ತನ್ನ ಪ್ರಾಣವನ್ನು ಲೆಕ್ಕಿಸದೆ ಅತಿ ವೇಗವಾಗಿ ಕಣ್ಣೀರಿನಲ್ಲಿ ಆಂಬುಲೆನ್ಸ್ ಓಡಿಸಿದ ಚಾಲಕ ಕಾರಣ ತಿಳಿದರೆ ಶಾಕ್ ಆಗ್ತೀರಾ..! ಆಸ್ಪತ್ರೆ ತಲುಪಿದ ನಂತರ ಏನಾಯ್ತು ನೋಡಿ - Karnataka's Best News Portal

ತನ್ನ ಪ್ರಾಣವನ್ನು ಲೆಕ್ಕಿಸದೆ ಅತಿ ವೇಗವಾಗಿ ಆಂಬುಲೆನ್ಸ್ ಚಾಲನೆ ಮಾಡಿದ ಡ್ರೈವರ್, ಈಗ ಎಲ್ಲರೂ ಈತನಿಗೆ ಕೈಮುಗಿಯುತ್ತಿದ್ದಾರೆ ಯಾಕೆ ಗೊತ್ತಾ?ಅತಿಯಾದ ಅವಸರ ಪ್ರಾಣಕ್ಕೆ ಆಪತ್ತು ತರುತ್ತದೆ ಹಾಗಾಗಿ ರಸ್ತೆ ಮಾರ್ಗದಲ್ಲಿ ಚಲನೆ ಮಾಡುವಾಗ ನಿಗದಿಪಡಿಸಿದ ವೇಗಕ್ಕಿಂತ ಅತಿಯಾಗಿ ಹೋಗುವುದು ಪ್ರಮಾದ ಆಗುತ್ತದೆ ಹಾಗೂ ಇಂಥಹ ತಪ್ಪು ಮಾಡಿದವರಿಗೆ ದಂಡ ಕೂಡ ವಿಧಿಸಲಾಗುತ್ತದೆ. ಆದರೆ ಒಂದೊಂದು ಸಮಯದಲ್ಲಿ ವೇಗವು ಕೂಡ ಮನುಷ್ಯನ ಪ್ರಾಣವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಈ ರೀತಿ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಕೇರಳದ ಹಳ್ಳಿಯ ಡ್ರೈವರ್ ಅತಿ ವೇಗದಲ್ಲಿ ಚಾಲನೆ ಮಾಡಿದ್ದಕ್ಕಾಗಿ ಈಗ ದೇಶದಾದ್ಯಂತ ಈತನಿಗೆ ಎಲ್ಲರೂ ಸಲಾಂ ಹೊಡೆಯುತ್ತಿದ್ದಾರೆ ಕಾರಣ ಇಷ್ಟೇ ಕೇರಳದಲ್ಲಿ ಜನಿಸಿರುವ 45 ದಿನದ ಪುಟ್ಟ ಮಗು ಸೈಫಲ್ ಅಜಾಮ್. ಆ ಮಗುವಿಗೆ ಜನಿಸಿದ ಕ್ಷಣದಿಂದಲೇ ಹೃದಯ ಸಂಬಂಧಿತ ಸಮಸ್ಯೆ ಕಾಡುತ್ತಿದೆ. ಮಂಗಳೂರಿನ ಒಂದು ಆಸ್ಪತ್ರೆಯಲ್ಲಿ ಅನಾಮಸ್, ಪಲ್ಮನರಿ ಹಾಗೂ ವೀನಸ್ ಗೆ ಸಂಬಂಧಿಸಿದಂತೆ ನರಳುತ್ತಿರುವ ಈ ಮಗುವಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ಸಮಯಕ್ಕೆ ಬೆಂಗಳೂರಿನ ಆಸ್ಪತ್ರೆ ಒಂದರಲ್ಲಿ ಒಬ್ಬ ಮಹಿಳೆಯ ಸಂಬಂಧಿಕರು ಆಕೆಯ ಹೃದಯವನ್ನು ದಾನ ಮಾಡಲು ನಿರ್ಧಾರ ಮಾಡಿರುತ್ತಾರೆ. ಆ ಹೃದಯವು ಈ ಮಗುವಿನ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವ ಉಪಾಯ ಆಗಿರುತ್ತದೆ ಆ ಕಾರಣದಿಂದಾಗಿ ಮಗುವನ್ನು ಮಂಗಳೂರಿಂದ ಬೆಂಗಳೂರಿಗೆ ಕರೆತರುವುದು ಅನಿವಾರ್ಯ ಆಗಿರುತ್ತದೆ ಆದರೆ ಸಮಸ್ಯೆ ಏನು ಎಂದರೆ ಒಬ್ಬ ಮನುಷ್ಯನ ದೇಹದಿಂದ ಆತ ಸತ್ತ ನಂತರ ಹೃದಯವನ್ನು ತೆಗೆದಾಗ ಕೇವಲ ನಾಲ್ಕು ಗಂಟೆಗಳಲ್ಲಿ ಅದನ್ನು ಬೇರೊಬ್ಬರಿಗೆ ಜೋಡಿಸಬೇಕು ಇಲ್ಲವಾದರೆ ಅದು ವ್ಯರ್ಥ ಆಗುತ್ತದೆ. ಹೀಗಾಗಿ ಮಂಗಳೂರಿನಲ್ಲಿ ಇರುವ ಮಗುವನ್ನು 359 ಕಿಲೋ ಮೀಟರ್ ದೂರದಲ್ಲಿರುವ ಬೆಂಗಳೂರಿಗೆ ಕರೆತರಲು ರಸ್ತೆ ಮಾರ್ಗದಲ್ಲಿ ಕನಿಷ್ಠ ಅಂದರು ಏಳರಿಂದ ಎಂಟು ಗಂಟೆಗಳು ಬೇಕೇ ಬೇಕು ಹಾಗಾಗಿ ಯಾವುದೇ ಆಂಬುಲೆನ್ಸ್ ಡ್ರೈವರ್ ಕೂಡ ಈ ಕೆಲಸ ಸಾಧ್ಯವಿಲ್ಲ ಎಂದು ಕೈಬಿಡುತ್ತಾರೆ ಮತ್ತು ವಿಮಾನ ಮಾರ್ಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯಬಹುದು ಎಂದು ಯೋಚಿಸಿದರೆ ಮಗು ಈಗಾಗಲೇ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದೆ.

ಸಾಮಾನ್ಯ ಮನುಷ್ಯನೇ ವಿಮಾನಯಾನ ಮಾಡುವಾಗ ಉಸಿರಾಟದ ಸಮಸ್ಯೆ ಅನುಭವಿಸುತ್ತಾರೆ. ಮೊದಲೇ ಸಮಸ್ಯೆಯಲ್ಲಿರುವ ಮಗುವನ್ನು ವಿಮಾನಯಾನದಲ್ಲಿ ಕರೆದಿರುವುದು ಹಾಗೂ ವಿಮಾನಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ರಸ್ತೆ ಮಾರ್ಗದಲ್ಲಿಯೇ ಮಗುವನ್ನು ಬೆಂಗಳೂರಿಗೆ ಕರೆ ತರುವುದು ಅನಿವಾರ್ಯ. ಈ ರೀತಿ ರಸ್ತೆ ಮಾರ್ಗದಲ್ಲಿ ಆಂಬುಲೆನ್ಸ್ ಚಾಲನೆ ಮಾಡಿ ಕರೆತರುವ ವ್ಯಕ್ತಿಗೆ ಬಹಳ ಗುಂಡಿಗೆ ಬೇಕು ಆತ್ಮವಿಶ್ವಾಸ ಇರಬೇಕು. ಸಮಯಕ್ಕೆ ಅವರಿಗೆ ದೇವರ ರೂಪದಲ್ಲಿ ಮಹಮದ್ ಹನೀಫ್ ಎನ್ನುವ ಡ್ರೈವರ್ ಬರುತ್ತಾರೆ. ನಂತರ ಎಷ್ಟು ಅವಧಿಯಲ್ಲಿ ಮಗುವನ್ನು ಬೆಂಗಳೂರಿಗೆ ಕರೆತರಲಾಯಿತು ಮತ್ತು ಮಗು ಈಗ ಹೇಗಿದೆ ಎನ್ನುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *