ಜಗತ್ತಿನ ಅತೀ ಶಕ್ತಿಶಾಲಿ ದೃಷ್ಟಿ ಗೊಂಬೆ,ಶರೀರಕ್ಕೆ ದಿವ್ಯಶಕ್ತಿ ಇವತ್ತೇ ಈ ವಿಧಾನದಲ್ಲಿ ಬಳಸಿರಿ ಏನಾಗುತ್ತೆ ನೀವೆ ನೋಡಿ

ಜಗತ್ತಿನ ಅತಿ ಶಕ್ತಿಶಾಲಿ ದೃಷ್ಟಿ ಗೊಂಬೆ!ತೂಕವನ್ನು ಹೆಚ್ಚು ಮಾಡುವಂತಹ ಅದ್ಭುತವಾದ ತರಕಾರಿ ಎಂದರೆ ಅದು ಬೂದು ಕುಂಬಳಕಾಯಿ. ಜಗತ್ತಿನ ಅತ್ಯಂತ ಸಾತ್ವಿಕಬಲವರ್ತಕವಾಗಿರುವ ಕಾಯಿ ಬೂದು ಕುಂಬಳಕಾಯಿ. ದುರಾದೃಷ್ಟ ನಮ್ಮ ದೇಶದಲ್ಲಿ ಬೀದಿ ಬೀದಿಯಲ್ಲಿ ಒಡೆದು ಹೋಗುತ್ತವೆ. ಜೊತೆಗೆ ದೃಷ್ಟಿ ಗೊಂಬೆಯಾಗಿ ಪ್ರಸಿದ್ಧಿ ಹೊಂದಿದೆ. ಅದು ದೃಷ್ಟಿ ಗೊಂಬೆಯಲ್ಲ ಸೃಷ್ಟಿಗೊಂಬೆ ಎಂದು ಹೇಳಬಹುದು. ಸೃಷ್ಟಿ ಮಾಡುವಂತಹ ಅದ್ಭುತವಾದ ಅತ್ಯಂತ ದಿವ್ಯ ಶಕ್ತಿ ಈ ಬೂದ ಕುಂಬಳಕಾಯಿಗೆ ಇದೆ. ಏಕೆಂದರೆ ನಮ್ಮ ಶರೀರದ ವಿಕಾರವನ್ನು ದೂರ ಮಾಡುವ ಶಕ್ತಿ ಇದಕ್ಕೆ ಇದೆ. ನಮ್ಮ ದೇಹದಲ್ಲೂ ನಕಾರಾತ್ಮಕ ಶಕ್ತಿ ಇದೆ, ಮನಸ್ಸಿನಲ್ಲೂ ಕೂಡ ನಕಾರ ಶಕ್ತಿಯು ಇದೆ. ನಕಾರಾತ್ಮಕ ಶಕ್ತಿಯನ್ನು ತೆಗೆದು ನಮ್ಮನ್ನು ಶುದ್ಧವನ್ನಾಗಿ ಮಾಡಲು ಬೂದು ಕುಂಬಳಕಾಯಿ ಬಹಳ ಉಪಯುಕ್ತವಾಗಿದೆ.


ನಾವು ದೇವರನ್ನು ಸೇರಲು ಶುದ್ಧವಾಗಿರಬೇಕು. ಆ ಶುದ್ಧತೆಯನ್ನು ಕಾಪಾಡಿಕೊಳ್ಳಲು ಈ ಬೂದು ಕುಂಬಳಕಾಯಿ ಸಹಾಯ ಮಾಡುತ್ತದೆ. ನಿಮ್ಮ ತೂಕವನ್ನು ಹೆಚ್ಚಿಸಲು ಬೂದು ಕುಂಬಳಕಾಯಿ ಬಹಳ ಒಳ್ಳೆಯದು.ಅದು ದೇಹದ ಕಲ್ಮಶವನ್ನು ತಾಗೆಯಲು ಬಹಳ ಪ್ರಯೋಜನಕಾರಿಯಾಗಿದೆ. ಈ ರಾಸಾಯನ ಅಥವಾ ಪಾಯಸವನ್ನು ಹೇಗೆ ಮಾಡಬೇಕು ಎಂದರೆ ಒಂದು ಕುಂಬಳಕಾಯಿಯನ್ನು ತೆಗೆದುಕೊಂಡು ತುರಿಯ ಬೇಕು, ಅದಕ್ಕೆ ಬೆಲ್ಲ ಸೇರಿಸಬೇಕು. ಎಷ್ಟು ಎಂದರೆ 200 ಗ್ರಾಂ ನಷ್ಟು ಬೂದುಕುಂಬಳಕಾಯಿಯನ್ನು ತೆಗೆದುಕೊಂಡರೆ 100 ಗ್ರಾಂನಷ್ಟು ಬೆಲ್ಲ ಹಾಕಬೇಕು. ಇನ್ನೂ ಎಲ್ಲಾ ತರಹದ ಡ್ರೈ ಫ್ರೂಟ್ಸ್ ಅನ್ನು 10 ಗ್ರಾಂ ನಂತೆ ಎಲ್ಲವನ್ನು ಹಾಕಬೇಕು.

WhatsApp Group Join Now
Telegram Group Join Now

ಅದಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಹಾಗೂ ಲವಂಗ ಪುಡಿಯನ್ನು ಹಾಕಬೇಕು, ಜೊತೆಗೆ ಗಸಗಸೆಯನ್ನು ಹಾಕಿದರೆ ಒಳ್ಳೆಯದು. ಇವೆಲ್ಲವನ್ನು ಹಾಕಿ ಪಾಯಸ ಮಾಡಿಕೊಳ್ಳಬೇಕು. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬಾ ಒಳ್ಳೆಯದು. ರಾತ್ರಿಯಲ್ಲಿ ಬೇಕಾದರೂ ಸೇವಿಸಬಹುದು ಆದರೆ ಹೆಚ್ಚಾಗಿ ಊಟ ಮಾಡುವುದರಿಂದ ಜೀರ್ಣಕ್ರಿಯೆಗೆ ತಡೆಯಾಗಬಹುದು. ಆದ್ದರಿಂದ ಬೆಳಗೆ ಸೇವನೆಯೂ ಒಳ್ಳೆಯದು. ಈ ಒಳ್ಳೆಯ ಆರೋಗ್ಯಕರವಾದ ಸುವಾಸನೆ ಬರಿತ ಪಾಯಸ ದೇಹಕ್ಕೂ ಒಳ್ಳೆಯದು ಮನಸ್ಸಿಗೂ ಒಳ್ಳೆಯದು. ಇದು ನಾಲಿಗೆ ರುಚಿ ದೇಹಕ್ಕೆ ತಂಪನ್ನು ನೀಡುತ್ತದೆ. ಜೊತೆಯಲ್ಲಿ ಮೆದುಳಿನ ಬೆಳವಣಿಗೆಗೆ ಇದು ಬಹಳ ಉಪಯುಕ್ತವಾದ ರಸಾಯನವಾಗಿದೆ. ಇದು ದೇಹ ಮತ್ತು ಮೆದುಳನ್ನು ಸಮೃದ್ಧಿಯನ್ನಾಗಿ ಮಾಡುತ್ತದೆ. ತೂಕ ಹೆಚ್ಚಾಗಿಸಲು ಇದು ಒಳ್ಳೆಯ ಸೃಷ್ಠಿಗೊಂಬೆ ಎಂದು ಹೇಳಬಹುದು.



crossorigin="anonymous">