ನೀವೆ ನೋಡಿ ಸಕ್ಕರೆ ಫ್ಯಾಕ್ಟರಿ ಅಲ್ಲಿ ಹೇಗೆ ತಯಾರಾಗುತ್ತದೆ ಅಂತಾ...ಈ ವಿಡಿಯೋ ನೋಡಿ » Karnataka's Best News Portal

ನೀವೆ ನೋಡಿ ಸಕ್ಕರೆ ಫ್ಯಾಕ್ಟರಿ ಅಲ್ಲಿ ಹೇಗೆ ತಯಾರಾಗುತ್ತದೆ ಅಂತಾ…ಈ ವಿಡಿಯೋ ನೋಡಿ

ನೀವೇ ನೋಡಿ ಸಕ್ಕರೆ ಫ್ಯಾಕ್ಟರಿ ಯಲ್ಲಿ ಹೇಗೆ ತಯಾರಾಗುತ್ತೆ ಅಂತ||ಸಿಹಿ ತಿಂಡಿಗಳು ಸಿಹಿ ಪದಾರ್ಥಗಳು ಅಂದರೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುತ್ತಾರೆ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮಲ್ಲಿ ಸಂತೋಷದ ಹಾರ್ಮೋನ್ ಗಳು ಹೆಚ್ಚಾಗಿ ಉತ್ಪಾದನೆಯಾಗುತ್ತದೆ ಎನ್ನುವುದು ವೈಜ್ಞಾನಿಕ ಕಾರಣವೂ ಇದೆ ಇದನ್ನು ಹ್ಯಾಪಿ ಹಾರ್ಮೋನ್ಸ್ ಎಂದು ಕೂಡ ಕರೆಯುತ್ತಾರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಶ್ವದಲ್ಲಿ ತಯಾರಾಗುವಂತಹ ಸಕ್ಕರೆ ಶೇಕಡ 15ರಷ್ಟು ದೊಡ್ಡ ಪಾಲನ್ನು ನಮ್ಮ ಭಾರತದಲ್ಲಿ ತಯಾರಿಸಲಾಗು ತ್ತದೆ ಅದರಲ್ಲೂ ನಮ್ಮ ಕರ್ನಾಟಕದಲ್ಲಿಯೇ 35 ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕೂಡ ಇದೆ ಹೌದು ಸಕ್ಕರೆಯನ್ನು ಕಬ್ಬಿನಿಂದಲೇ ತಯಾರಿಸಲಾಗುತ್ತದೆ ಕಬ್ಬಿನ ಫ್ಯಾಕ್ಟರಿಗಳು ಹೆಚ್ಚಾಗಿ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಇರಲು ಕಾರಣ ಕಬ್ಬಿನ ಸಾಗಾಣಿಕೆ ಕಬ್ಬನ್ನು ಕತ್ತರಿಸಿದ ಮೇಲೆ ಅದನ್ನು ಹೆಚ್ಚಿನ ಸಮಯಗಳ ವರೆಗೆ ಹಾಗೆ ಇಡಲು ಸಾಧ್ಯವಿಲ್ಲ.

ಅವುಗಳನ್ನು ಕಾರ್ಖಾನೆಗೆ ತೆಗೆದುಕೊಂಡು ಹೋಗಿ ಮೊದಲು ಅವುಗಳನ್ನು ಕ್ರಶ್ ಮಾಡಿ ಕಬ್ಬಿನ ರಸವನ್ನು ತೆಗೆಯುವ ಕೆಲಸ ಮಾಡಲಾಗುತ್ತದೆ ಒಂದು ವೇಳೆ ಕತ್ತರಿಸಿದ ಕಬ್ಬನ್ನು ಹಾಗೆ ಇಟ್ಟರೆ ಅದು ಒಣಗಿ ಹೋಗಿ ಅದು ಕೇವಲ ಸುಡುವುದಕ್ಕ ಮಾತ್ರ ಪ್ರಯೋಜನ ವಾಗುತ್ತದೆ ಕಬ್ಬುಗಳನ್ನು ಹೊಲದಲ್ಲಿ ಒಂದು ಹಂತ ದಲ್ಲಿ ಬೆಳೆದಾಗ ಅವುಗಳನ್ನು ಕಟ್ ಮಾಡಿ ಚಕ್ಕಡಿಯ ಮೂಲಕವೋ ಟ್ರ್ಯಾಕ್ಟರ್ ಮೂಲಕವೋ ಅಥವಾ ಟ್ರಕ್ ಮೂಲಕವೋ ಅಲ್ಲಿಯೇ ಹತ್ತಿರದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸಿಕೊಡಲಾಗುತ್ತದೆ ನಮ್ಮ ದೇಶದಲ್ಲಿ ಹೆಚ್ಚಾಗಿ ಇವುಗಳನ್ನು ರೈತರು ತಮ್ಮ ಕೈಯಲ್ಲಿ ಕತ್ತರಿಸುತ್ತಾರೆ ಇನ್ನು ಹೊರದೇಶಗಳಲ್ಲಿ ಈಗ ದೊಡ್ಡ ದೊಡ್ಡ ಕತ್ತರಿಸುವ ಕಟಿಂಗ್ ಮಷಿನ್ ಗಳು ಕೂಡ ಬಂದಿವೆ ಈಗ ಭಾರತದಲ್ಲಿಯೂ ಕೂಡ ಇತ್ತೀಚಿಗೆ ಇವುಗಳನ್ನು ನೀವು ಕಾಣಬಹುದು ಹೀಗೆ ಸಕ್ಕರೆ ಕಾರ್ಖಾನೆಗೆ ಬಂದ ತಕ್ಷಣ ಮೊದಲು ಈ ಕಬ್ಬುಗಳನ್ನು.

WhatsApp Group Join Now
Telegram Group Join Now
See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಚಾಪರ್ ಮಿಷಿನ್ ನಲ್ಲಿ ಹಾಕಿ ಚಿಕ್ಕ ಚಿಕ್ಕ ತುಂಡುಗಳ ನ್ನಾಗಿ ಮಾಡುತ್ತಾರೆ ಇದನ್ನು ಚಾಪಿಂಗ್ ಪ್ರೋಸೆಸ್ ಎಂದು ಕೂಡ ಹೇಳಲಾಗುತ್ತದೆ ಇದೇ ಸಮಯದಲ್ಲಿ ಕಬ್ಬಿಗೆ ಹೊಂದಿರುವ ಕೆಲವು ಎಲೆಗಳನ್ನು ಮತ್ತು ಗಲೀಜುಗಳನ್ನು ಬೇರ್ಪಡಿಸಲಾಗುತ್ತದೆ ಈ ರೀತಿ ಚಿಕ್ಕ ಚಿಕ್ಕ ಕಬ್ಬುಗಳನ್ನು ಕತ್ತರಿಸಿ ಆಮೇಲೆ ಬಿಸಿ ನೀರಿನಿಂದ ಸರಿಯಾಗಿ ಕತ್ತರಿಸಿದ ಕಬ್ಬುಗಳನ್ನು ತೊಳೆಯುವ ಪ್ರೋಸೆಸ್ ಮಾಡಲಾಗುತ್ತದೆ ಇದನ್ನು ವಾಷಿಂಗ್ ಪ್ರೋಸೆಸ್ ಎಂದು ಹೇಳಲಾಗುತ್ತದೆ ಈ ರೀತಿ ಸ್ವಚ್ಛ ವಾದಂತಹ ಚಿಕ್ಕ ಚಿಕ್ಕ ಕಬ್ಬುಗಳ ತುಂಡನ್ನು ಕ್ರಷಿಂಗ್ ಮಷೀನ್ ಗೆ ಹಾಕಿ ಅವುಗಳಿಂದ ಹೆಚ್ಚಿನ ಮಟ್ಟದ ರಸವನ್ನು ತೆಗೆಯಲಾಗುತ್ತದೆ ಹೀಗೆ ಮಾಡುವುದರಿಂದ ದೊಡ್ಡ ದೊಡ್ಡ ಕಂಟೇನರ್ ಗಳಲ್ಲಿ ರಸವನ್ನು ಸಂಗ್ರಹಿಸ ಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">