ಹಣ ಯಾರಿಗೂ ಸುಮ್ನೆ ಬರೊಲ್ಲ ಅಂತ ಹೇಳೋ ಈ ಲಲಿತ ಜ್ಯುವೆಲರಿ ಮಾಲೀಕ ನಿಜಕ್ಕೂ ಯಾರು ಗೊತ್ತಾ ? ಈ ಗುಂಡು ಅಂಕಲ್ ಹಿನ್ನೆಲೆ ನೋಡಿ. - Karnataka's Best News Portal

ಯಾವ ಸೆಲೆಬ್ರಿಟಿನು ಇಲ್ಲ ಅಂದ್ರು ಇವರ ಶಾಪ್ ಹೌಸ್ ಫುಲ್……! ಯಾರು ಈ ಲಲಿತಾ ಜ್ಯುವೆಲರಿ ಅಂಕಲ್…..||ಈ ಕಿರಣ್ ಕುಮಾರ್ ನಮಗೆ ಟಿವಿ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಎಂಬಂತೆ ಕಾಣುವ ವ್ಯಕ್ತಿ ಇವರನ್ನು ಈಗ ನೋಡದೆ ಇರುವ ಸಾಮಾನ್ಯ ಮನುಷ್ಯ ಇಲ್ಲವೇ ಇಲ್ಲ ಎಂದು ಹೇಳಬಹುದು ಇತರೆ ಜ್ಯುವೆಲ್ಲರಿ ಶಾಪ್ ನವರೆಲ್ಲಾ ಸುಂದರ ಹೀರೋಯಿನ್ ಹಾಗೂ ಮಾಡೆಲ್ ಗಳನ್ನು ತಮ್ಮ ಪ್ರಾಡಕ್ಟ್ ಗಳಿಗೆ ಬಳಸಿಕೊಂಡರೆ ಕಿರಣ್ ಕುಮಾರ್ ಅವರು ಈ ಟ್ರಿಕ್ ಬಳಸದೆ ತಮ್ಮ ಪ್ರಾಡಕ್ಟ್ ಗೆ ತಾವೇ ಪ್ರಮೋಟರ್ ಆಗಿ ತಮ್ಮ ಚಿನ್ನವನ್ನು ಬೇರೆಯವರ ಚಿನ್ನಕ್ಕೆ ಕಂಪೇರ್ ಮಾಡಿ ನೋಡಿ ಎಂದು ಸಾಮಾನ್ಯವಾಗಿ ಯಾರೂ ಹೇಳದ ಈ ಅಡ್ವೈಸ್ ಕೊಡುತ್ತಾ ಚಿನ್ನ ಕರೀದಿಯ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.ಇದೇ ಕಾರಣಕ್ಕೆ ಉಳಿದವರಿಗಿಂತ ಭಿನ್ನವಾಗಿಯೂ ಆಕರ್ಷಕವಾಗಿಯೂ ಕಾಣುವ ಕಿರಣ್ ಕುಮಾರ್ ಅಸಲಿಗೆ ಯಾರು ಯಾವ ಊರಿನವರು ಇವರು ಕನ್ನಡಿಗರಂತು ಅಲ್ಲ ಆದರೂ ತಮ್ಮ ವ್ಯವಹಾರವನ್ನು ದಕ್ಷಿಣ ಭಾರತದಲ್ಲಿ ಶುರು ಮಾಡಿ ಮುನ್ನಡೆಗೆ ಬಂದವರು ಸಾಮಾನ್ಯವಾಗಿ ಚಿನ್ನದೊಡವೆಯ ಮಾಲೀಕರನ್ನು ನಾವು ಮಾರ್ವಾಡಿಗಳು ಎನ್ನುತ್ತೇವೆ ಕೆಲವೊಂದು ಕಡೆ ಸೇಟುಗಳು ಎಂದು ಸಹ ಕರೆಯುತ್ತಾರೆ ಮಾರ್ವಾಡ್ ಎನ್ನುವುದು

ರಾಜಸ್ಥಾನ ದಲ್ಲಿ ಬರುವ ಒಂದು ಊರಿನ ಹೆಸರು ಸಾಮಾನ್ಯವಾಗಿ ಇಲ್ಲಿನಿಂದಲೇ ಹೆಚ್ಚಿನ ಜನ ವಿವಿಧೆಡೆ ವಲಸೆಗೆ ಹೋಗಿ ವ್ಯಾಪಾರವನ್ನು ಶುರು ಮಾಡುತ್ತಾರೆ ಕಿರಣ್ ಕುಮಾರ್ ಅವರ ಪೂರ್ವಿಕರೂ ಸಹ ಮೂಲತಃ ರಾಜಸ್ಥಾನದ ವರೇ ಆದರೆ ಕಿರಣ್ ಅವರು ಜನಿಸಿದ್ದು ತಮಿಳುನಾಡು ಮತ್ತು ಆಂಧ್ರದ ಗಡಿಯಲ್ಲಿ ಬರುವ ನೆಲ್ಲೂರಿನಲ್ಲಿ ಇವರ ಪರಿವಾರದ ಬಗ್ಗೆ ಹೇಳುವುದಾದರೆ ಇವರದ್ದು ದೊಡ್ಡ ಕುಟುಂಬ ಇವರ ಪೋಷಕರಿಗೆ ಒಟ್ಟು ಎಂಟು ಜನ ಮಕ್ಕಳು.

ಅವರಲ್ಲಿ ಎಲ್ಲರ ಪೈಕಿ ಕಿರಣ್ ಅವರೇ ಎಲ್ಲರಿಗಿಂತ ಕಿರಿಯರು ಅಂದರೆ ಇವರಿಗೆ ಆರು ಜನ ಅಕ್ಕಂದಿರು ಹಾಗೂ ಒಬ್ಬರು ಹಿರಿಯ ಸಹೋದರ ಇದ್ದಾರೆ ಇವರದ್ದು ಕಡುಬಡತನದ ಕುಟುಂಬ ಹಲವು ಕಷ್ಟಗಳ ಜೊತೆ ಬೆಳೆದುಕೊಂಡು ಬಂದವರು ಕಿರಣ್ ಎರಡು ಹೊತ್ತಿನ ಊಟಕ್ಕೂ ಕೂಡ ಪರದಾಡುವಂತಹ ಸ್ಥಿತಿ ಇತ್ತು ಹಾಗೂ ಮೈ ತುಂಬ ಬಟ್ಟೆ ಧರಿಸಲು ಕೂಡ ಇರಲಿಲ್ಲ ಬಟ್ಟೆ ಇಲ್ಲದಿದ್ದರಿಂದ ಇವರ ಅಕ್ಕಂದಿರು ಸಾರ್ವಜನಿಕವಾಗಿ ಹೊರಗಡೆ ಬರಲು ಹಿಂಜರಿಯು ತ್ತಿದ್ದ ಒಂದು ಕಾಲ ಇತ್ತು ಕೇವಲ ಬಟ್ಟೆಯೊಂದೆ ಅಲ್ಲದೆ ಎಲ್ಲರಿಗೂ ಸಾಕಾಗುವಷ್ಟು ಆಹಾರವು ಸಹ ಆಗ ಮನೆಯಲ್ಲಿ ಇರುತ್ತಿರಲಿಲ್ಲ ಈ ರಾತ್ರಿ ಹೇಗೋ ಅರೆ ಹೊಟ್ಟೆ ಊಟ ಮಾಡಿ ಮಲಗಿದರೆ ಮಾರನೇ ದಿನ ಹೇಗಪ್ಪಾ ಎಂದು ಚಿಂತಿಸುವಂತಹ ಪರಿಸ್ಥಿತಿ ಇತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *