು ಜೊತೆಯಲ್ಲಿ ಇದ್ದಾಗ ನಮ್ಮ ಮನಸ್ಸು ಕೆಟ್ಟು ಹೋಗುತ್ತದೆ ಹಾಗೂ ಅಸಹನೆ ಬೆಳೆಯುತ್ತದೆ. ಇದೆಲ್ಲದಲ್ಲದೆ ಸುಳ್ಳು ಹೇಳುವ ಅಭ್ಯಾಸವು ನಮಗೂ ಕೂಡ ಆಗಬಹುದು ಎಂಬ ಕಾರಣಕ್ಕೆ ನಾವು ಅಂತವರಿಂದ ದೂರವಿರಬೇಕು.

ಇಂತಹವರಿಂದ ನಮಗೆ ನಷ್ಟವೇ ಜಾಸ್ತಿ. ಇನ್ನೂ ಎರಡನೆಯದಾಗಿ ಅಗೌರವದಿಂದ ವರ್ತಿಸುವವರಿಂದ ದೂರವಿರಬೇಕು. ಯಾವುದೇ ಒಳ್ಳೆ ಕೆಲಸ ಮಾಡಿದರು ಅದಕ್ಕೆ ಗೌರವ ತೋರಿಸದೆ ಅಗೌರವ ತೋರಿಸುವವರಿಂದ ದೂರವಿರಬೇಕು. ನಮ್ಮ ಬೆಳವಣಿಗೆಯನ್ನು ಸಹಿಸದೆ ಇರುವವರು, ಅವರ ದೃಷ್ಟಿಯಲ್ಲಿ ನಾವು ತುಂಬಾ ಕೀಳಾಗಿ ಕಾಣುವವರು ಅಂದು ನಮಗೆ ಅನಿಸಿದ್ದಲ್ಲಿ ನಾವು ಅವರಿಂದ ದೂರವಿರಬೇಕು. ಇನ್ನು ಕೀಳಾಗಿ ಕಾಣುವವರು ನಮ್ಮನ್ನು ಪ್ರತಿ ಬಾರಿಯೂ ಅವರಿಗಿಂತ ಕೀಳರಮಿಯ ದೃಷ್ಟಿಯಲ್ಲಿ ನೋಡುತ್ತಾ ಇರುತ್ತಾರೆ. ನಮ್ಮನ್ನು ಮುಂದಕ್ಕೂ ಬಿಡದೆ, ನಮ್ಮ ಅಭಿವೃದ್ಧಿಯನ್ನು ಸಹಿಸದೆ ಇರುವವರು, ನಮ್ಮ ಬೀಳನ್ನು ಕಾಯುತ್ತಾ ಇರುವವರು ಇಂಥವರಿಂದ ದೂರವಿರಬೇಕು.

WhatsApp Group Join Now
Telegram Group Join Now

ಇನ್ನು ನಮ್ಮನ್ನು ವಿಪರೀತವಾಗಿ ಬಳಸಿಕೊಳ್ಳುವರಿಂದ ದೂರವಿರಬೇಕು, ಅಂದರೆ ಯಾವುದಾದರೂ ಒಂದು ಕೆಲಸ ಆಗಬೇಕಿದ್ದಲ್ಲಿ ಮಾತ್ರ ನಮ್ಮನ್ನು ಉಪಯೋಗಿಸಿಕೊಂಡು ನಂತರ ನಮ್ಮಿಂದ ದೂರ ಉಳಿಯುತ್ತಾರೋ ಅಂತವರಿಂದ ನಾವು ದೂರವಿರಬೇಕು. ಇವರು ನಮ್ಮ ಸಹಾಯ, ಸಮಯ, ಸ್ನೇಹ, ಸಹನೆಯನ್ನು ದುರ್ಪಯೋಗ ಮಾಡಿಕೊಡುತ್ತಾರೆ. ಇಂಥವರು ಸಮಯ ಸಾಧಕರಾಗಿ ನಮ್ಮನ ಜೀವನದ ಅತ್ಯಮೂಲ ವಸ್ತುಗಳನ್ನು ದುರ್ಬಳಕೆಯನ್ನಾಗಿಸಿ ಕೊಳ್ಳುತ್ತಾರೆ. ಇನ್ನು ಕೊನೆಯದಾಗಿ ಪದೇ ಪದೇ ಹೀಯಾಳಿಸುವುದರಿಂದ ದೂರವಿರಬೇಕು. ಅವರು ಏನೇ ಮಾಡಿದರೂ ಸಹಿಸುವುದಿಲ್ಲ, ಆದ್ದರಿಂದ ನಗುತ್ತಾ ಇದ್ದರೂ, ಅಲಂಕಾರ ಮಾಡಿದರು, ನಮ್ಮ ಅಭಿವೃದ್ಧಿಯನ್ನು ಕೂಡ ಅವರು ಸಹಿಸುವುದಿಲ್ಲ. ಎಲ್ಲಾದರಲ್ಲೂ ಒಂದು ವ್ಯಂಗ್ಯವನ್ನು ಮಾಡಿ ನಮಗೆ ನೋವನ್ನು ಕೊಡುತ್ತಾರೆ. ಇಂತಹ ನಕಾರಾತ್ಮಕ ವ್ಯಕ್ತಿಗಳಿಂದ ನಾವು ದೂರವಿರಬೇಕು ಆಗ ಮಾತ್ರ ಜೀವನದಲ್ಲಿ ಸಕಾರಾತ್ಮಕವಾಗಿ ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯ.



crossorigin="anonymous">