ಸಾವಿರ ರೂಪಾಯಿ ಬಾಡಿಗೆ ಕಟ್ಟೊಕೆ ದುಡ್ಡಿರಲಿಲ್ಲ ಮನೆ ಓನರ್ ಗೆ ಹೆದರಿ ಅಪ್ಪ ನಮ್ಮನ್ನ ಕೂಡಿ ಹಾಕಿ ಹೋಗ್ತಿದ್ರು..! ರಿವ್ಯೂ ನವಾಜ್ ಲೈಫ್ ಸ್ಟೋರಿ - Karnataka's Best News Portal

ಈಗಲೂ 8 ಲಕ್ಷ ಸಾಲ ಇದೆ ಅಷ್ಟು ಕಷ್ಟ ನನ್ನ ಜೀವನ!!
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಸರನ್ನುಪಡೆದಿರುವಂತಹ ನವಾಜ್ ಅವರು ಹಾಗೂ ಅವರ ಜೀವನ ಶೈಲಿಯ ಬಗ್ಗೆ ಈ ದಿನ ನಾವು ತಿಳಿದು ಕೊಳ್ಳೋಣ ಇವರನ್ನು ಒಂದು ಇಂಟರ್ ವ್ಯೂ ಮಾಡುವಂತಹ ಸಂದರ್ಭದಲ್ಲಿ ಇವರು ತಮ್ಮ ಜೀವನದಲ್ಲಿ ಎದುರಾದಂತಹ ಕಷ್ಟಗಳು ಮತ್ತು ಒಳ್ಳೆಯ ಕ್ಷಣಗಳು ಹಾಗೂ ಇವರ ಮನೆಯ ಪರಿಸ್ಥಿತಿ ಎಲ್ಲದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿ ಕೊಂಡಿದ್ದು ಇವರನ್ನು ನೋಡಿ ಪ್ರತಿಯೊಬ್ಬರೂ ಕಲಿತುಕೊಳ್ಳಬೇಕಾದಂತ ವಿಷಯಗಳು ಎಷ್ಟೋ ಇದೆ ಎಂಬ ರೀತಿ ಇವರು ತಮ್ಮ ಜೀವನವನ್ನು ನಡೆಸುತ್ತಿ ದ್ದಾರೆ ಹಾಗಾದರೆ ನವಾಜ್ ಅವರ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಇವರ ತಂದೆ ಮೆಕ್ಯಾನಿಕ್ ಶಾಪ್ ನಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು ಅಷ್ಟೇನೂ ಶ್ರೀಮಂತ ಅಲ್ಲದೆ ಹೋದರು ಒಂದು ಮಧ್ಯಮ ಕುಟುಂಬದಲ್ಲಿ ಒಬ್ಬ ವ್ಯಕ್ತಿ ಹೇಗೆ ಜೀವನ ಸಾಗಿಸಬಹುದು ಹಾಗೆ ನವಾಜ್ ಅವರು ತಮ್ಮ ಜೀವನವನ್ನು ಸಾಗಿಸಿಕೊಂಡು ಬಂದಿರುವಂತಹ ವ್ಯಕ್ತಿ ಚಿಕ್ಕ ವಯಸ್ಸಿನಿಂದಲೂ ತಂದೆಯ ಕಷ್ಟವನ್ನು ಕಣ್ಣೆದುರು ನೋಡುತ್ತಾ ಜೀವನದ ಪಾಠಗಳನ್ನು ಕಲಿತುಕೊಳ್ಳುತ್ತಾ ಬಂದವರು ಒಂದು ಹೊತ್ತಿನ ಊಟಕ್ಕೂ ಕೂಡ ಎಷ್ಟು ಬೆಲೆ ಇದೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಅವರ ತಂದೆ ತಾಯಿಗಳು ಇವರಿಗೆ ಹೇಳಿ ಕೊಟ್ಟಿದ್ದಾರೆ ಹಾಗೂ ಇವರು ಒಬ್ಬ ಮುಸ್ಲಿಂ ಧರ್ಮದಲ್ಲಿ ಜನಿಸಿದರು ಕೂಡ ಹಿಂದೂ ಧರ್ಮವನ್ನು ಕೂಡ ಅಷ್ಟೇ ಗೌರವದಿಂದ ಕಾಣುತ್ತಿದ್ದಾರೆ.ಎಷ್ಟೋ ಜನ ಇವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ಇವನು ಮುಸ್ಲಿಂ ಧರ್ಮಕ್ಕೆ ಸೇರಿದವನು ನಮ್ಮ ಹಿಂದೂ ದೇವಾಲಯಗಳಿಗೆ ಬರುವಂತಹ ಅಧಿಕಾರ ಇವನಿಗೆ ಇಲ್ಲ ಎಂದು ಎಷ್ಟೋ ಜನ ಆರೋಪಗಳನ್ನು ಮಾಡಿದ್ದರು

ಕೂಡ ಇವರು ಅಂತಹ ಮಾತುಗಳಿಗೆ ಕಿವಿಗೊಡದೆ ತಮ್ಮ ಇಷ್ಟದಂತೆ ಪ್ರತಿಯೊಂದು ದೇವಾಲಯಗಳಿಗೂ ಅಂದರೆ ಚರ್ಚ್ ಗಳಿಗೂ ಹಿಂದೂ ಧರ್ಮದ ದೇವಾಲಯಗಳು ರಾಘವೇಂದ್ರ ಮಠ ಹಾಗೂ ಸಾಯಿ ಬಾಬಾ ದೇವಸ್ಥಾನಗಳಿಗೂ ಹೋಗುತ್ತಿದ್ದರು ಎಂದು ಸ್ವತಃ ಇವರೇ ಮೀಡಿಯಾದ ಮುಂದೆ ಸ್ಪಷ್ಟನೆ ಕೊಟ್ಟಿದ್ದಾರೆ ಆದರೆ ಹೀಗೆ ಹೋಗಬಾರದು ಅವನು ಮುಸ್ಲಿಂ ಧರ್ಮಕ್ಕೆ ಸೇರಿದವನು ಹಿಂದೂ ದೇವಾಲಯಗಳಿಗೆ ಹೋಗುವುದು ತಪ್ಪು ಅದು ಅಪರಾಧ ಎಂದು ಎಷ್ಟೋ ಜನ ಇವರನ್ನು ಪ್ರಶ್ನೆ ಮಾಡಿದ್ದುಂಟು ಆದರೆ ಇವರು ಅಂತಹ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಇರಲಿಲ್ಲವಂತೆ ಹಾಗೂ ಎಷ್ಟೋ ದಿನ ಊಟ ಇಲ್ಲದೆಯೂ ಕೂಡ ಮಲಗಿದ್ದಾರಂತೆ ಇವರ ತಾಯಿ ರಾತ್ರಿಯ ಸಮಯ ಮಕ್ಕಳು ಹೆಚ್ಚಾಗಿ ಊಟ ಮಾಡಬಾರದು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದಂತಹ ಮಾತುಗಳು ಅವರಿಗೆ ಈಗಲೂ ನೆನಪಿನಲ್ಲಿ ಇದೆ ನಮ್ಮ ತಂದೆಗೆ ಏಳರಿಂದ ಎಂಟು ಲಕ್ಷ ಸಾಲ ಇದೆ ಅದನ್ನು ತೀರಿಸಿದರೆ ನಮಗೆ ಇನ್ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *