ಮಕ್ಕಳ ಹಂಗಲ್ಲಿ ಇರಬಾರದು ಸ್ವಾಮಿ.ಹೆತ್ತ ಮಕ್ಕಳ ಮೇಲೆ ನಾವೇ ಶಾಪ ಹಾಕೋದುಂಟಾ ಸ್ವಾಮಿ.ನೊಂದ ತಾಯಿ ಮಾತನಾಡುವ ಒಂದೊಂದು ಮಾತು ಸಹ ಕಣ್ಣೀರು ತರಿಸುತ್ತೆ ಹೂ ಮಾರಿ ಜೀವನ...! - Karnataka's Best News Portal

ನಾವು ಹೆತ್ತ ಮಕ್ಕಳ ಮೇಲೆ ನಾವೇ ಶಾಪ ಹಾಕೋದುಂಟ ಸ್ವಾಮಿ…….!ನಾವು ವಯಸ್ಸಾದವರು ಆದಷ್ಟು ದೂರ ಇಡಲು ಬಯಸುತ್ತೇವೆ ಅದರಲ್ಲೂ ಕೆಲವೊಂದಷ್ಟು ಜನ ತಮ್ಮ ತಂದೆ ತಾಯಿಗಳನ್ನು ಕೂಡ ಹತ್ತಿರ ಇಟ್ಟು ನೋಡಿಕೊಳ್ಳ ಲಾರದಷ್ಟು ದುರಾದೃಷ್ಟವಂತರು ಇದ್ದಾರೆ ಅದರಂತೆ ಯೇ ಇತ್ತೀಚಿಗೆ ಪ್ರತಿಯೊಬ್ಬರೂ ಕೂಡ ಈ ರೀತಿಯಾದ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದು ಅಂದರೆ ತಮ್ಮ ತಂದೆ ತಾಯಿಗಳನ್ನು ಸಾಕಲಾರದಷ್ಟು ಸಮಯವಿಲ್ಲ ಎಂಬ ಕಾರಣವನ್ನು ಹುಡುಕಿಕೊಂಡು ಅವರನ್ನು ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ ಆದರೆ ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಕೊನೆಯ ಸಮಯದಲ್ಲಿ ತಮ್ಮ ಮಕ್ಕಳ ಜೊತೆ ಇರಬೇಕು ಮೊಮ್ಮಕ್ಕಳ ಜೊತೆ ಇರಬೇಕು ಅವರ ಜೊತೆ ನಾವು ಕಾಲವನ್ನು ಕಳೆಯಬೇಕು ಎಂದು ಅವರು ಎಷ್ಟು ಆಸೆಯನ್ನು ಇಟ್ಟುಕೊಂಡಿರುತ್ತಾರೆ ಆದರೆ ಅದಕ್ಕೆ ಮಕ್ಕಳು ಒಪ್ಪುವುದಿಲ್ಲ ಬದಲಾಗಿ ಅವರನ್ನು ವೃದ್ದಾಶ್ರಮಗಳಲ್ಲಿ ಬಿಡುತ್ತಾರೆ.

ಅದರಲ್ಲೂ ವಯಸ್ಕರಿಗೆ ತಮ್ಮ ಕೊನೆಯ ಸಮಯ ದಲ್ಲಿ ಶತ್ರು ಯಾರು ಎಂದು ಹೇಳಿದರೆ ಅದು ಒಂಟಿತನ ಹೌದು ವಯಸ್ಸಾದವರು ತಮ್ಮ ಕೊನೆಯ ಕ್ಷಣಗಳನ್ನು ತಮ್ಮ ಕುಟುಂಬದವರೊಟ್ಟಿಗೆ ಕಳೆಯಬೇಕು ಎಂದು ಇರುತ್ತಾರೆ ಆದರೆ ಅದು ಸಾಧ್ಯವಾಗುವುದಿಲ್ಲ ಅದರಲ್ಲೂ ಕೆಲವೊಬ್ಬರು ತಮ್ಮ ತಂದೆ ತಾಯಿಗಳನ್ನು ನೋಡಿಕೊಳ್ಳದೆ ಅವರನ್ನು ಬೀದಿ ಪಾಲು ಮಾಡುತ್ತಾರೆ ಅವರು ವಯಸ್ಸಾದವರು ತಮ್ಮ ಜೀವನವನ್ನು ತಾವೇ ಸಾಗಿಸಿಕೊಳ್ಳುವಂತಹ ಪರಿಸ್ಥಿತಿಗೆ ಬರುತ್ತಾರೆ ಅದರಲ್ಲಿ ಕೆಲವೊಬ್ಬರು ಭಿಕ್ಷೆ ಬೇಡಿ ತಿನ್ನುವಂತಹ ಪರಿಸ್ಥಿತಿಯಲ್ಲಿ ಇರುತ್ತಾರೆ ಆದರೆ ಇವೆಲ್ಲವನ್ನು ಅರ್ಥ ಮಾಡಿಕೊಳ್ಳದ ಮಕ್ಕಳು ತಾವು ಸುಖವಾಗಿ ಇದ್ದರೆ ಸಾಕು ಎನ್ನುವಷ್ಟರ ಮಟ್ಟಿಗೆ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ ಆದರೆ ಅವರಿಗೆ ಮುಂದಿನ ದಿನಗಳಲ್ಲಿ ದೇವರು ಎಂತಹ ಕಠಿಣವಾದಂತಹ ಶಿಕ್ಷೆ ಕೊಡುತ್ತಾನೆ ದೇವರು ನಮ್ಮನ್ನು ಸುಮ್ಮನೆ ಬಿಡುತ್ತಾನ ಎಂಬ ಆಲೋಚನೆಯನ್ನು ಕೂಡ ಈಗಿನ ಜನರು ಮಾಡುವುದಿಲ್ಲ.

ಬದಲಾಗಿ ತಮ್ಮ ಜೀವನದತ್ತ ಹೆಚ್ಚಿನ ಗಮನವನ್ನು ವಹಿಸುತ್ತಾರೆ ಅದೇ ರೀತಿ ಈ ದಿನ ನಾವು ಹೇಳುತ್ತಿರುವ ಈ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ಒಬ್ಬರು ವಯಸ್ಸಾದಂತಹ ಅಜ್ಜಿ ಅವರಿಗೆ ಸುಮಾರು 80 ವರ್ಷ ಮೇಲ್ಪಟ್ಟಿರಬಹುದು ಅವರು ತಾವೇ ಸ್ವತಂತ್ರವಾಗಿ ತಮ್ಮ ಮಕ್ಕಳಿಗೆ ಭಾರವಾಗಬಾರದು ಎಂಬು ಉದ್ದೇಶವನ್ನು ಇಟ್ಟುಕೊಂಡು ತಾವೇ ತಮ್ಮ ಜೀವನವನ್ನು ಹೂ ವ್ಯಾಪಾರ ಮಾಡಿಕೊಂಡು ಸಾಗಿಸುತ್ತಿದ್ದಾರೆ ಅವರು ನಾವು ನಮ್ಮ ಮಕ್ಕಳಿಗೆ ಹೊರೆಯಾಗಬಾರದು ನಮ್ಮ ಆರೋಗ್ಯ ಚೆನ್ನಾಗಿರುವ ತನಕ ನಾವೇ ದುಡಿದು ತಿನ್ನಬೇಕು ಎಂದು ಹೇಳುವುದರ ಮುಖಾಂತರ ತಮ್ಮ ಮನಸ್ಸಿನಲ್ಲಿ ರುವಂತಹ ನೋವನ್ನು ವ್ಯಕ್ತಪಡಿಸುತ್ತಾ ಈ ರೀತಿಯಾದಂತಹ ಮಾತುಗಳನ್ನು ಹೇಳುತ್ತಾರೆ ನನ್ನ ಮಕ್ಕಳು ಎಲ್ಲೇ ಇರಲಿ ಹೇಗೆ ಇರಲಿ ಚೆನ್ನಾಗಿರಬೇಕು ನಾನು ಯಾವತ್ತಿಗೂ ಕೂಡ ಅವರನ್ನು ಹಾಳಾಗಲಿ ಎಂದು ಹಾರೈಸುವುದಿಲ್ಲ ಬದಲಾಗಿ ಸುಖವಾಗಿ ಸಂತೋಷವಾಗಿರಲಿ ಎನ್ನುತ್ತೇನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *