ಈ ಗಿಡದ ಬೇರು ಎಲ್ಲಿ ಸಿಕ್ಕರೂ ಬಿಡಬೇಡಿ ಅದೃಷ್ಟವನ್ನು ನೀಡಿ ಹಣದ ಸಂಕಷ್ಟವನ್ನು ಕಳೆದು ಮನುಷ್ಯನಿಗೆ ಏಳಿಗೆ ನೀಡುವ ಈ ಬೇರಿನ ತಂತ್ರ ಹೇಗೆ ಮಾಡಬೇಕು ನೋಡಿ - Karnataka's Best News Portal

ಈ ಒಂದು ಉಪಾಯ ಮಾಡಿದರೆ ಸಾಕು ಹಣದ ಮಳೆಯೇ ನಿಮ್ಮ ಮನೆಯಲ್ಲಿ ಸುರಿಯುವುದು…ಹಣ ಮಾನವ ಕಂಡು ಹಿಡಿದಿರುವ ಒಂದು ವಿಶೇಷವಾದ ವಸ್ತು, ಯಾಕೆಂದರೆ ಈಗ ಪ್ರತಿಯೊಬ್ಬನ ಮನುಷ್ಯನ ಪ್ರತಿದಿನದ ಹೋರಾಟವು ಕೂಡ ಈ ಹಣವನ್ನು ಕುರಿತೇ ಆಗಿರುತ್ತದೆ. ಮನುಷ್ಯನ ಪ್ರತಿಶತ 99 ರಷ್ಟು ಸಮಸ್ಯೆಗಳನ್ನು ಇದು ಬಗೆಹರಿಸುವ ಕಾರಣ ಎಲ್ಲರೂ ಈ ಹಣದ ಹಿಂದೆ ಓಡುತ್ತಿದ್ದಾರೆ. ಒಂದು ವಯಸ್ಸು ದಾಟಿದ ಬಳಿಕ ಮನುಷ್ಯನ ಎಲ್ಲ ಸುಖ ಶಾಂತಿ ನೆಮ್ಮದಿ ಕೂಡ ಹಣವನ್ನೇ ಅವಲಂಬಿಸಿರುತ್ತದೆ. ಹಾಗಾಗಿ ಇಂತಹ ಹಣ ಗಳಿಕೆಯ ಸಲುವಾಗಿ ಮನುಷ್ಯನು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾನೆ. ಹಣ ಸಂಪಾದನೆ ಮಾಡುವುದರ ಜೊತೆಗೆ ಹಣವನ್ನು ಹೆಚ್ಚಿಸಿಕೊಳ್ಳುವ ಕೆಲವು ತಂತ್ರಗಳು ಕೂಡ ತಿಳಿದಿರಬೇಕು. ಈಗ ಮಂತ್ರಶಕ್ತಿಯ ಹಾಗೂ ಯಂತ್ರಶಕ್ತಿಯ ಜೊತೆಗೆ ತಂತ್ರ ಶಕ್ತಿಗಳು ಕೂಡ ಅಷ್ಟೇ ಕೆಲಸ ಮಾಡುವುದರಿಂದ ಈ ತಂತ್ರ ಮಾಡಿದರೆ ನಿಮ್ಮ ಬಳಿ ಹಣದ ಕೊರತೆಯೇ ಬರುವುದಿಲ್ಲ.

