ಕೆ ಆರ್ ಎಸ್ ಅಣೆಕಟ್ಟು ಕಟ್ಟಿದ ರೋಷಕ ಕಥೆ ವಿಶ್ವೇಶ್ವರಯ್ಯ ಸಿಟ್ಟಾಗಿದ್ದು ಯಾಕೆ ಗೊತ್ತಾ ? ನೀವು ಅರಿಯದ ಕೆ ಆರ್ ಎಸ್ ನ ನೈಜ ಕಥೆ ನೋಡಿ - Karnataka's Best News Portal

ಕೆ ಆರ್‌ಎಸ್‌ ಅಣೆಕಟ್ಟು ಕಟ್ಟಿದ ರೋಚಕ ಕಥೆ!?
ಕಾವೇರಿ ಕರ್ನಾಟಕದ ಜೀವನದಿ ಅದು ಮೈಸೂರು ಪ್ರಾಂತ್ಯದಲ್ಲಿ ಮೈಸೂರಿನ ಸುತ್ತಮುತ್ತ ಅಂದರೆ ಮಂಡ್ಯ ಹಾಸನ ಬೆಂಗಳೂರು ಕೊಡಗು ಜಿಲ್ಲೆಗಳಿಗೆ ಜೀವನದಿ ಆಗಿರುವುದೇ ಈ ಕಾವೇರಿ ಈ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅದ್ಭುತವಾದಂತಹ ಅಣೆಕಟ್ಟೆ ಈ ಕೃಷ್ಣರಾಜಸಾಗರ ಇದು ಮೈಸೂರು ಬದಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅದ್ಭುತವಾದ ಅಣೆಕಟ್ಟಾ ಗಿದೆ ಈ ಅಣೆಕಟ್ಟಿನ ಜೊತೆಗೆ ನಿರ್ಮಿಸಲಾದ ಬೃಂದಾವನ ಉತ್ತಮವಾದ ಪ್ರವಾಸಿ ಆಕರ್ಷಣೀಯ ಸ್ಥಳವಾಗಿದೆ ಕನ್ನಂಬಾಡಿ ಎಂಬುವುದು ಕಾವೇರಿ ತೀರದ ಒಂದು ಗ್ರಾಮ ಇಲ್ಲಿ ಕಣ್ವ ಋಷಿಗಳು ತಪಸ್ಸು ಮಾಡುತ್ತಿದ್ದರು ಎಂಬ ಇತಿಹಾಸವು ಕೂಡ ಇದೆ ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ ಕನ್ನಂಬಾಡಿ ಎಂಬ ಹೆಸರು ಬಂದಿದ್ದು ಎಂದು ಹೇಳಲಾಗುತ್ತದೆ ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶ ಏನು ಎಂದರೆ ನೀರಾವರಿ ಮತ್ತು ನೀರು ಸರಬರಾಜು.

ಈ ಅಣೆಕಟ್ಟು 8600 ಅಡಿ ಉದ್ದ ವಿದ್ದು 130 ಅಡಿ ಎತ್ತರ ಇದೆ ಇದಕ್ಕೆ ಸ್ವಯಂ ಚಾಲಿತ ಸ್ಲೂಸ್ ಗೇಟು ಗಳನ್ನು ಉಪಯೋಗಿಸದ ಪ್ರಪಂಚದ ಏಕೈಕ ಅಣೆ ಕಟ್ಟು ಎಂಬ ಹೆಗ್ಗಳಿಕೆ ಇದಕ್ಕೆ ಇದೆ ಕೃಷ್ಣರಾಜಸಾಗರ ಅಣೆಕಟ್ಟಿಗೆ ಮೂರು ಪ್ರಮುಖ ನಾಲೆಗಳು ಕೂಡ ಇದೆ ಅದರಲ್ಲಿ ಮುಖ್ಯವಾದದ್ದು ವಿಶ್ವೇಶ್ವರಯ್ಯ ನಾಲೆ 45 ಕಿ.ಮೀ ನಷ್ಟು ಉದ್ದಕ್ಕೆ ಇದೆ 32 ಕಿಲೋಮೀಟರ್ ಗಳ ಬಲದಂಡೆ ಮತ್ತು 21 ಕಿ.ಮೀ ಗಳ ಎಡ ದಂಡೆ ನಾಲೆ ಕೂಡ ಇದೆ 130 ಅಡಿ ಎತ್ತರದ ಅಣೆಕಟ್ಟಿಗೆ 111 ಅಡಿ ಆಳದಲ್ಲಿ ತಳಪಾಯ ಕೂಡ ಹಾಕಲಾಗಿದೆ ಅಂದರೆ ಈ ಅಣೆಕಟ್ಟು 4001 ಚದುರ ಮೈಲಿಯಷ್ಟು ಜಲಾಯನ ಭೂಮಿಯನ್ನು ಆಕ್ರಮಿಸಿಕೊಂಡಿದೆ.

ಮುಂಬೈನಲ್ಲಿ ಇಂಜಿನಿಯರಿಂಗ್ ಆಗಿದ್ದಂತಹ ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಅವರು 1909ರಲ್ಲಿ ಮೈಸೂರಿಗೆ ಕರೆಸಿಕೊಂಡರು ಅಷ್ಟರಾಗಲೇ ಕೃಷ್ಣರಾಜ ಅಂದರೆ ಕನ್ನಂಬಾಡಿ ಕಟ್ಟೆಯ ಕನಸು ಇಲ್ಲಿ ಚಿಗುರತೊಡಗಿತ್ತು ವಿಶ್ವೇಶ್ವರಯ್ಯ ಅವರು ಬಂದಿದ್ದು ಅದು ಸಕಾರ ಗೊಳ್ಳಲು ಮಾರ್ಗವಾಯಿತು 1911 ರಲ್ಲಿ ಕನ್ನಂಬಾಡಿ ಅಣೆಕಟ್ಟಿನ ಮೊದಲ ವರದಿ ಸಿದ್ಧವಾಯಿತು ಇದರ ಪ್ರಕಾರ ಮೈಸೂರಿನಿಂದ 12 ಮೈಲಿ ಮತ್ತು ಶ್ರೀರಂಗಪಟ್ಟಣದಿಂದ 9 ಮೈಲಿ ದೂರ ದಲ್ಲಿರುವ ಕನ್ನಂಬಾಡಿಯಲ್ಲಿ ಜಲಾಶಯವನ್ನು ನಿರ್ಮಿಸಲು ಯೋಜನೆ ಮಾಡಲಾಯಿತು ಈ ಯೋಜನೆಯಿಂದ 25 ಹಳ್ಳಿಗಳು 9750 ಎಕರೆ ನೀರಾವರಿ ಪ್ರದೇಶ 13295 ಎಕರೆ ಖುಷ್ಗಿ ಪ್ರದೇಶ ಹಾಗೂ 8500 ಎಕರೆ ಸರ್ಕಾರಿ ಭೂಮಿ ಮುಳುಗಡೆ ಯಾಗುತ್ತದೆ ಈ ಅಣೆಕಟ್ಟನ್ನು ನಿರ್ಮಾಣ ಮಾಡಲು ಆ ಕಾಲದಲ್ಲಿ ಮೊದಲ ಹಂತಕ್ಕೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *