ಗಟ್ಟಿಮೇಳ ಸೀರಿಯಲ್ ಖ್ಯಾತಿಯ ಅಶ್ವಿನಿ ತಮ್ಮ ಮನೆಯಲ್ಲಿ ಪಕ್ಕ ಹಳ್ಳಿ ಶೈಲಿಯಲ್ಲಿ ತುಪ್ಪ ಮಾಡೋದು ಹೇಗೆ ಅಂತ ಮಾಡಿದ ಯೂಟ್ಯೂಬ್ ವಿಡಿಯೋ ವೈರಲ್.. - Karnataka's Best News Portal

ಪಕ್ಕ ಹಳ್ಳಿತುಪ್ಪ ಮಾಡೋದು ಹೇಗೆ….? ಇವತ್ತು ನಾನು ಮೂರು ಸೆರಿನಾ ತುಪ್ಪ ಮಾಡುತ್ತಿದ್ದೇನೇ. ನನಗೆ ಎಲ್ಲಾ ರೀತಿಯ ಅಡುಗೆ ಮಾಡಲು ಬರುತ್ತದೆ ತುಪ್ಪ ಹೇಗೆ ಮಾಡುವುದು ಎಂದು ನಾನು ನಿಮಗೆ ತಿಳಿಸುತ್ತೇನೆ. ತುಪ್ಪ ಕಾಯಿಸಲು ನಾನು ಮೂರು ಸೇರು ಬೆಣ್ಣೆಯನ್ನು ತೆಗೆದುಕೊಂಡಿದ್ದೇನೆ. ಅದಕ್ಕೆ ಬೇಕಾಗಿರುವ ಸಾಮಗ್ರಿಗಳು ಒಣ ಮೆಣಸಿನಕಾಯಿ, ಬೆಳ್ಳುಳ್ಳಿ,ಕಲ್ಲು ಉಪ್ಪು( ದಪ್ಪ ಉಪ್ಪು,ವಿಳ್ಳೇದೆಲೆ, ಅರಿಶಿಣ,ಮೆಂತ್ಯ ಕಾಳು, ಏಲಕ್ಕಿ. ನಂತರ ತುಪ್ಪವನ್ನು ಕಾಯಲು ಇಟ್ಟಿದ್ದೇನೆ ಬೆಣ್ಣೆ ಎಲ್ಲಾ ಕರಗಿ ನೊರೆ ನಿಂತ ನಂತರ ತುಪ್ಪ ಕಾದಿದೆ ಎಂದು ತಿಳಿಯುತ್ತದೆ ನೊರೆ ನಿಂತ ನಂತರವೂ ಅತಿಯಾಗಿ ತುಪ್ಪವನ್ನು ಕಾಯಿಸಿದರೆ ಅದು ನಮಗೆ ರವೆಯ ರೀತಿ ಸಿಗುವುದಿಲ್ಲ ಅದು ತುಂಬಾ ಗಟ್ಟಿಯಾಗಿ ಬರುತ್ತದೆ ಹಾಗಾಗಿ ತುಪ್ಪವನ್ನು ನೊರೆ ನಿಂತ ನಂತರ ಅತಿಯಾಗಿ ಕಾಯಿಸಬಾರದು. ತುಪ್ಪ ಮಾಡಲು ನೀರು ಕೂಡ ಬೇಕು ಏಕೆಂದರೆ ತುಪ್ಪ ಕಾಯ್ದಿದೆಯೇ ಎಂದು ನೋಡಲು.ಹೇಗೆ ನಾವು ಎಣ್ಣೆ ಕಾಯ್ದಿದೆ ಎಂದು ನೋಡುತ್ತೇವೆ ಹಾಗೆ ತುಪ್ಪ ಕಾಯ್ದಿದೆ ಎಂದು ನೋಡಲು ಎರಡು ಹನಿ ನೀರನ್ನು ಹಾಕಿ ನೋಡುತ್ತೇವೆ. ನೀರು ಹಾಕಿದಾಗ ಅದು ಹೇಗೆ ಕಾಯಿದಿಲ್ಲ ಎಂದು ತಿಳಿಯುತ್ತದೆ ಎಂದರೆ ತುಪ್ಪವೂ ಸಹ ಎಣ್ಣೆ ಕಾಯ್ದಾಗ ನೀರನ್ನು ಹಾಕಿದರೆ ಹೇಗೆ ಶಬ್ದ ಮಾಡುತ್ತದೆಯೋ ಹಾಗೆ ಕಾಯ್ದಿಲ್ಲವೆಂದರೆ ತುಪ್ಪ ಶಬ್ದ ಮಾಡುವುದಿಲ್ಲ.

ಹೀಗೆ ನಾವು ತುಪ್ಪವೂ ಕಾಯ್ದಿದೆ ಅಥವಾ ಇಲ್ಲವೋ ಎಂದು ತಿಳಿಯಬಹುದು. ಅದಕ್ಕೆ ಹಾಕಲು ತೆಗೆದಿಟ್ಟ ಸಾಮಾಗ್ರಿಗಳನ್ನು ಯಾವಾಗ ಹಾಕಬೇಕು ಎಂದು ನಮಗೆ ಸರಿಯಾಗಿ ತಿಳಿಯುವುದಿಲ್ಲ ನನಗೂ ಸಹ ಹೀಗೆ ಆಗುತ್ತಿತ್ತು ಆಗ ನನ್ನ ಅಮ್ಮ ಅದನ್ನು ಸರಿಯಾಗಿ ಹೇಳಿಕೊಟ್ಟರು ನೀರನ್ನು ಹಾಕುತ್ತಾ ನೋಡುತ್ತಿರಬೇಕು ಅದು ಯಾವಾಗ ಶಬ್ದ ಮಾಡುತ್ತದೆಯೋ ಆಗ ತುಪ್ಪ ಕಾದಿದೆ ಎಂದು ಅರ್ಥ.ಈಗ ನಾನು ನೀರನ್ನು ಸೇರಿಸಿ ನೋಡುತ್ತೇನೆ ಈಗ ಅದು ಶಬ್ದ ಮಾಡುತ್ತಿದೆ ಅಂದರೆ ತುಪ್ಪ ಕಾಯ್ದಿದೆ ಎಂದರ್ಥ. ನಂತರ ಸ್ಟೌ ಅನ್ನು ಆಫ್ ಮಾಡಿ ನಂತರ ನಾವು ತೆಗೆದುಕೊಂಡಿದ ಎಲ್ಲಾ ಸಾಮಗ್ರಿಗಳನ್ನು ಅದರೊಳಗೆ ಹಾಕಬೇಕು ನಂತರ ಅದರ ಮೇಲೆ ಒಂದು ತಟ್ಟೆ ಅಥವಾ ಪ್ಲೇಟ್ ಅನ್ನು ಮುಚ್ಚಬೇಕು. ಅವೆಲ್ಲವನ್ನು ಹಾಕಿದ ನಂತರ ಪ್ಲೇಟ್ ಅನ್ನು ಮುಚ್ಚದೆ ಇದ್ದರೆ ಎಲ್ಲವೂ ನಮ್ಮ ಮೈ ಮೇಲೆ ಬೀಳುತ್ತದೆ.ಹಾಗಾಗಿ ಅದನ್ನು ಹಾಕಿದ ತಕ್ಷಣ ಪ್ಲೇಟ್ ಅಥವಾ ತಟ್ಟೆಯಿಂದ ಮುಚ್ಚಬೇಕು. ಎರಡು ಅಥವಾ ಐದು ನಿಮಿಷಗಳ ನಂತರ ಅದನ್ನು ನೋಡಬಹುದು.ಒಂದು ಗಂಟೆಯ ನಂತರ ಅದನ್ನು ಸೋರಿಸಬೇಕು .ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

Leave a Reply

Your email address will not be published. Required fields are marked *