ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿಯನ್ನು ನೋಡಿ ಪೋಲಿಸರೆ ಬೆಚ್ಚಿಬಿದ್ದರು ಈ ಭಿಕ್ಷುಕಿ ಯಾರು ಗೊತ್ತಾ » Karnataka's Best News Portal

ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿಯನ್ನು ನೋಡಿ ಪೋಲಿಸರೆ ಬೆಚ್ಚಿಬಿದ್ದರು ಈ ಭಿಕ್ಷುಕಿ ಯಾರು ಗೊತ್ತಾ

ರಸ್ತೆ ಬದಿಯಲ್ಲಿ ಭಿಕ್ಷಕಿ ಒಬ್ಬಳು ಭಿಕ್ಷೆ ಬೇಡುವುದನ್ನು ನೋಡಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ!!ಜೀವನ ನಮಗೆ ಹೇಳಿಕೊಡುವ ಪಾಠದ ಮುಂದೆ ಇನ್ಯಾವುದೇ ಪಾಠವು ಸರಿಸಾಟಿ ಇಲ್ಲ. ಸ್ನೇಹಿತರೆ ನಾವು ಜೀವನದಲ್ಲಿ ಅಂದುಕೊಳ್ಳುವುದೇ ಒಂದು ಆಗೋದೇ ಇನ್ನೊಂದು. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಘಟನೆ ನಡೆದೇ ಇರುತ್ತೆ ಹಾಗೆ ಇಲ್ಲೊಬ್ಬರ ಜೀವನದ ಬಗ್ಗೆ ಕಥೆಯನ್ನು ಓದೋಣ. ಇದನ್ನು ಒಮ್ಮೆ ಕೇಳಿದರೆ ಮೈಜುಮ್ಮೇನುತ್ತದೆ. ಪ್ರತಿಯೊಬ್ಬ ವಿದ್ಯಾ ವಂತರು ಹಾಗೂ ಯುವಕರು ತಿಳಿಯಬೇಕಾದ ಸತ್ಯವಾದ ಘಟನೆಯನ್ನು ನಿಮಗೆ ತಿಳಿಸುತ್ತೇನೆ. ರಸ್ತೆ ಬದಿಯಲ್ಲಿ ಪ್ರತಿದಿನ ಮಹಿಳೆ ಒಬ್ಬಳು ಭಿಕ್ಷೆ ಬಿಡುತ್ತಿರುತ್ತಾಳೆ. ಪ್ರತಿದಿನ ಇವಳನ್ನು ಗಮನಿಸುತ್ತಿದ್ದ ಪೊಲೀಸರು ಇವಳ ಹಾವ ಭಾವದಲ್ಲಿ ಏನು ವ್ಯತ್ಯಾಸವಿದೆ ಎಂದು ಅನುಮಾನ ಪಡುತ್ತಾರೆ. ಅನುಮಾನ ಪಟ್ಟು ಅವಳನ್ನು ವಿಚಾರಿಸಿದಾಗ ಭಿಕ್ಷುಕಿಯು ತನ್ನನ್ನು ತಾನು ಇಂಗ್ಲಿಷ್ ನಲ್ಲಿ ಪರಿಚಯ ಮಾಡಿಕೊಂಡು ಮಾತನಾಡುತ್ತಾಳೆ.

ಇದನ್ನು ಕಂಡ ಪೊಲೀಸರು ಬೆಚ್ಚಿಬೀಳುತ್ತಾರೆ. ಹಾಗಾದರೆ ಇವಳು ಸಾಮಾನ್ಯವಾದ ಬಿಕ್ಷುಕಿ ಅಲ್ಲ. ಇವಳ ಚರಿತ್ರೆ ಏನು? ಇವಳು ಏಕೆ ಭಿಕ್ಷೆ ಬೇಡ್ತಿದ್ದಾಳೆ? ಅಂತ ಕೌನ್ಸಿಲಿಂಗ್ ಅನ್ನು ಅರೆಂಜ್ ಮಾಡುತ್ತಾರೆ. ಅಲ್ಲಿ ಮಾನಸಿಕ ವೈದ್ಯರು ಪರೀಕ್ಷೆ ಮಾಡಿದಾಗ ಇವಳು ಭಿಕ್ಷುಕಿ ಅಲ್ಲ ಮಾನಸಿಕ ಖಿನ್ನತೆ ಉಂಟಾಗಿ ಹೀಗೆ ಆಗಿದ್ದಾಳೆ ದಯವಿಟ್ಟು ಇವಳನ್ನು ವಿಳಾಸ ಪತ್ತೆ ಹಚ್ಚಿ ಅಲ್ಲಿಗೆ ತಲುಪಿಸಿ ಎಂದು ಹೇಳಿ ಹೋಗುತ್ತಾರೆ. ವಿಚಾರ ನಡೆಸುತ್ತಿದ್ದ ಪೊಲೀಸರು ಇವಳನ್ನು ಒಂದು ಚಾರ್ಟಬಲ್ ಟ್ರಸ್ಟ್ನಲ್ಲಿ ಇಟ್ಟು ಆರೈಕೆ ಮಾಡುತ್ತಾರೆ. ಇವರನ್ನು ಒಬ್ಬ ನರ್ಸ್ ಸಹಾಯದಿಂದ ಸ್ವಚ್ಛ ಮಾಡಿ ವಿಚಾರಿಸಿದಾಗ ಇವಳಿಂದ ಯಾವುದೂ ಉತ್ತರ ಬರುವುದಿಲ್ಲ. ಹೀಗೆ ವಿಚಾರ ಒಂದನ್ನು ಯೋಚನೆ ಮಾಡಿ ಪೊಲೀಸರು ಇವರ ಬೆರಳಚ್ಚನ್ನು ಸ್ಕ್ಯಾನ್ ಮಾಡಿ ಆಧಾರ್ ಕಾರ್ಡ್ ನಿಂದ ವಿಳಾಸವನ್ನು ಪತ್ತೆ ಹಚ್ಚುತ್ತಾರೆ. ಆ ವಿಳಾಸಕ್ಕೆ ಹೋಗಿ ವಿಚಾರಿಸಿದಾಗ ಹೌದು ಇವಳು ನನ್ನ ಮಗಳು ಎಂದು ಅವರ ತಂದೆಯವರು ತಿಳಿಸುತ್ತಾರೆ. ಇವಳು ಭಿಕ್ಷುಕಿ ಅಲ್ಲ ಎಂದು ಕೂಡ ಸ್ಪಷ್ಟನೆ ನೀಡುತ್ತಾರೆ.

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

ಜೊತೆಗೆ ಇವಳು ಫಸ್ಟ್ ರಾಂಕ್ ವಿದ್ಯಾರ್ಥಿನಿಂದು ಹೇಳುತ್ತಾರೆ. ಇದನ್ನು ಕೇಳಿದ ಪೊಲೀಸರಿಗೆ ಅಚ್ಚರಿ ಉಂಟುಮಾಡುತ್ತದೆ. ಇವರ ಹೆಸರು ರಜನಿ ಶರ್ಮ ಹಾಗೂ ಇವರು ಮೂಲತಃ ತೆಲಾಂಗಣದವರು. ಇವರು ಕೆಳಮಾಧ್ಯಮ ವರ್ಗದವರಾಗಿದ್ದು, ಚಿಕ್ಕ ವಯಸ್ಸಿಂದ ಬಡತನವನ್ನು ಕಂಡಿದ್ದ ಇವರು ಚಿಕ್ಕ ವಯಸ್ಸಿನಲ್ಲೆ ಐಎಎಸ್ ಆಗುವ ಗುರಿಯನ್ನು ಹೊಂದಿರುತ್ತಾರೆ. ಎಸೆಸೆಲ್ಸಿ, ಪಿಯುಸಿ ಹಾಗೂ ಡಿಗ್ರಿಯಲ್ಲಿ ಮೊದಲನೇ ರಾಂಕ್ ಅನ್ನು ಪಡೆದ ಇವರು, ಹಲವು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ಹಾಗಾಗಿ ಮಾನ್ಯತೆ ಪಡೆದ ಎಂಎನ್ಸಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಆದರೂ ಕೂಡ ಗುರಿ ತಲುಪದ ಕಾರಣದಿಂದ ಇವರಿಗೆ ಮಾನಸಿಕ ಖಿನ್ನತೆ ಉಂಟಾಗಿ ಅದರಿಂದ ಕೆಲಸವನ್ನು ಕಳೆದುಕೊಂಡು ಬೀದಿಯಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಾ ಭಿಕ್ಷಕಿಯಾಗುತ್ತಾಳೆ.

[irp]


crossorigin="anonymous">