ವರಾಹ ರೂಪಂ ಹಾಡಿಗೆ ಕತ್ತರಿ ಅಂದು ಕಿರಿಕ್ ಪಾರ್ಟಿ ಸಿನಿಮಾ ಇಂದು ಕಾಂತಾರ..ಸಿನಿಮಾ..ಕೇರಳ ಮ್ಯೂಸಿಕ್ ಬ್ಯಾಂಡ್ ಮಾಡ್ತಿರೋ ಕೆಲಸ ಏನು ಗೊತ್ತಾ ? - Karnataka's Best News Portal

ಹೀಗೆ ಮಾಡಿದ್ರೆ ಉಳಿಯುತ್ತೆ ಹಾಡು!!ಕಾಂತಾರ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದರೂ ಅದನ್ನು ನೋಡುವವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಕನ್ನಡ ಸಿನಿಮಾವೊಂದು ದೇಶ ವಿದೇಶದಲ್ಲಿ ಹಿಟ್ ಆಗಿ ಕೋಟಿ ಕೋಟಿ ಹಣವನ್ನು ಪಡೆದುಕೊಳ್ಳುತ್ತಿದೆ ಎಂದರೆ ನಮಗೆಲ್ಲರಿಗೂ ಕೂಡ ಒಂದು ರೀತಿಯ ಹೆಮ್ಮೆಯಾಗಿದೆ ಇಂತಹ ಸಮಯ ದಲ್ಲಿ ಕಾಂತಾರ ಸಿನಿಮಾಗೆ ಒಂದು ಸಂಕಷ್ಟ ಎದುರಾ ಗಿದೆ ಕಾಂತಾರ ಸಿನಿಮಾದ ವರಹಾರೂಪಂ ಎಂಬ ಹಾಡು ನಕಲು ಮಾಡಿದ್ದು ಕದ್ದಿದ್ದು ಎಂದು ಕೇರಳದ ಥೈಕುಡಂ ಎಂಬ ಮ್ಯೂಸಿಕ್ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಗೆ ಹೋಗಿ ಆರಂಭಿಕ ಗೆಲುವನ್ನು ಸಾಧಿಸಿದೆ ಥೈಕುಡಂ ಬ್ರಿಡ್ಜ್ ಪರವಾಗಿ ತೀರ್ಪನ್ನು ಕೊಟ್ಟಂತಹ ಕೇರಳದ ಕೋರ್ಟ್ ಕಾಂತಾರ ಸಿನಿಮಾ ದಲ್ಲಿ ವರಹ ರೂಪಂ ಹಾಡನ್ನು ಬಳಸದಂತೆ ಮಧ್ಯಂತರ ಆದೇಶವನ್ನು ನೀಡಿದೆ.

ಹೀಗಾಗಿ ಕಾಂತಾರದಲ್ಲಿ ಶಿವ ಮಾಯವಾದಂತೆ ವರಹ ರೂಪಂ ಹಾಡು ಕೂಡ ಶೀಘ್ರದಲ್ಲಿಯೇ ಮಾಯವಾಗ ಲಿದೆ ಆದರೆ ಚಿತ್ರದ ಲಾಸ್ಟ್ ಸೀನ್ ಜೊತೆಗೆ ಮಿಕ್ಸ್ ಆಗಿರುವ ಈ ಹಾಡನ್ನು ತೆಗೆದರೆ ಸಿನಿಮಾಕ್ಕೆ ಸಮಸ್ಯೆ ಆಗುವುದಿಲ್ಲವ ಎಂಬ ಪ್ರಶ್ನೆ ಮೂಡುತ್ತದೆ ಹಾಗಾದರೆ ಯಾವ ವಿಧಾನವನ್ನು ಬಳಸಿದರೆ ಈ ವರಹ ರೂಪಂ ಹಾಡು ಉಳಿಯುತ್ತದೆ ಏನಿದು ವರಾಹ ರೂಪಂ ವಿವಾದ ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದಲ್ಲೂ ಇಂತಹದ್ದೇ ಒಂದು ವಿವಾದ ಶುರುವಾಗಿ ನಂತರ ಬಳಿಕ ಹೇಗೆ ಅಂತ್ಯವಾಯಿತು ಹೀಗೆ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಕೆಲವೊಂದುಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯುತ್ತಾ ಹೋಗೋಣ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಂತಾರ ಸಿನಿಮಾದಲ್ಲಿ ಬರುವಂತಹ ವರಾಹ ರೂಪo ಹಾಡು ಇದು ಕದ್ದಿದ್ದು ಎಂದು ಥೈಕುಡಂ ಬ್ರಿಡ್ಜ್ ಸಂಸ್ಥೆಯ ವಿವಾದವಾಗಿದೆ.

ಮೊದಲೇ ತಿಳಿಸಿರುವಂತೆ ಥೈಕುಡಂ ಬ್ರಿಡ್ಜ್ ಅನ್ನುವುದು ಕೇರಳದ ಮ್ಯೂಸಿಕ್ ಬ್ಯಾಂಡ್ ಈ ತಂಡ 2017ರಲ್ಲಿ ನವರಸಮ್ ಎಂಬ ಹಾಡನ್ನು ಮಾಡಿತ್ತು ಅದು ಮಾತೃ ಟಿವಿ ಕಪ್ಪಾ ಟಿವಿ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಿತ್ತು ಅಲ್ಲಿಂದ ಇಲ್ಲಿಯವರೆಗೆ ಅಂದರೆ ಐದು ವರ್ಷದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಜನ ನವರಸಂ ಹಾಡನ್ನು ನೋಡಿದ್ದಾರೆ ಅಂದ ಹಾಗೆ ಕಾಂತಾರದಲ್ಲಿರುವ ವರಹ ರೂಪಂ ಹಾಡು ನವರಸಂ ಹಾಡಿಗೆ ಬಹುತೇಕ ಹೋಲುವಂತೆ ಇದೆ ಹಾಗಾಗಿ ಕೇರಳದ ಮ್ಯೂಸಿಕ್ ಬ್ಯಾಂಡ್ ತಂಡ ನಮ್ಮ ಹಾಡನ್ನು ಕಾಪಿ ಮಾಡಿ ಕಾಂತರಾ ಸಿನಿಮಾದಲ್ಲಿ ಬಳಸಿಕೊಂಡಿ ದ್ದಾರೆ ಎನ್ನುವಂತಹ ವಿವಾದವನ್ನು ಮಾಡುತ್ತಿದ್ದಾರೆ ಆದರೆ ನಾವು ಈ ಹಾಡನ್ನು ಕಾಪಿ ಮಾಡಿಲ್ಲ ಅನ್ನುವು ದು ಕಾಂತಾರ ಸಿನಿಮಾ ತಂಡದ ವಾದವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *