ಕಾಂತಾರ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ನಟ ನಟಿಯರು ನಿಜ ಜೀವನದಲ್ಲಿ ಹೇಗೆ ಕಾಣ್ತಾರೆ ಗೊತ್ತಾ.? ರಿಯಲ್ ಲೈಫ್ ನ ಲುಕ್ ಬೇರೆನೆ ಇದೆ - Karnataka's Best News Portal

ಕಾಂತಾರ ಚಲನಚಿತ್ರ ಎಲ್ಲಾ ನಟರ ನಿಜ ಜೀವನದ ಫೋಟೋಗಳು……..ಇತ್ತೀಚೆಗೆ ತೆರೆಕಂಡಂತಹ ಕಾಂತಾರ ಸಿನಿಮಾದ ಬಗ್ಗೆ ಎಲ್ಲಾ ಕಡೆಯಲ್ಲಿಯೂ ಚರ್ಚೆಯು ನಡೆಯುತ್ತಿದೆ ಹಾಗೂ ಪ್ರತಿಯೊಬ್ಬರೂ ಕೂಡ ಈ ಒಂದು ಸಿನಿಮಾವನ್ನು ನೋಡಿ ಒಳ್ಳೆಯ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ ಅದರಲ್ಲೂ ದೇಶದೆಲ್ಲೆಡೆ ಈ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನವನ್ನು ಪಡೆಯುತ್ತಿದ್ದು ಈ ಸಿನಿಮಾದಲ್ಲಿ ನಟಿಸಿರುವಂತಹ ಒಂದೊಂದು ಪಾತ್ರಗಳು ಕೂಡ ಸಿನಿಮಾದಲ್ಲಿ ವಿಭಿನ್ನವಾಗಿ ತನ್ನದೇ ಆದಂತಹ ರೀತಿಯಲ್ಲಿ ಮೂಡಿಬಂದಿದ್ದು ಈ ಎಲ್ಲಾ ಪಾತ್ರಗಳಿಗೂ ಕೂಡ ಉತ್ತಮವಾದಂತಹ ಪ್ರತಿಕ್ರಿಯೆ ಸಿಗುತ್ತಿದೆ ಕಾಂತಾರ ಸಿನಿಮಾದ ಎಲ್ಲ ಪಾತ್ರಧಾರಿಗಳು ಕೂಡ ದೇಶದಲ್ಲೆಲ್ಲ ಫೇಮಸ್ ಆಗುತ್ತಿದ್ದು ಇವರು ಈ ಕಾಂತರಾ ಸಿನಿಮಾದ ಮುಖಾಂತರ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ ಹಾಗೂ ಇವರೆಲ್ಲರೂ ಇಷ್ಟ ಫೇಮಸ್ ಆಗುವುದಕ್ಕೆ ಪ್ರಮುಖವಾದಂತಹ ಕಾರಣ ಯಾರು ಎಂದರೆ ರಿಷಬ್ ಶೆಟ್ಟಿ.

ಹಾಗಾದರೆ ಈ ಚಿತ್ರದಲ್ಲಿ ನಟಿಸಿರುವಂತಹ ಕೆಲವೊಂದ ಷ್ಟು ಫೇಮಸ್ ಆದ ನಟರ ನಿಜವಾದ ಹೆಸರು ಹಾಗೂ ಅವರ ಹಿನ್ನೆಲೆಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕಮಲ ಶಿವನ ತಾಯಿಯಾಗಿ ಕಮಲ ಎಂಬ ಪಾತ್ರದಲ್ಲಿ ಮಾನಸಿ ಸುಧೀರ್ ಅವರು ಕಾಣಿಸಿಕೊಂಡಿದ್ದು ಇವರು ಖ್ಯಾತ ರಂಗಭೂಮಿ ಕಲಾವಿದರಾಗಿದ್ದಾರೆ. ಬುಳ್ಳ ಶಿವನ ಸ್ನೇಹಿತನಾಗಿ ಬುಳ್ಳ ಎಂಬ ಪಾತ್ರದಲ್ಲಿ ಸುನಿಲ್ ಗುರು ಅವರು ಕಾಣಿಸಿ ಕೊಂಡಿದ್ದು ಈ ಪಾತ್ರವನ್ನು ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಂಡಿದ್ದಾರೆ. ಗುರುವ ಶಿವನ ಸೋದರ ಸಂಬಂಧಿ ಗುರುವ ಪಾತ್ರದಲ್ಲಿ ಸ್ವರಾಜ್ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ ಇವರು ಕೂಡ ರಂಗಭೂಮಿಯ ಕಲಾವಿದರಾಗಿದ್ದು ಹಲವಾರು ನಟನೆಯನ್ನು ಕೂಡ ಇವರು ಮಾಡಿದ್ದಾರೆ. ಸುಂದರ ಸುಂದರ ಎಂಬ ಪಾತ್ರದಲ್ಲಿ ದೀಪಕ್ ರೆಪಣ್ಣಜಿ ಅವರು ಕಾಣಿಸಿಕೊಂಡಿ ದ್ದಾರೆ.ಶೀಲಾ ಸುಂದರನ ಹೆಂಡತಿಯ ಪಾತ್ರದಲ್ಲಿ ಚಂದ್ರಕಲಾ ರಾವ್ ಅವರು ಅಭಿನಯಿಸಿದ್ದಾರೆ ಇವರು ಕೂಡ ರಂಗಭೂಮಿಯ ಕಲಾವಿದರಾಗಿದ್ದಾರೆ.

ಕಾಂತರಾ ಸಿನಿಮಾದ ಪ್ರಾರಂಭದಲ್ಲಿಯೇ ಸ್ಪೆಷಲ್ ಗೆಸ್ಟ್ ಅಪ್ಪಿಯರೆನ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವೀನ್ ಬಂಡೆಯಲ ಅವರ ಪಾತ್ರವೂ ಈ ಒಂದು ಚಿತ್ರಕ್ಕೆ ಉತ್ತಮವಾದಂತಹ ಪ್ರಾರಂಭವನ್ನು ತಂದು ಕೊಟ್ಟಿದ್ದು ಈ ಒಂದು ಪಾತ್ರ ಕೇವಲ ಸ್ವಲ್ಪ ಸಮಯ ದಲ್ಲಿ ಬಂದು ಹೋದರು ಕೂಡ ಈ ಒಂದು ಪಾತ್ರವನ್ನು ಯಾರು ಕೂಡ ಮರೆತಿಲ್ಲ ಬದಲಾಗಿ ಈ ಒಂದು ಪಾತ್ರ ಸಿನಿಮಾಗೆ ಅಷ್ಟು ತೂಕವನ್ನು ತಂದುಕೊಟ್ಟಿದೆ.ಲಚ್ಚು ರಂಜನ್ ಸಾಜು ಅವರು ಲಚ್ಚು ಪಾತ್ರದಲ್ಲಿ ಕಾಂತರಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಸಿನಿಮಾದಲ್ಲಿಯೂ ಕೂಡ ಮುಖ್ಯವಾದ ಪಾತ್ರವನ್ನು ಮಾಡಿ ಆ ಸಿನಿಮಾ ದಲ್ಲಿಯೂ ಕೂಡ ಹೆಚ್ಚಿನ ಯಶಸ್ಸನ್ನು ಪಡೆದಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

By workbee

Leave a Reply

Your email address will not be published. Required fields are marked *