ಈ ಉಪಾಯ ಮಾಡುವುದು ಕೂಡ ಅಷ್ಟೇ ಸರಳ. ಕುಪ್ಪಿ ಗಿಡ ಎಂದು ಹೆಸರುವಾಸಿ ಆಗಿರುವ ಈ ಗಿಡದಲ್ಲಿ ಅಂತಹ ಶಕ್ತಿ ಇದ್ದು ಈ ಉಪಾಯಕ್ಕಾಗಿ ಅದರ ಬೇರನ್ನು ಬಳಸಲಾಗುತ್ತದೆ. ಕುಪ್ಪಿ ಗಿಡದ ಬೇರನ್ನು ತಂದು ಯಾವುದೇ ಚಾಕು ಚೂರಿ ಅಥವಾ ಕತ್ತರಿ ಈ ರೀತಿ ಹರಿತವಾದ ಉಪಕರಣಗಳ ಸಹಾಯ ಇಲ್ಲದೆ ಉಪಾಯವಾಗಿ ಬೇರನ್ನು ಕಾಂಡದಿಂದ ಬೇರ್ಪಡಿಸಿ ಅದನ್ನು ಚೆನ್ನಾಗಿ ತೊಳೆದು ಅರಿಶಿನ ಹಚ್ಚಿ ಕುಂಕುಮ ಇಟ್ಟು ಹೂವನ್ನು ಅರ್ಪಿಸಿ ಪೂಜೆ ಮಾಡಿ ಮನದಲ್ಲಿ ನಿಮ್ಮ ಇಷ್ಟ ದೇವರನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿ ಸಂಕಲ್ಪ ಮಾಡಿಕೊಳ್ಳಿ. ನಂತರ ಬೇರನ್ನು ನೀವು ಮನೆಯಲ್ಲಿ ಯಾವುದಾದರೂ ಗಾಜಿನ ಡಬ್ಬಿಯಲ್ಲಿ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಇಡಬೇಕು ಅಥವಾ ನೀವು ದಿನನಿತ್ಯ ಉಪಯೋಗಿಸುವ ಹ್ಯಾಂಡ್ ಬ್ಯಾಗ್ ಪರ್ಸ್ ಗಳಲ್ಲಿ ಕೂಡ ಈ ಬೇರನ್ನು ಇದೇ ರೀತಿ ಅರಿಶಿಣ ಹಚ್ಚಿ ಕುಂಕುಮ ಇಟ್ಟು ಭಕ್ತಿಯಿಂದ ಇಟ್ಟುಕೊಳ್ಳಬಹುದು.

ಪ್ರತಿ ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ ಇಟ್ಟು ಹುಣ್ಣಿಮೆ ದಿನ ಬದಲಾಯಿಸಬೇಕು ಮತ್ತು ಹುಣ್ಣಿಮೆಯಿಂದ ಅಮಾವಾಸ್ಯೆ ದಿನದವರೆಗೂ ಇಟ್ಟು ಅಮವಾಸ್ಯೆಯಂದು ಬದಲಾಯಿಸಬೇಕು. ಈ ಉಪಾಯವನ್ನು ಯಾರೇ ಮಾಡಿದರೂ ಕೂಡ ಮೊದಲು ನಂಬಿಕೆ ಇಡಬೇಕು ಹಾಗೂ ಒಟ್ಟಾಗಿ ಇದನ್ನು ಆರಂಭಿಸಿದರು ಕೂಡ ಎಲ್ಲರಿಗೂ ಅದೇ ಸಮಯದಲ್ಲಿ ಫಲಿತಾಂಶ ಸಿಗುವುದಿಲ್ಲ ಅವರವರ ಜನ್ಮ ಜಾತಕಕ್ಕೆ ಅನುಗುಣವಾಗಿ ಇದರ ಫಲಿತಾಂಶ ಸಿಗುವುದು ಕೊಂಚ ಏರುಪೇರು ಆಗಬಹುದು. ಆದರೆ ಖಂಡಿತವಾಗಿಯೂ ತಡವಾದರೂ ಕೂಡ ಈ ತಂತ್ರ ಕೆಲಸ ಮಾಡೇ ಮಾಡುತ್ತದೆ. ಈ ಉಪಾಯದಿಂದ ನಿಮ್ಮ ಮನೆಯಲ್ಲಿ ಹಣದ ಮಳೆಯೇ ಸುರಿಯುತ್ತದೆ ಹಾಗೂ ಎಂದು ಕೂಡ ಹಣದ ಕೊರತೆ ಬರುವುದಿಲ್ಲ. ಈಗಾಗಲೇ ನಿಮಗೆ ಹಲವು ವರ್ಷಗಳಿಂದ ಬರಬೇಕಾಗಿದ್ದ ಹಣ ಈ ಉಪಾಯ ಮಾಡಿದ ಕೆಲವೇ ದಿನಗಳಲ್ಲಿ ಕೈ ಸೇರುತ್ತದೆ ಈ ರೀತಿ ಹಣದ ವಿಚಾರದಲ್ಲಿ ಎಷ್ಟೋ ಒಳಿತಾಗುತ್ತದೆ.

Leave a Reply

Your email address will not be published. Required fields are marked *