ಈ ಬಾರಿಯ ದೀಪಾವಳಿ ಗ್ರಹಣದ ಆಚರಣೆ ಮಾಡಬೇಕಾ ? ಯಾವ ಸಮಯದಲ್ಲಿ ಪೂಜೆ ಮಾಡಿದರೆ ಅದೃಷ್ಟ... ಗೊತ್ತಾ - Karnataka's Best News Portal

2022 ಗ್ರಹಣ ದೀಪಾವಳಿ ಲಕ್ಷ್ಮಿ ಪೂಜೆ ಮಾಡಬೇಕಾ? ಮಾಡಬಾರದ? ಹಾಗೂ ಯಾವ ಸಮಯದಲ್ಲಿ ಮಾಡಬೇಕು||
ಕೆಲವೊಬ್ಬರ ಮನೆಯಲ್ಲಿ ದೀಪಾವಳಿಯ ಹಬ್ಬದ ದಿನದಂದು ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಹಾಗೂ ಕೆಲವೊಬ್ಬರು ವರಮಹಾಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಕೆಲವೊಬ್ಬರು ದೀಪಾವಳಿಯ ಹಬ್ಬದ ದಿನದಂದು ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಇದರಿಂದ ತಾಯಿ ಲಕ್ಷ್ಮಿ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಮನೆಯಲ್ಲಿ ಶಾಂತಿ ನೆಮ್ಮದಿಯನ್ನು ಕೊಡಲಿ ಎಂಬ ಉದ್ದೇಶದಿಂದ ತಾಯಿ ಲಕ್ಷ್ಮಿ ದೇವಿಯನ್ನು ಪ್ರತಿಯೊಬ್ಬರೂ ಕೂಡ ಆರಾಧಿಸು ತ್ತೇವೆ.ಅದರಲ್ಲಿಯೂ ಕೆಲವೊಬ್ಬರ ಮನೆಗಳಲ್ಲಿ ಅವರ ಸಂಪ್ರದಾಯದಂತೆ ಕೆಲವೊಂದು ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಕೂರಿಸುತ್ತಾರೆ.ಅದರಲ್ಲಿಯೂ ದೀಪಾವ ಳಿಯ ಅಮಾವಾಸ್ಯೆಯ ದಿನದಂದು ತಾಯಿ ಲಕ್ಷ್ಮಿ ದೇವಿಯನ್ನು ಆರಾಧಿಸಿ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿನ ಕುಂಕುಮ ಬಾಗಿನವನ್ನು ಕೊಟ್ಟು ಅವರನ್ನು ಸಂತೋಷಪಡಿಸುತ್ತಾರೆ.

ಹೀಗೆ ಮಾಡುವುದರಿಂದ ಮುತ್ತೈದೆ ಭಾಗ್ಯ ಹೆಚ್ಚುತ್ತದೆ ಮತ್ತು ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ನಮ್ಮ ಮನೆಯ ಮೇಲೆ ಸದಾ ಇರುತ್ತದೆ ಎಂಬ ಉದ್ದೇಶ ದಿಂದಲೂ ಈ ಪೂಜೆಯನ್ನು ಮಹಿಳೆಯರು ಮಾಡುತ್ತಿ ರುತ್ತಾರೆ ಆದರೆ ಈ ವರ್ಷದ ದೀಪಾವಳಿಯ ಅಮಾವಾಸ್ಯೆಯ ದಿನದಂದು ಸೂರ್ಯಗ್ರಹಣ ಸಂಭವಿಸಲಿದ್ದು ಈ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಆರಾಧಿಸಬೇಕಾ ಹಾಗೂ ಆರಾಧಿಸಿದರೆ ಯಾವ ಒಂದು ಸಮಯದಲ್ಲಿ ಆರಾಧಿಸಬೇಕು ಅಥವಾ ಆರಾಧಿಸ ಬಾರದ ಹೀಗೆ ಹಲವಾರು ಗೊಂದಲಗಳು ಪ್ರತಿಯೊಬ್ಬ ರಲ್ಲಿಯೂ ಇದೆ ಹಾಗಾದರೆ ಈ ದಿನ ನಾವು ಆ ಪ್ರಶ್ನೆಗಳಿ ಗೆಲ್ಲ ಉತ್ತರವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಬಾರಿ ಸೂರ್ಯಗ್ರಹಣವು ಅಕ್ಟೋಬರ್ 25 ನೇ ತಾರೀಖಿನಂದು ಅದರಲ್ಲೂ ಮಧ್ಯಾಹ್ನ 4 ಗಂಟೆ 28 ನಿಮಿಷಕ್ಕೆ ಪ್ರಾರಂಭವಾಗಿ 6 ಗಂಟೆ 32 ನಿಮಿಷಕ್ಕೆ ಮುಕ್ತಾಯವಾಗುತ್ತದೆ.

ಹಾಗಾಗಿ ಈ ಸಮಯದಲ್ಲಿ ನೀವು ಪೂಜೆಯನ್ನು ಮಾಡದೆ ನಂತರದ ಸಮಯದಲ್ಲಿ ನೀವು ಪೂಜೆ ಯನ್ನು ಮಾಡಿದರೆ ಬಹಳ ಉತ್ತಮ ಹಾಗಾದರೆ ಈ ಸೂರ್ಯ ಗ್ರಹಣದಿಂದ ಯಾವುದೆಲ್ಲ ರೀತಿಯಾದಂತ ಹ ತೊಂದರೆಗಳು ಸಂಭವಿಸಬಹುದು ಎಂದು ನೋಡುವುದಾದರೆ ಸೂರ್ಯನು ಈ ಬಾರಿ ತುಲಾ ರಾಶಿಯಲ್ಲಿ ನೀಚನಾಗಿರುವುದರಿಂದ ಸ್ವಾತಿ ನಕ್ಷತ್ರ ಅಂದರೆ ರಾಹುವಿನ ನಕ್ಷತ್ರದಲ್ಲಿ ನೀಚನಾಗಿ ರಾಹುಗ್ರಸ್ತ ಗ್ರಸ್ತಾಸ್ತ್ರ ಸೂರ್ಯಗ್ರಹಣ ಸಂಭವಿಸುತ್ತಿರುವಂಥದ್ದು ಹಾಗಾಗಿ ಸೂರ್ಯ ನೀಚನಾಗಿ ಇರುವುದರಿಂದ ಘರ್ಷ ಣೆಯಾಗುವುದು ಗಲಾಟೆ ಗದ್ದಲಗಳು ಆಗುವಂತಹ ಸನ್ನಿವೇಶ ಎದುರಾಗುತ್ತದೆ ಅದರಲ್ಲಿಯೂ ಕೃಷಿಗೆ ಸಂಬಂಧಪಟ್ಟಂತೆ ಅದರಿಂದ ಸ್ವಲ್ಪ ಮಟ್ಟಿಗೆ ಅನಾನು ಕೂಲಗಳನ್ನು ಅಂದರೆ ಅದರಿಂದ ನಷ್ಟವನ್ನು ಸಂಭವಿಸುವಂತೆ ಆಗುತ್ತದೆ ಹಾಗೂ ಸೂರ್ಯ ಗ್ರಹಣ ದಿಂದ ಯಾವುದೇ ರಾಶಿಗೆ ತೊಂದರೆ ಉಂಟಾಗುವು ದಿಲ್ಲ ಬದಲಾಗಿ ಕೆಲವೊಂದಷ್ಟು ಸನ್ನಿವೇಶಗಳಲ್ಲಿ ಅಡೆ ತಡೆಗಳನ್ನು ಅನುಭವಿಸಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *