ಪ್ಯಾನ್ ಇಂಡಿಯಾ ಸ್ಟಾರ್ ಲೆವೆಲ್ ಗೆ ಬೆಳೆಯುವ ತಾಖತ್ ಇರುವ ಈ ಪ್ರಮೋದ್ ಪಂಜು ಯಾರು ಗೊತ್ತಾ? ಇವರ ಪ್ರತಿಭೆ ಎಂತದ್ದು ಗೊತ್ತಾ ?

ಪ್ಯಾನ್ ಇಂಡಿಯಾ ಸ್ಟಾರ್ ಲೆವೆಲ್ ಗೆ ಬೆಳೆಯುವ ತಾಕತ್ ಇರುವ ಈ ಪ್ರಮೋದ್ ಪಂಜು ಯಾರು?ಈ ಪ್ರಮೋದ್ ಪಂಜು ಈವರೆಗೂ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳಾದರೂ ಕೂಡ ತಮ್ಮ ಗಟ್ಟಿ ಅಭಿನಯದ ಮೂಲಕ ಇವತ್ತಿನ ಸಮಕಾಲೀನ ನಟರಿಗೆ ಪೈಪೋಟಿ ನೀಡಬಲ್ಲಂತಹ ಪ್ರಮೋದ್ ಪಂಜು ಇವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರಿನವರು ಪ್ರಮೋದ್ ಪಂಜು ಅವರು ಮೊದಲಿನಿಂದಲೂ ಕೂಡ ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದವರು ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತರಾ ಗಿದ್ದಂತಹ ಪ್ರಮೋದ್ ಶಾಲಾ ದಿನಗಳಲ್ಲಿ ನಾಟಕ ಹಾಗೂ ಸಿನಿಮಾಗಳಲ್ಲಿ ಹೆಚ್ಚಿನ ಅಭಿ ರುಚಿಯನ್ನು ಹೊಂದಿದ್ದರು ಇವರು ಶಾಲಾ ದಿನಗಳಲ್ಲಿಯೇ ಹುಡುಗರ ತಂಡಗಳನ್ನು ಕಟ್ಟಿ ನಾಟಕಗಳನ್ನು ಅಭ್ಯಾಸವನ್ನು ಮಾಡುತ್ತಿದ್ದರು ಹಾಗೂ ಅಭ್ಯಾಸವನ್ನು ಮಾಡಿಸುತ್ತಿದ್ದರು ಸಿನಿಮಾಗಳಲ್ಲಿ ಬಹುತೇಕ ಎಲ್ಲಾ ಸಿನಿಮಾಗಳನ್ನು ನೋಡುತ್ತಿದ್ದಂತಹ ಪ್ರಮೋದ್ ಡಾಕ್ಟರ್ ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಶ್.

ಹೀಗೆ ಎಲ್ಲಾ ನಟರ ಸಿನಿಮಗಳಿಗೂ ಕೂಡ ಅಭಿಮಾನಿ ಯಾಗಿದ್ದರು ಗಂಧದಗುಡಿ ಮುತ್ತಿನ ಹಾರ ಇಂದ್ರಜಿತ್ ಪ್ರೇಮಲೋಕ ಹೀಗೆ ಎಲ್ಲ ಚಿತ್ರಗಳನ್ನು ನೋಡಿ ತಾವು ಆ ಹೀರೋಗಳ ರೀತಿ ಆಗಬೇಕು ಎಂದು ಈ ಪ್ರಮೋದ್ ಬಯಸಿದ್ದರು ಇವರು ತಮ್ಮ ಆರಂಭಿಕ ಶಿಕ್ಷಣ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಮಂಡ್ಯದಲ್ಲಿಯೇ ಮುಗಿಸಿದರು ಮುಂದೆ ಅವರು ಪಿಯು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುತ್ತಾರೆ ಈ ಸಮಯದಲ್ಲಿಯೇ ಅವರ ಪೋಷಕರು ಹಾಗೂ ಅವರ ಪರಿವಾರ ಬೆಂಗಳೂರಿನಲ್ಲಿಯೇ ಇದ್ದರು ಪಿಯು ಮುಗಿದ ಬಳಿಕ ತಕ್ಷಣ ಬಿಎಸ್ಸಿ ಬಯೋಟೆಕ್ ಪದವಿಯನ್ನು ಆರಿಸಿಕೊಂಡಂತಹ ಪ್ರಮೋದ್ ಅವರಲ್ಲಿ ನಟನೆಯ ತುಡಿತ ಇತ್ತು ಮುತ್ತಿನ ಹಾರ ಸಿನಿಮಾವನ್ನು ನೋಡಿ ತಾನು ಒಬ್ಬ ಮಿಲಿಟರಿ ಯೋಧ ಆಗಬೇಕು ಎಂದು ಪ್ರಮೋದ್ ನಿರ್ಧಾರ ಮಾಡಿದ್ದ ರಂತೆ ಇದಕ್ಕಾಗಿ ಪಿಯು ನಲ್ಲಿ ಇಂಜಿನಿಯರಿಂಗ್ ಸೀಟ್ ಸಿಕ್ಕಿದರು ಕೂಡ ಅದನ್ನು ಬಿಟ್ಟು ಬಂದಿದ್ದರು.

WhatsApp Group Join Now
Telegram Group Join Now

ಅದೇ ರೀತಿ ಗಂಧದಗುಡಿ ಚಿತ್ರ ನೋಡಿ ತಾನೊಬ್ಬ ರೇಂಜರ್ ಆಫೀಸರ್ ಆಗಬೇಕು ಎಂದು ನಿರ್ಧಾರ ಮಾಡಿ ಅದಕ್ಕಾಗಿ I F S ಮಾಡಲು ಬಿ ಎಸ್ಸಿ ಅಗತ್ಯ ಇದೆ ಎಂದು ಅವರು ಬಿಎಸ್ಸಿ ಪದವಿಯನ್ನು ಆರಿಸಿದ್ದರು.ಇದೆಲ್ಲದಕ್ಕೂ ಕನ್ನಡ ಚಿತ್ರಗಳೇ ಕಾರಣ ಪ್ರಮೋದ್ ತಮ್ಮ ಕೊನೆಯ ಸೆಮಿಸ್ಟರ್ ನಲ್ಲಿಯೂ ಕೂಡ ತಾವು ಸಿನಿಮಾರಂಗದಲ್ಲಿ ಏನಾದರೂ ಮಹತ್ತರ ಸಾಧನೆಯನ್ನು ಸಾಧಿಸಬೇಕು ಎಂದು ತೀರ್ಮಾನಿಸು ತ್ತಾರೆ ಬೆಂಗಳೂರಿನಲ್ಲಿಯೇ ಅವರ ಪೋಷಕರ ಮನೆ ಇದ್ದುದರಿಂದ ಆಶ್ರಯಕ್ಕೆ ಅಲ್ಲಿ ಅವರಿಗೆ ಕೊರತೆ ಇರಲಿಲ್ಲ ನಟನೆಗೆ ಇಳಿಯಬೇಕಾದರೆ ಮೊದಲು ಆಡಿಶನ್ ಗಳಿಗೆ ಭಾಗವಹಿಸಬೇಕು ಅಥವಾ ಸಿನಿಮಾ ಧಾರವಾಹಿಗಳಲ್ಲಿ ಅವರು ಕೊಟ್ಟಂತಹ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂಬುದನ್ನು ಪ್ರಮೋದ್ ಹಲವು ನಟರಿಂದ ಕಲಿತುಕೊಂಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]